Saturday, December 6, 2025
Saturday, December 6, 2025

Shivamogga City Corporation ಶಿವಮೊಗ್ಗ ಹೊಸಮನೆ ಬಡಾವಣೆ ಸಮೀಪದಲ್ಲಿ ಶ್ರೀಚೌಡೇಶ್ವರಿ ಸಭಾಂಗಣ ಉದ್ಘಾಟನೆ

Date:

Shivamogga City Corporation ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಪಕ್ಕದ ರಸ್ತೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರ ಅನುದಾನದಲ್ಲಿ ನಿರ್ಮಾಣಗೊಂಡಿರುವ ಶ್ರೀ ಚೌಡೇಶ್ವರಿ ಸಭಾಂಗಣವನ್ನು ಇಂದು ಪಾಲಿಕೆ ಸದಸ್ಯರಾದ ಶ್ರೀಮತಿ ರೇಖಾ ರಂಗನಾಥ್ ಬಡಾವಣೆಯ ನಿವಾಸಿಗಳೊಂದಿಗೆ ಉದ್ಘಾಟಿಸಿದರು.

ನಂತರ ಮಾತನಾಡಿದ ರೇಖಾ ರಂಗನಾಥ್ ರವರು ಈಗಾಗಲೇ ಹೊಸಮನೆ ಬಡಾವಣೆಯಲ್ಲಿ ಪಾಲಿಕೆ ಸದಸ್ಯರ ಅನುದಾನದಲ್ಲಿ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಶೇ. 90ರಷ್ಟು ಹೆಚ್ಚು ಕಾಮಗಾರಿಗಳನ್ನು ಕಳೆದ ಐದು ವರ್ಷದಲ್ಲಿ ಪೂರ್ಣಗೊಳಿಸಿ ಜನತೆಯ ಅನುಕೂಲಕ್ಕೆ ಅನುವು ಮಾಡಿಕೊಡಲಾಗಿದೆ ಎಂಬ ತೃಪ್ತಿಯಾಗಿದೆ. ಇದರ ಜೊತೆಗೆ ಇಂದು ಉದ್ಘಾಟನೆಗೊಂಡಿರುವ ಹೊಸಮನೆಯ ಚೌಡೇಶ್ವರಿ ದೇವಿ ಸಭಾಂಗಣವು ಸ್ಥಳೀಯರಿಗೆ ಹಬ್ಬ ಹರಿದಿನಗಳು, ಶಬರಿಮಲೆ ಯಾತ್ರೆ ಹೊರಡುವ ಸ್ವಾಮಿಗಳಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ನೆರವೇರಿಸಲು ಪಾಲಿಕೆ ಅನುದಾನದಲ್ಲಿ ನಿರ್ಮಾಣ ಮಾಡಿದ್ದು ಸಾರ್ವಜನಿಕರು ಸ್ವಚ್ಛತೆಯನ್ನು ಕಾಪಾಡುವುದರೊಂದಿಗೆ ಸದುಪಯೋಗಪಡಿಸಿಕೊಳ್ಳಬೇಕು. ಈ ಸಭಾಂಗಣದ ಹತ್ತಿರ ನೀರಿನ ವ್ಯವಸ್ಥೆಗಾಗಿ ಹೊಸ ಬೋರ್ ವೆಲ್ ಕೊರಿಸಲು ಅನುದಾನವನ್ನು ಸಿದ್ಧಪಡಿಸಲಾಗಿದೆ. ಕೆಲವೇ ದಿನಗಳಲ್ಲಿ ಆ ಕಾರ್ಯ ಪೂರ್ಣಗೊಳ್ಳುವುದು ಎಂದು ತಿಳಿಸಿದರು.

Shivamogga City Corporation ಸಂದರ್ಭದಲ್ಲಿ ಯುವ ಮುಖಂಡರಾದ ಕೆ.ರಂಗನಾಥ್ ಬಡಾವಣೆಯ ಪ್ರಮುಖರಾದ ರವಿ , ಆನಂದ್ ಮೂರ್ತಿ, ಶಂಕರ್ ,ರಾಮಾಂಜನಿ, ಶಿವಪ್ರಸಾದ್, ಕಿರಣ್, ಚೌಡಪ್ಪ, ರಾಮಕೃಷ್ಣ, ಶಿವಮ್ಮ, ಕೆಂಪಮ್ಮ, ಲೋಕಮ್ಮ, ಕೃಷ್ಣಮೂರ್ತಿ ಇತರರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...