Aam Admi Party ಬಂಡವಾಳ ಶಾಹಿಗಳ ಲಕ್ಷಗಟ್ಟಲೇ ಸಾಲಮನ್ನಾ ಮಾಡಿ ಬಡಪಾಯಿ ರೈತರ ಸಾಲಗಳಿಗೆ ಕಿರುಕುಳ ನೀಡಿ ಆತ್ಮಹತ್ಯೆ ಶರಣಾಗುವ ಪರಿಸ್ಥಿತಿ ತಂದೊಡ್ಡಿರುವ ಸರ್ಕಾರಗಳ ಧೋರಣೆ ವಿರು ದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಆಮ್‌ಆದ್ಮಿ ಪಕ್ಷದ ಜಿಲ್ಲಾ ಮಾಧ್ಯಮ ಉಸ್ತುವಾರಿ ಡಾ|| ಕೆ.ಸುಂದರಗೌಡ ಎಚ್ಚರಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ಮಾರಕ ರೈತರ ಬದುಕನ್ನು ಕಟ್ಟಿಕೊಡಲು ಬ್ಯಾಂಕ್ ಸಾಲಗಳು ಇದೀಗ ಬದುಕನ್ನೇ ನಾಶವಾಗಿದೆ. ಜೊತೆಗೆ ಮಾರಕ ಬ್ಯಾಂಕ್ ಕಾಯಿದೆಯಿಂದ ರೈತರ ಜೀವನ ಆತ್ಮಹತ್ಯೆ ಶರಣಾಗುತ್ತಿದ್ದು ಸಾಲದ ಶೂಲವನ್ನು ರೈತರ ಮೇಲೆ ಪ್ರಯೋಗಿಸಿ ಬದುಕು ನುಚ್ಚು ನೂರಾಗಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರ ಬದುಕನ್ನೇ ಬೀದಿಗೆಳೆಯುವ ಸರ್ಕಾರದ ನೀತಿ ಹಾಗೂ ಬ್ಯಾಂಕಿನ ಕಾಯ್ದೆ ವಿರುದ್ಧ ಯಾವುದೇ ರಾಜಕೀಯ ಪಕ್ಷಗಳು ಪ್ರತಿಭಟಿಸದೇ ಮೂಖಪ್ರೇಕ್ಷಕರಾಗಿರುವ ಪರಿಣಾಮ ರೈತರು ಆತ್ಮಹತ್ಯೆಗೆ ಶರಣಾಗತಿ ಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉದ್ಯಮಿಗಳ ಸಾವಿರಾರು ಕೋಟಿ ಸಾಲಮನ್ನಾ ಮಾಡಿರುವ ಸರ್ಕಾರಕ್ಕೆ ಭೂಮಿ ತಾಯಿ ಸೇವೆ ಸಲ್ಲಿಸುವ ರೈತರ ಸಾಲ ಮತ್ತು ಕಾರ್ಮಿಕರ ಶ್ರೇಯೋಭಿವೃದ್ದಿಗೆ ದುಡಿದವರನ್ನು ಕಾಲಿನ ಕಸಕ್ಕಿಂತ ಕೀಳಾಗಿ ಕಾಣುತ್ತಿರುವುದು ದುದೈರ್ವ. ಉಚಿತ ಸೇವೆ ನೀಡುವ ಸರ್ಕಾರಗಳು ಸಾಲಸುಳಿಯಲ್ಲಿದೆ. ಅದಲ್ಲದೇ ಗುಣಮಟ್ಟದ ವಿದ್ಯುತ್ ಚ್ಯಕ್ತಿ ನೀಡದೇ ರೈತರು ಫಸಲುಗಳು ನೆಲಕಚ್ಚಿವೆ ಎಂದು ಹೇಳಿದ್ದಾರೆ.
Aam Admi Party ತಕ್ಕಮಟ್ಟಿನ ಬೆಳೆ ಲಭಿಸಿದರೆ ಕೂಡಾ ಸಮರ್ಪಕ ಬೆಲೆ ದೊರೆಯದೇ ಅಸಹಾಯಕರಾಗಿರುವ ಸಂದರ್ಭ ದಲ್ಲೇ ಬ್ಯಾಂಕಿನ ಸಾಲಸುಳಿಯಲ್ಲಿ ನರಕ ಅನುಭವಿಸುವಂತಾಗಿದೆ. ಇದರಿಂದ ಸಂತೋಷವನ್ನು ಕಾಣದ ರೈತಾಪಿ ವರ್ಗಕ್ಕೆ ಮಾರಕವಾದ ಬ್ಯಾಂಕ್ ಕಾಯಿದೆಗೆ ತಡೆಯಾಜ್ಞೆ ಪಡೆದು ರೈತರ ಸಾಲವನ್ನು ಪುನಶ್ಚೇತನದಡಿಯಲ್ಲಿ ರೀ ಶೆಡ್ಯೂಲ್ ಮಾಡಿಸಿ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.