Sports News ದಿ.ಗೌರಮ್ಮ ಬಸವೇಗೌಡ ಸ್ಮರಣಾರ್ಥ ರಾಣಾ ಸ್ಪೋಟ್ಸ್ ಕ್ಲಬ್ ಆಯೋಜಿಸಿದ್ದ ಸಿಪಿಎಲ್ ಟಿ-20 ಲೆದರ್‌ಬಾಲ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ಅಕ್ಷಯ್ ಬ್ಲಾಸ್ಟರ್ ತಂಡ ಪ್ರಥಮ ಸ್ಥಾನ ಪಡೆಯುವ ಮೂಲಕ ಜಯಶೀಲರಾದರು.
ಚಿಕ್ಕಮಗಳೂರು ನಗರದ ಜಿಲ್ಲಾ ಆಟದ ಮೈದಾನದಲ್ಲಿ ಕೊನೆಯ ದಿನವಾದ ಶುಕ್ರವಾರ ಪ್ರಥಮ ಸ್ಥಾನಗಳಿದ ಅಕ್ಷಯ್ ಬ್ಲಾಸ್ಟರ್ ತಂಡಕ್ಕೆ ಒಂದು ಲಕ್ಷ ನಗದು ಆಕರ್ಷಕ ಟ್ರೋಫಿ ಹಾಗೂ ದ್ವಿತೀಯ ಸ್ಥಾನಕ್ಕೆ ಗಳಿಸಿದ ವಸಿಷ್ಠ ಈಸ್ಪೋಟ್ಸ್ ತಂಡಕ್ಕೆ ಐವತ್ತು ಸಾವಿರ ನಗದು ಟ್ರೋಫಿಯನ್ನು ವೇದಿಕೆಯ ಗಣ್ಯರು ವಿತರಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ರಾಣಾ ಸ್ಪೋಟ್ಸ್ ಕ್ಲಬ್ ಗೌರವ ಕಾರ್ಯದರ್ಶಿ ಸುದರ್ಶನ್ ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗದಿಂದ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಉತ್ತಮವಾಗಿ ಆಟ ವಾಡಿದ್ದು ಮುಂದಿನ ಪಂದ್ಯಗಳಲ್ಲಿ ಇನ್ನೂ ಹೆಚ್ಚಿನ ಶ್ರಮವಹಿಸಿ ಜಯಶೀಲರಾಗಲಿ ಎಂದು ಹಾರೈಸಿದರು.
ಭಾರತ ದೇಶದ ವಲ್ಡ್ಕಪ್ ನಿರೀಕ್ಷೆಯಲ್ಲಿದ್ದ ನಾವುಗಳು ಪಂದ್ಯದ ಸೋಲು ಬೇಸರ ತಂದಿದೆ. ಆದರೆ ಚಿಕ್ಕಮಗಳೂರಿನ ಸಿಪಿಎಲ್ ನಮ್ಮದೇ ತಂಡಗಳು ವಿಜಯಶಾಲಿಯಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಕ್ರಿಕೇಟ್‌ನಲ್ಲಿ ಭಾಗವಹಿಸಿದ ಪಟುಗಳು ಅಪೈರ್ ಸೇರಿದಂತೆ ಇನ್ನಿತರಿಗೆ ಗೌರವ ತೋರುವ ರೀತಿಯಲ್ಲಿ ನಡೆದುಕೊ ಳ್ಳಬೇಕು ಎಂದು ಕಿವಿಮಾತು ಹೇಳಿದರು.
ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ ಲೆದರ್ ಪಂದ್ಯಾವಳಿಯಲ್ಲಿ ಮೊದಲೆಲ್ಲಾ ಶ್ರೀಮಂತರ ಮಕ್ಕಳು ಮಾತ್ರ ಭಾಗವಹಿಸಲಾಗುತ್ತಿತ್ತು. ಇದೀಗ ಪ್ರತಿಭೆ ಹೊಂದಿರುವ ಎಲ್ಲಾ ಪಟುಗಳು ಭಾಗವಹಿಸಿ ರುವುದು ಅತ್ಯಂತ ಖುಷಿಯ ವಿಚಾರ. ಈ ಮುಖಾಂತರ ಮುಂದಿನ ರಾಜ್ಯ ಹಾಗೂ ರಾಷ್ಟçಮದಲ್ಲಿ ಕ್ರೀಡಾಪಟು ಗಳು ಭಾಗವಹಿಸಿ ಯಶಸ್ಸು ಗಳಿಸಲಿ ಜೊತೆಗೆ ಜಿಲ್ಲಾಡಳಿತ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸ್ಪೋಟ್ಸ್ ಕ್ಲಬ್ ಖಜಾಂಚಿ ಗೋಪಾಲಕೃಷ್ಣ ಮಾತನಾಡಿ ಕೊನೆಯ ಅಂತಿಮ ಹಣಾಹಣಿಯಲ್ಲಿ ವಸಿಷ್ಟ ಈ ಸ್ಪೋಟ್ಸ್ ಬ್ಯಾಟಿಂಗ್ ನಡೆಸಿ ೨೦ ಓವರ್‌ಗಳಲ್ಲಿ 131ರನ್ನು ಕಲೆಹಾಕಿತು. ಇದನ್ನು ಬೆನ್ನತ್ತಿದ ಅಕ್ಷಯ್ ಬ್ಲಾಸ್ಟರ್ ತಂಡ 19.5 ಓವರ್‌ಗಳಲ್ಲಿ 132ರನ್ನು ಗಳಿಸಿ ವಿಜಯಪತಾಕೆ ಮುಡಿಗೇರಿಸಿಕೊಂಡಿತು ಎಂದು ಹೇಳಿದರು.
ಉತ್ತಮ ಬ್ಯಾಟ್ಸ್ಮೆನ್ ಹಾಗೂ ವಿಕೇಟ್ ಕೀಪರ್ ಪ್ರಶಸ್ತಿಯನ್ನು ಅಜರುದ್ದೀನ್, ಫಿಲ್ಡರ್ ಆಗಿ ರಾಜೇಶ್, ಸರಣಿ ಪುರುಷೋತ್ತಮ ಪ್ರಶಸ್ತಿ ಶ್ರೇಯಂಕ್ ಸಾಗರ್ ಪಡೆದುಕೊಂಡರು. ಇದೇ ವೇಳೆ ಕ್ರಿಕೇಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.
Sports News ಈ ಸಂದರ್ಭದಲ್ಲಿ ಸಿಪಿಎಲ್ ಕಮಿಟಿಯ ಎಲ್ಲಾ ಸದಸ್ಯರು ಹಾಜರಿದ್ದರು.