World AIDS Day ವಿಶ್ವದಾದ್ಯಂತ ಜನರಲ್ಲಿ ಏಡ್ಸ್ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಡಿಸೆಂಬರ್ 01 ರಂದು ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅದರಂತೆ ಶಿವಮೊಗ್ಗ ಜಿಲ್ಲೆಯಾದ್ಯಂತ ಡಿ.1 ರಂದು ‘ಸಮುದಾಯಗಳು ಮುನ್ನಡೆಸಲಿ’ಎಂಬ ಘೋಷವಾಕ್ಯದಡಿ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಏಡ್ಸ್ ಕುರಿತು ಅರಿವು ಮೂಡಿಸಲು ಡಿ.12 ರಂದು ಬೆಳಿಗ್ಗೆ 9 ಕ್ಕೆ ಜಾಥಾ ಕಾರ್ಯಕ್ರಮವು ಗಣ್ಯರಿಂದ ಕೋರ್ಟ್ ಆವರಣದಲ್ಲಿ ಉದ್ಘಾಟನೆಗೊಂಡು ಗೋಪಿ ವೃತ್ತದ ಮೂಲಕ ಮುಂದುವರೆದು ಐಎಂಎ ಹಾಲ್‍ನಲ್ಲಿ ವೇದಿಕೆ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲಿದೆ. ಹಾಗೂ ಸಂಜೆ 5.30 ಕ್ಕೆ ಕ್ಯಾಂಡಲ್ ಲೈಟ್ ಜಾಥಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರಾರಂಭಿಸಿ, ಗೋಪಿ ವೃತ್ತದಲ್ಲಿ ಮುಕ್ತಾಯವಾಗುವುದು.
World AIDS Day ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ, ಪೊಲೀಸ್ ವರಿಷ್ಟಾಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ಕಾಲೇಜಿ ವಿದ್ಯಾರ್ಥಿಗಳು, ಮುಖ್ಯಸ್ಥರು, ಹೆಚ್‍ಐವಿ ನಿಯಂತ್ರಣದ ಬಗ್ಗೆ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು, ದಮನಿತ ಮಹಿಳೆಯರು, ರಕ್ತನಿಧಿ ಸಂಸ್ಥೆಯ ಸದಸ್ಯರು, ಸರ್ಕಾರೇತರ ಸಂಸ್ಥೆಗಳು, ಯುವಕ ಸಂಘಗಳ ಸದಸ್ಯರು ಭಾಗವಹಿಸುವರು.