Wednesday, October 2, 2024
Wednesday, October 2, 2024

Kencharayaswamy ಶ್ರೀಕೆಂಚರಾಯಸ್ವಾಮಿ ದೇವಾಲಯ ಕಳಸಾರೋಹಣ ಸಮಾರಂಭ

Date:

Kencharayaswamy ಮತ್ತಾವರ ಗ್ರಾಮದ ನೂರಾರು ಮಹಿಳೆಯರು ಕಳಸವನ್ನೊತ್ತುಕೊಂಡು ಕೆಂಚರಾಯಸ್ವಾಮಿಗೆ ದೇವಾಲಯ ಸನ್ನಿಧಿಯಲ್ಲಿರಿಸಿ ವಿಶೇಷ ಅಭಿಷೇಕ ಹಾಗೂ ಪೂಜಾ ಕೈಂಕಾರ್ಯ ಗಳ ಬಳಿಕ ಶ್ರೀ ಬಸವನಾಗೀದೇವ ಶರಣರ ಸಮ್ಮುಖದಲ್ಲಿ ಕಳಸರೋಹಣ ಕಾರ್ಯಕ್ರಮವು ಅತ್ಯಂತ ಶ್ರದ್ದಾಭಕ್ತಿಯಿಂದ ಗ್ರಾಮ ದಲ್ಲಿ ಶುಕ್ರವಾರ ನೆರವೇರಿತು.

ಗ್ರಾಮದ ಕೆರೆಯಿಂದ ಗಂಗಾಪೂಜೆ ನಡೆಸಿ 108 ಕಳಸವನ್ನು ಮಹಿಳೆಯರು ಹೊತ್ತುತಂದು ಕೆಂಚರಾಯ ಸ್ವಾಮಿ ಸನ್ನಿಧಾನದಲ್ಲಿರಿಸಲಾಯಿತು.

ಕೊನೆಯ ದಿನವಾದ ಕೆಂಚರಾಯಸ್ವಾಮಿ ಲೋಕಾರ್ಪಣೆ ಕರ‍್ಯಕ್ರಮ ದಲ್ಲಿ ಶ್ರೀ ಕೆಂಚರಾಯ, ಗುಂಡಿನಮ್ಮ, ಹರಳಿಮರದಮ್ಮ ಹಾಗೂ ಲೋಕದಮ್ಮನವರ ಅಡ್ಡೆಯಲ್ಲಿ ಕುಳ್ಳಿರಿಸಿ ಹಳ್ಳಿವಾದ್ಯಗಳ ಮೂಲಕ ಯುವಕರು ಹೊತ್ತು ಗ್ರಾಮದ ಸುತ್ತಮುತ್ತಲು ಮೆರವಣಗೆ ನಡೆಸಿದರು.

ಇಡೀ ಗ್ರಾಮವೇ ಶ್ರೀ ಕೆಂಚರಾಯ ಸ್ವಾಮಿ ದೇವಾಲಯ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾದರು. ದೇವಾಲಯ ಗೋಪುರ ತುದಿಗೆ 4.5 ಅಡಿಯ ಒಂದು ಕಳಸ ಹಾಗೂ ಕೆಳಗೋಪುರಕ್ಕೆ 1.5 ಅಡಿ ಮೂರು ಕಳಸ ಪ್ರತಿಷ್ಟಾಪನೆಗೊಂಡಂತೆ ಗ್ರಾಮಸ್ಥರು ಪಟಾಕಿ ಸಿಡಿಸಿ ಶ್ರೀ ಕೆಂಚರಾಯಸ್ವಾಮಿಗೆ ಜೈಕಾರ ಹಾಕುವ ಮೂಲಕ ಭಕ್ತಿಪರವಶರಾದರು.

ಈ ವೇಳೆ ಮಾತನಾಡಿದ ಚಿತ್ರದುರ್ಗ ಮಠದ ಶ್ರೀ ಬಸವನಾಗಿದೇವ ಶರಣರು ಮತ್ತಾವರ ಗ್ರಾಮಸ್ಥರ ಹಿರಿಯ ಮುಖಂಡರುಗಳು ಒಗ್ಗಟ್ಟಾಗಿ ಕೆಂಚರಾಯಸ್ವಾಮಿ ದೇವಾಲಯವನ್ನು ನವಿಕರಣಗೊಳಿಸಿ ಅದ್ದೂರಿಯಾಗಿ ಪ್ರಾರಂಭೋತ್ಸವ ಮಾಡಿರುವುದು ಅತ್ಯಂತ ಸಂತೋಷದ ಸಂಗತಿ ಎಂದರು.

