Utthana Dwadashi ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ
ಕ್ಷೀರಸಾಗರದಲ್ಲಿ ಯೋಗ ನಿದ್ರೆಯಲ್ಲಿ ಪವಡಿಸಿದ ಶ್ರೀಮನ್ನಾರಾಯಣನು ಪ್ರಬೋಧಿನಿ ಏಕಾದಶಿಯಂದು ಭಕ್ತರನ್ನು ಅನುಗ್ರಹಿಸಲು ಯೋಗ ನಿದ್ರೆಯಿಂದ ಜಾಗೃತಗೊಳ್ಳುವದಿನವೇ ಉತ್ಥಾನ ದ್ವಾದಶಿ.
ಗೋಧೂಳಿ ಸಮಯದಲ್ಲಿ ತುಳಸೀದೇವಿಯ ಆರಾಧನಾ ಮಾಡುವುದು ಈ ಹಬ್ಬದ ವಿಶೇಷ.
ಲೋಕ ಕಲ್ಯಾಣಾರ್ಥವಾಗಿ ಉತ್ಥಾನ ದ್ವಾದಶಿಯಂದು ಶ್ರೀಮನ್ನಾರಾಯಣನು ತುಳಸೀದೇವಿಯ ಜೊತೆ ಮಂಗಳಕಲ್ಯಾಣ ಮಾಡಿ ಕೊಳ್ಳುವನೆಂಬ ಪ್ರತೀತಿ ಇದೆ.ತುಳಸೀ ವಿವಾಹದ ಹಿಂದೆ ಒಂದು ಪುರಾಣ ಕಥೆಯಿದೆ.
ಹಿಂದೂ ಪುರಾಣದ ಪ್ರಕಾರ ವೃಂದಾ ಎಂಬ ಹೆಸರಿನ ಯುವತಿಯೇ ತುಳಸಿಯಾಗಿ ಗಿಡದ ರೂಪ ಪಡೆದಿರುವುದು.ಈಕೆ ಜಲಂಧರನೆಂಬ ದುಷ್ಟ ರಾಜನನ್ನು ಮದುವೆಯಾಗಿರುತ್ತಾಳೆ.
ಅವಳಿಗೆ ಮಹಾವಿಷ್ಣುವಿನ ಮೇಲೆ ವಿಶೇಷ ಭಕ್ತಿ.ಇದು ಜಲಂಧರನಿಗೆ ಇಷ್ಟವಾಗುವುದಿಲ್ಲ.
ಜಲಂಧರನು ದೇವತೆಗಳಿಗೆ ಉಪಟಳ ಕೊಡುತ್ತಿರುತ್ತಾನೆ.ಶಿವನು ಏನು ಮಾಡುವುದು ಎಂದು ವಿಷ್ಣುವಿನ ಮೊರೆ ಹೋಗುತ್ತಾನೆ.ಆಗ ವಿಷ್ಣುವು ಜಲಂಧರನ ರೂಪತಾಳಿ ವೃಂದಾಳ ಬಳಿ ಬಂದು ಆಕೆಯ ಪಾವಿತ್ರ್ಯತೆಗೆ ಭಂಗ
ತರುತ್ತಾನೆ.ಈ ಸಂದರ್ಭದಲ್ಲಿ ಶಿವನು ಜಲಂಧರ ರಾಜನನ್ನು ಸಂಹರಿಸುತ್ತಾನೆ.ಇತ್ತ ತನ್ನ ಚಾರಿತ್ರ್ಯಕ್ಕೆ
ಧಕ್ಕೆ ತಂದ ವಿಷ್ಣುವಿಗೆ ವೃಂದಾ ಕಪ್ಪು ಕಲ್ಲಾಗಿ ಹೋಗು ಎಂದು ಶಾಪ ಕೊಟ್ಟದ್ದಲ್ಲದೆ ನಿನಗೆ ಪತ್ನಿಯ ವಿರಹ ಉಂಟಾಗಲಿ ಎಂದು ಶಪಿಸುತ್ತಾಳೆ.
