Sunday, December 14, 2025
Sunday, December 14, 2025

B. Y. Raghavendra ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ಎಲ್ಲರಿಗೂ ತಲುಪಿಸುವುದು ಭಾರತ್ ವಿಕಸಿತ್ ಯಾತ್ರೆಯ ಉದ್ದೇಶ- ಸಂಸದ ರಾಘವೇಂದ್ರ

Date:

B. Y. Raghavendra ಕೃಷಿ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ದಿ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವುದು ‘ವಿಕಸಿತ ಸಂಕಲ್ಪ’ ಯಾತ್ರೆಯ ಉದ್ದೇಶವಾಗಿದೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ನುಡಿದರು.

ಕೆನರಾ ಲೀಡ್ ಬ್ಯಾಂಕ್ ಆವರಣದಲ್ಲಿ ಇಂದು ಜಿಲ್ಲೆಯಾದ್ಯಂತೆ ಸಂಚರಿಸಲಿರುವ ‘ವಿಕಸಿತ ಸಂಕಲ್ಪ ಯಾತ್ರೆ’ಯ ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಅವರು ಚಾಲನೆ ನೀಡಿ ಮಾತನಾಡಿದರು.

ಬುಡಕಟ್ಟು ನಾಯಕರಾದ ಬಿರ್ಸಾ ಮುಂಡಾರವರ ಜನ್ಮದಿನವಾದ ನವೆಂಬರ್ 15 ರಂದು ಜಾರ್ಕಂಡ್‍ನಲ್ಲಿ ವಿಕಸಿತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಾಯಿತು. ಕೇಂದ್ರ ಸರ್ಕಾರದ ಎಲ್ಲ ಯೋಜನೆ-ಕಾರ್ಯಕ್ರಮಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಿಳಿಸುವುದು ಹಾಗೂ ತಲುಪಿಸುವುದು ವಿಕಸಿತ ಸಂಕಲ್ಪ ಯಾತ್ರೆಯ ಮುಖ್ಯ ಉದ್ದೇಶವಾಗಿದ್ದು, ಎಲ್ಲ ಅರ್ಹರು ಇದರ ಸದುಪಯೋಗ ಪಡೆಯಬೇಕು.

ನಮ್ಮ ಜಿಲ್ಲೆಯಲ್ಲಿ 2 ವಿಕಸಿತ ಸಂಕಲ್ಪ ಯಾತ್ರೆಯ ವಾಹನಗಳು 262 ಗ್ರಾ.ಪಂ ಗಳಲ್ಲಿ 2024 ರ ಜ.25 ರವರೆಗೆ ಸಂಚರಿಸಿ, ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ನೀಡಲಿವೆ. ಹಾಗೂ ಸ್ಥಳದಲ್ಲೇ ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಗುದು. ಕ್ವಿಜ್ ಕಾರ್ಯಕ್ರಮ, ‘ಮೇರಾ ಕಹಾನಿ ಮೇರಾ ಝುಬಾನಿ’ ಯಶೋಗಾಥೆ, ಡ್ರೋನ್ ಮೂಲಕ ಕೃಷಿ ಜಮೀನಿಗಳುಗೆ ನ್ಯಾನೋ ಯೂರಿಯಾ ಗೊಬ್ಬರ ಸಿಂಪಡಣೆ ಪ್ರಾತ್ಯಕ್ಷಿಕೆ ಹೀಗೆ ಫಲಾನುಭವಿಗಳನ್ನು ತಲುಪುವ ಮೂಲಕ ಸರ್ಕಾರ ಮತ್ತು ಜನರ ನಡುವಿನ ಅಂತರ ಕಡಿಮೆ ಮಾಡಿ ಕೊಂಡಿಯಾಗಿ ಕಾರ್ಯ ನಿರ್ವಹಿಸಲಿದೆ.

B. Y. Raghavendra ದೇಶದಾದ್ಯಂತ 3 ಸಾವಿರ ವಾಹನಗಳು ವಿಕಸಿತ ಸಂಕಲ್ಪ ಯಾತ್ರೆಯನ್ನು 2 ತಿಂಗಳ ಕಾಲ ನಡೆಸಿ 25 ಲಕ್ಷ ಗ್ರಾ.ಪಂ ಮತ್ತು 15 ಸಾವಿರ ನಗರ ಪ್ರದೇಶಗಳಲ್ಲಿ ಸಂಚಾರ ನಡೆಸಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಿ ಉಪಯೋಗ ನೀಡಲಿದ್ದು, ಲೀಡ್ ಬ್ಯಾಂಕುಗಳು ಈ ಯಾತ್ರೆಯ ಜವಾಬ್ದಾರಿ ವಹಿಸಿಕೊಂಡು ಸಹಕರಿಸಲಿವೆ ಎಂದರು.

