Death News ನವೆಂಬರ್ 20ರಂದು ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪುಟ್‌ಪಾತ್‌ನಲ್ಲಿ ಸುಸ್ತಾಗಿ ಬಿದ್ದಿದ್ದ ಸುಮಾರು 40 ರಿಂದ 45 ವರ್ಷದ ಅಪರಿಚಿತ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ.
Death News ಮೃತನು ಸುಮಾರು 5 ಅಡಿ 10 ಇಂಚು ಎತ್ತರ, ಗೋಧಿ ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ. ತಲೆಯಲ್ಲಿ ಸುಮಾರು 2 ಇಂಚು ಉದ್ದದ ಕಪ್ಪು ಕೂದಲು, 1 ಇಂಚು ಉದ್ದದ ಗಡ್ಡ ಬಿಟ್ಟಿರುತ್ತಾನೆ. ಮೃತನು ಬಿಳಿ ಮಾಸಲು ಬಣ್ಣದ ಶರ್ಟ್, ಕಂದುಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾನೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಸಂಖ್ಯೆ : 08182-261414 ಅಥವಾ 9611761255 ನ್ನು ಸಂಪರ್ಕಿಸಬಹುದೆAದು ಪ್ರಕಟಣೆ ತಿಳಿಸಿದೆ.