ಈ ಪ್ರಸಂಗದಿಂದ ರಾಮಾಯಣದಲ್ಲಿ ವಿಷ್ಣುವಿನ ಅವತಾರವಾದ ರಾಮನಿಗೆ ಸೀತೆಯು ರಾವಣನಿಂದ ಕದ್ದೊಯ್ಯಲ್ಪಟ್ಟು
ದೂರವಾಗುತ್ತಾಳೆ.ತನ್ನ ಪಾವಿತ್ರ್ಯಕ್ಕೆ ಭಂಗ ಬಂದುದರಿಂದ ವೃಂದಾ ಪತಿಯ ಚಿತೆಗೆ ಹಾರಿ ಪ್ರಾಣ ತ್ಯಜಿಸುತ್ತಾಳೆ.ವಿಷ್ಣುವು ಆಕೆಯ ಆತ್ಮವನ್ನು ತುಳಸಿ ಗಿಡವಾಗಿ ಪರಿವರ್ತಿಸಿ ಮುಂದಿನ ಜನ್ಮದಲ್ಲಿ ಸಾಲಿಗ್ರಾಮವಾಗಿ ಪ್ರಬೋದಿನಿ ದ್ವಾದಶಿಯ ದಿನ ತುಳಸಿಯನ್ನು ಮದುವೆಯಾಗುತ್ತಾನೆ ಎಂಬ ಪುರಾಣ ಕಥೆಯಿದೆ.ಇದರ ಸಂಕೇತವೇ ವಿಷ್ಣು-ತುಳಸಿ ವಿವಾಹ.
ಈ ಕಾರ್ತಿಕ ಮಾಸದಲ್ಲಿ ದೀಪಾರಾಧನೆಯ ಮೂಲಕ
ಭಗವಂತನನ್ನು ಪೂಜಿಸಿ ಅನುಗ್ರಹಪಡೆದುಕೊಳ್ಳುವ
ಒಂದು ಪುಣ್ಯವಿಶೇಷ.ಮನೆಯ ಮುಂದಿನ ತುಳಸಿಕಟ್ಟೆಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನಿಟ್ಟು ,ಬೆಟ್ಟದ ನೆಲ್ಲಿಕಾಯಿಯ ಟೊಂಗೆಯನ್ನು ಸಿಕ್ಕಿಸಿ ಪೂಜೆಮಾಡುತ್ತಾರೆ.ತುಳಸಿ ಕಟ್ಟೆಯನ್ನು ಪುಷ್ಪಗಳಿಂದ ಅಲಂಕರಿಸಿಮಹಾವಿಷ್ಣುವನ್ನುಪುರುಷ
ಸೂಕ್ತದಿಂದಲೂ,ಶ್ರೀತುಳಸಿದೇವಿಯನ್ನು ಶ್ರೀಸೂಕ್ತದಿಂದಲೂ ಆರಾಧಿಸುವುದು ರೂಢಿಯಲ್ಲಿದೆ.
ಇತ್ತೀಚೆಗಿನ ದಿನಗಳಲ್ಲಿ ಕೇಳಿ ಬರುತ್ತಿರುವ ಹೊಸಹೊಸ ವೈರಸ್ ಗಳ ಉಪಟಳದಿಂದ ರಕ್ಷಿಸಿಕೊಳ್ಳಲು ಪವಿತ್ರದಿನವಾದ ಉತ್ಥಾನ ದ್ವಾದಶಿಯ ದಿನದಂದುಮಂಗಳಕರವಾದಶ್ರೀತುಳಸೀ-ನಾರಾಯಣ ದೇವರಕಲ್ಯಾಣ ದ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡಿಸರ್ವರ ಕ್ಷೇಮಕ್ಕೆ ಪ್ರಾರ್ಥಿಸೋಣ.
Utthana Dwadashi ನಮಃ ತುಳಸಿ ನಮೋ ವಿಷ್ಣುಪ್ರಿಯೆ ಶುಭೇ/
ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ ಪ್ರದಾಯಿನಿ.