Friday, December 5, 2025
Friday, December 5, 2025

Marathon competition ಮಲೆನಾಡು ಸೌಂದರ್ಯ ಪರಿಚಯಿಸುವುದು ಮ್ಯಾರಥಾನ್ ಸ್ಪರ್ಧೆ ಆಶಯ

Date:

Marathon competition ಮಲೆನಾಡಿನ ಸೊಬಗು ಹಾಗೂ ಸೌಂದರ್ಯವನ್ನು ರಾಷ್ಟçದಾದ್ಯಂತ ಪರಿಚಯಿಸುವ ನಿಟ್ಟಿನಲ್ಲಿ ವಿವಿಧ ರಾಜ್ಯಗಳಿಂದ ಮ್ಯಾರಥಾನ್ ಸ್ಪರ್ಧಾರ್ಥಿಗಳನ್ನು ಒಂದೆಡೆ ಸೇರಿಸಿ ಸ್ಪರ್ಧೆ ಆಯೋ ಜಿಸಲಾಗಿದೆ ಎಂದು ಗ್ರಿಮ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಆನಂದ್ ಹೇಳಿದರು.

ಚಿಕ್ಕಮಗಳೂರಿನ ತಾಲ್ಲೂಕಿನ ಮಲ್ಲಂದೂರಿನ ಗವನ್‌ಖಾನ್ ಎಸ್ಟೇಟ್‌ನಲ್ಲಿ ಜಿಮ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ದಿ ಇಂಟರ್ ನ್ಯಾಷನಲ್ ಮಲ್ನಾಡ್ ಅಲ್ಟ್ರಾ ಏಳನೇ ವರ್ಷದ ಮ್ಯಾರಥಾನ್ ಸ್ಪರ್ಧೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಅತಿಹೆಚ್ಚು ಮಲೆನಾಡು ಹಾಗೂ ಮಳೆಬೀಳುವ ಪ್ರದೇಶವನ್ನು ಒಳಗೊಂಡಿರುವ ಕರ್ನಾಟಕವನ್ನು ಹಾಗೂ ಶುದ್ಧಗಾಳಿ, ನದಿಗಳಿಗೆ ನೀರೂಣಿಸುವ ಮೂಲ ಉಗಮ ಸ್ಥಾನವಾದ ಚಿಕ್ಕಮಗಳೂರು ಜಿಲ್ಲೆಯಾಗಿದೆ. ಇಷ್ಟೆಲ್ಲಾ ಸೌಂದರ್ಯಗಣಿ ಹೊತ್ತಿರುವ ರಾಜ್ಯ ಹಾಗೂ ಜಿಲ್ಲೆಯನ್ನು ಇಡೀ ಜಗತ್ತಿಗೆ ಪರಿಚಯಿಸುವುದೇ ಸ್ಪರ್ಧೆಯ ಮೂಲ ಉದ್ದೇಶವಾಗಿದೆ ಎಂದರು.

ಪ್ರಸ್ತುತ ವಾತಾವರಣದಲ್ಲಿ ಮನುಷ್ಯನಿಗೆ ಉತ್ತಮ ಗಾಳಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಅತಿಮುಖ್ಯ ವಾಗಿದೆ. ಆ ಸಾಲಿನಲ್ಲಿ ಚಿಕ್ಕಮಗಳೂರು ಪರಿಪೂರ್ಣವಾಗಿದೆ ಎಂದ ಅವರು ದೇಶದ ಮಹಾರಾಷ್ಟç, ಗೋವಾ, ಕೇರಳ, ತಮಿಳುನಾಡು, ದೆಹಲಿ, ಹಿಮಚಲಪ್ರದೇಶ, ಸಿಕ್ಕಿಂ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ರಾಜ್ಯಗಳ ಮ್ಯಾರಥಾನ್ ಸ್ಪರ್ಧಿಗಳನ್ನು ಕರೆತಂದು ಇಲ್ಲಿನ ಬೆಟ್ಟಗುಡ್ಡ ಪರಿಚಯಿಸುವ ಮೂಲಕ ಸ್ಪರ್ಧೆ ಆಯೋಜಿಸಿದೆ ಎಂದರು.

ಕಳೆದ ಏಳು ವರ್ಷದಿಂದ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸಿದ್ದು ಜಿಲ್ಲೆಯ ಮೂಡಿಗೆರೆ, ಬೀರೂರು, ದತ್ತಪೀಠ ಹಾಗೂ ಇದೀಗ ಮಲ್ಲಂದೂರಿನಲ್ಲಿ ನಾಲ್ಕನೇ ಕಾರ್ಯಕ್ರಮ ರೂಪಿಸಲಾಗಿದೆ. ಸ್ಪರ್ಧೆಯಲ್ಲಿ 35 ಮಂದಿ ಇಂಟರ್‌ನ್ಯಾಷನಲ್ ರನ್ರ‍್ಸ್ಗಳು, ಕರ್ನಾಟಕದಲ್ಲಿ 220 ಮಂದಿ ಸೇರಿದಂತೆ ಒಟ್ಟು 600 ಸ್ಪರ್ಧಾರ್ಥಿಗಳು ಭಾಗ ವಹಿಸಿದ್ದಾರೆ ಎಂದರು.