ದೇವಾಲಯ ಜೀರ್ಣೋದ್ದಾರ ಕಾರ್ಯದಲ್ಲಿ ಇಡೀ ಗ್ರಾಮದ ಎಲ್ಲಾ ಸಮುದಾಯದವರು ಪೂಜಾ ಕಾರ್ಯಕ್ರಮದಲ್ಲಿ ಜಾತಿ, ಬೇಧವಿಲ್ಲದೇ ಅಣ್ಣತಮ್ಮಂದಿರಂತೆ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯ. ಮುಂದಿನ ಎಲ್ಲಾ ಲೋಕಕಲ್ಯಾಣ ಕಾರ್ಯಕ್ರಮಗಳಲ್ಲೂ ಮತ್ತಾವರ ಗ್ರಾಮಸ್ಥರು ಎಂದಿನಂತೆ ಭಾಗವಹಿಸಿ ಸಮಾನತೆ, ಸಹೋ ದರತೆ ಪಾಲಿಸುವಂತಾಗಲಿ ಎಂದು ಆಶಿಸಿದರು.

Kencharayaswamy ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಂ.ಡಿ.ರಮೇಶ್ ಮಾತನಾಡಿ ಗ್ರಾಮದಲ್ಲಿ ಕೆಂಚ ರಾಯ ದೇವಾಲಯ ಲೋಕಾರ್ಪಣೆಗೊಳಿಸಿ ಸುತ್ತಮುತ್ತಲಿನ ಭಕ್ತರಿಗೆ ಬಹಳಷ್ಟು ಅನುಕೂಲ ಕಲ್ಪಿಸಿದೆ. ಇದರಿಂದ ಗ್ರಾಮಸ್ಥರಿಗೆ ಉತ್ತಮ ಮಳೆ, ಬೆಳೆ ಲಭಿಸಿ ಅನ್ಯೂನತೆಯಿಂದ ಬಾಳಬೇಕು ಎಂದ ಅವರು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹಾಲಿ, ಮಾಜಿ ಶಾಸಕರುಗಳು ಭಾಗವಹಿಸಿ ಪ್ರಾರಂಭೋತ್ಸವದ ಕಾರಣಭೂತರಾಗಿದ್ದಾರೆ ಎಂದರು.

ದೇವಾಲಯ ಸಮಿತಿ ಖಜಾಂಚಿ ಮಹೇಶ್ ಮಾತನಾಡಿ ದೇವಾಲಯ ಲೋಕಾರ್ಪಣೆ ಕಾರ್ಯದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ನಡೆಸಿ ಸ್ವಾಮೀಜಿಯವರ ನೇತೃತ್ವದಲ್ಲಿ ವಿಧಿ ವಿಧಾನಗಳನ್ನು ಪೂರೈಸಲಾಯಿತು.

ಬಳಿಕ ಮಧ್ಯಾಹ್ನ ಸಾರ್ವಜನಿಕ ಅನ್ನಸಂಪರ್ತಣೆ ಕಾರ್ಯಕ್ರಮ ಏರ್ಪಡಿಸಲಾಯಿತು. ಸಂಜೆ ವಿಕಲಚೇತನರ ಮಕ್ಕ ಳಿಂದ ಗ್ರಾಮದಲ್ಲಿ ಮನರಂಜನೆ ಕಾರ್ಯಕ್ರಮವು ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಪ್ರಭಾಕರ್, ದೇವಾಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶಿವ ಪ್ರಕಾಶ್‌ಕುಮಾರ್, ಸಹ ಕಾರ್ಯದರ್ಶಿ ಶಿವಕುಮಾರ್, ಸದಸ್ಯರುಗಳಾದ ವಿಜೇಂದ್ರ, ಚಂದ್ರು, ರವಿ, ಚಂದ್ರು, ಚಂದ್ರಯ್ಯ, ಧರ್ಮೇಶ್, ಅರ್ಚಕರಾದ ಹೇಮಂತಶಾಸ್ತ್ರಿ ಹೊಮ್ಮಯ್ಯಶಾಸ್ತ್ರಿ ಅಭಿಶಾಸ್ತ್ರಿ
ಗಳು ಸೇರಿದಂತೆ ಮತ್ತಿತರ ರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...