ಮಾನ್ಯ ಪ್ರಧಾನ ಮಂತ್ರಿಯವರು ಗರೀಬಿ ಕಲ್ಯಾಣ ಯೋಜನೆ ಜಾರಿಗೆ ತಂದು ಅನುಕೂಲ ಮಾಡಿಕೊಟ್ಟಿದ್ದಾರೆ. ತಾಯಿಂದಿರ ಆರೋಗ್ಯ ದೃಷ್ಟಿಯಿಂದ ಉಜ್ವಲ್ ಯೋಜನೆ ಜಾರಿಗೊಳಿಸಿದ್ದು, ಇನ್ನೂ 10 ಲಕ್ಷ ಕುಟುಂಬಕ್ಕೆ ಈ ಯೋಜನೆಯನ್ನು ವಿಸ್ತರಿಸಲಿದ್ದಾರೆ. ಈ ಯಾತ್ರೆಯ ವೇಳೆ ಫಲಾನುಭವಿಗಳು ಉಜ್ವಲ್ ಯೋಜನೆ, ಕೃಷಿ ಸಮ್ಮಾನ್ ಇತರೆ ಯೋಜನೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ ಅವರು ಎಲ್ಲರೂ ಸೇರಿ ಈ ಯಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.

ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ನಮ್ಮ ಜನತೆಗೆ ಶಕ್ತಿ ತುಂಬಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಪ್ರಧಾನಿಯವರು ರೈತನಾಗಿ, ಒಬ್ಬ ತಾಯಿಯ ಜಾಗದಲ್ಲಿ ನಿಂತು ಉತ್ತಮ ಯೋಜನೆಗಳನ್ನು ತಂದು ದೇಶವನ್ನು ಉನ್ನತ ಸ್ಥಾನಕ್ಕೆ ತಂದಿದ್ದಾರೆ. ಗ್ರಾಮೀಣ, ಸಾಂಸ್ಕoತಿಕ ಭಾರತವನ್ನು ಗಮನದಲ್ಲಿರಿಸಿಕೊಂಡು ಅವರು ಸಂಕಲ್ಪ ಸಿದ್ದಿಗೊಳಿಸಿದ್ದಾರೆ. ಈ ಯಾತ್ರೆಯು 262 ಗ್ರಾಮ ಪಂಚಾಯ್ತಿಯಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿದ್ದು ಜನರು ಉಪಯೋಗ ಪಡೆಯಬೇಕು ಎಂದರು.

ಲೀಡ್ ಬ್ಯಾಂಕ್ ಡಿಜಿಎಂ ದೇವರಾಜ್ ಮಾತನಾಡಿ, ವಿಕಸಿಕ ಸಂಕಲ್ಪ ಯಾತ್ರೆಯ 2 ಎಲ್‍ಇಡಿ ವಾಹನಗಳು ಜಿಲ್ಲೆಯ 262 ಗ್ರಾ.ಪಂ ಗಳನ್ನು ಸಂಚರಿಸಲಿದೆ. ಎರಡು ವಾಹನ ಸೇರಿ ದಿನಕ್ಕೆ 4 ಗ್ರಾ.ಪಂ ಸಂಚಾರ ಮಾಡಲಿದ್ದು 2024 ರ ಜ.25 ರವರೆಗೆ ಯಾವುದೇ ರಜೆ ಇಲ್ಲದೆ ಸಂಚಾರ ಮಾಡಿ ಸುಮಾರು 300 ಯೋಜನೆಗಳ ಕುರಿತು ಮಾಹಿತಿ ನೀಡಿ ಅರ್ಜಿಗಳನ್ನು ಸ್ವೀಕರಿಸಲಿವೆ. ಸಂಬಂಧಿಸಿದ ನೋಡಲ್ ಅಧಿಕಾರಿಗಳು ಇದರ ಉಸ್ತುವಾರಿ ನೋಡಿಕೊಳ್ಳುವರೆಂದು ತಿಳಿಸಿದರು.

ಇದೇ ವೇಳೆ ಸಂಸದರು ವಿಕಸಿತ ಸಂಕಲ್ಪ ಯಾತ್ರೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಹಾಗೂ ಡ್ರೋನ್ ಮೂಲಕ ಕೃಷಿಭೂಮಿಗೆ ನ್ಯಾನೋ ಯೂರಿಯಾ ಗೊಬ್ಬರ ಸಿಂಪಡಣೆ ಪ್ರಾತ್ಯಕ್ಷಿಕೆಗೆ ರಿಮೋಟ್ ಮೂಲಕ ಚಾಲನೆ ನೀಡಿದರು.

ಯೂನಿಯನ್ ಬ್ಯಾಂಕ್ ಡಿಜಿಎಂ ರಾಜಮಣಿ, ಬ್ಯಾಂಕ್ ಆಫ್ ಬರೋಡ ಎಜಿಎಂ ರವಿ, ಎಸ್‍ಬಿಐ ಡಿಜಿಎಂ ವಿಜಯ್ ಸಾಯಿ, ನಬಾರ್ಡ್ ಬ್ಯಾಂಕ್‍ನ ಶರದ್, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಡಿಎಂ ಶಾರದಾ, ಲೀಡ್ ಬ್ಯಾಂಕ್ ಮ್ಯಾನೇಜರ್ ಅಮರನಾಥ್, ಇತರೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...