ಮ್ಯಾರಥಾನ್ ಸ್ಪರ್ಧೆ ಪ್ರಾಯೋಜಕ ಸ್ವರೂಪ್‌ಗೌಡ ಮಾತನಾಡಿ ದೇಶ ಮತ್ತು ವಿದೇಶಗಳಲ್ಲಿ ಮ್ಯಾರಥಾನ್ ಸ್ಪರ್ಧೆ ಅತ್ಯಂತ ಆಕರ್ಣೀಯವಾಗಿದೆ. ಹೆಚ್ಚಾಗಿ ಪರಿಸರವನ್ನು ಸವಿಯುವ ಸಲುವಾಗಿ ಈ ಸ್ಪರ್ಧೆಯನ್ನು ಆಯೋ ಜಿಸಿದ್ದು ಇಂದು ಅತಿಹೆಚ್ಚು ಸಂಖ್ಯೆಯಲ್ಲಿ ಪರಿಸರಪ್ರಿಯರು ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಗ್ರೀಮ್ ಸಂಸ್ಥೆ ನಿರ್ದೇಶಕ ಶ್ಯಾಮ್ ಮಾತನಾಡಿ ಇಂದಿನ ಮ್ಯಾರಥಾನ್‌ನಲ್ಲಿ ಮೂರು ವಿಭಾಗಗಳಾಗಿ ವಿಂಗ ಡಿಸಲಾಗಿದೆ. 30 ಕಿ.ಮೀ., 50 ಕಿ.ಮೀ ಹಾಗೂ 100 ಕಿ.ಮೀ. ಸ್ಪರ್ಧೆಯನ್ನು ಆಯೋಜಿಸಿದ್ದು ಭಾಗವಹಿಸಿದ ಪ್ರತಿಯೊಬ್ಬರಿಗೆ ಪದಕ, ಪ್ರಮಾಣವನ್ನು ವಿತರಿಸಲಾಗುವುದು ಎಂದರು.

ಮಹಾರಾಷ್ಟ್ರ ಮ್ಯಾರಥ್ಯಾನ್ ಸ್ಪರ್ಧಾರ್ಥಿ ಸಾಗರ್ ಮಾತನಾಡಿ ಮಲೆನಾಡು ಬೆಟ್ಟಗುಡ್ಡಗಳಲ್ಲಿ ಸ್ಪರ್ಧೆಯು ರೋಮಾಂಚಕಾರಿಯಾಗಿದೆ. ದಾರಿಯುದ್ದಕ್ಕೂ ಕಣ್ತುಬಿಕೊಳ್ಳುವ ಗಗದತ್ತೇರ ಮರಗಳು, ಬೆಟ್ಟಗುಡ್ಡ ಹಾಗೂ ಅಲ್ಲಲ್ಲಿ ಹರಿಯುವ ಸಣ್ಣಪುಟ್ಟ ಜಲಪಾತಗಳು ಪ್ರೇಕ್ಷಣಿಯವಾಗಿದೆ. ಇದು ಭೂಲೋಕ ಸ್ವರ್ಗದಂತೆ ಎಲ್ಲರನ್ನು ಸೆಳೆಯುತ್ತಿದೆ ಎಂದು ಅಭಿಪ್ರಾಯಿಸಿದರು.

ಇನ್ನೋರ್ವ ಬೆಂಗಳೂರಿನ ಸ್ಪರ್ಧಾರ್ಥಿ ಸಿಂಚನ ಮಾತನಾಡಿ ಬೆಂಗಳೂರಿನoತಹ ಮಹಾನಗರ ಗಳಲ್ಲಿ ಇಂತಹ ಸ್ಪರ್ಧೆ ನಡೆಸಲು ಹಲವಾರು ನಿಯಮಗಳಿದ್ದು, ಆ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಜನತೆ ಅತ್ಯಂತ ಬೆಂಬಲಿತವಾಗಿ ನಡೆಸಲು ಅವಕಾಶ ಮಾಡಿಕೊಟ್ಟಿರುವುದು ಹೆಮ್ಮೆಯ ವಿಷಯ ಜೊತೆಗೆ ಆಯೋಜಕರು ಸೂಕ್ತ ರೀತಿಯಲ್ಲಿ ನಿರ್ವಹಿಸಿರುವುದಕ್ಕೆ ದನ್ಯವಾದ ತಿಳಿಸಿದರು.

Marathon competition ಈ ಸಂದರ್ಭದಲ್ಲಿ ವಿವಿಧ ರಾಜ್ಯದ ಹಲವಾರು ಕ್ರೀಡಾಪಟುಗಳು, ಗ್ರಿಮ್ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಸುತ್ತಮುತ್ತಲಿನ ಎಸ್ಟೇಟ್ ಮಾಲೀಕರು ಸೇರಿದಂತೆ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...