Suttur Jatra Mahotsava 2023 ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವನ್ನು ಶ್ರೀ ಸುತ್ತೂರು ಕ್ಷೇತ್ರದಲ್ಲಿ 2024 ಫೆಬ್ರವರಿ 6 ಮಂಗಳವಾರದಿ0ದ 11 ಭಾನುವಾರದವರೆಗೆ ನೆರವೇರಿಸಲು ಇದೇ 17ರಂದು ಮೈಸೂರು ಶ್ರೀಮಠದಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಾತ್ರಾ ಮಹೋತ್ಸವದಲ್ಲಿ ಫೆಬ್ರವರಿ 7ರಂದು ಉಚಿತ ಸಾಮೂಹಿಕ ವಿವಾಹ, 8ರಂದು ರಥೋತ್ಸವ, 9ರಂದು ಶ್ರೀ ಮಹದೇಶ್ವರ ಕೊಂಡೋತ್ಸವ, 10ರಂದು ತೆಪ್ಪೋತ್ಸವಗಳಿರುತ್ತವೆ.
ಕರ್ತೃಗದ್ದುಗೆ, ಮಹದೇಶ್ವರ, ವೀರಭದ್ರೇಶ್ವರ ದೇವಸ್ಥಾನ ಮುಂತಾದ ಕಡೆಗಳಲ್ಲಿ ವಿಶೇಷ ಪೂಜಾಕೈಂಕರ್ಯಗಳು ನಡೆಯಲಿವೆ.
Suttur Jatra Mahotsava 2023 ವಸ್ತುಪ್ರದರ್ಶನ, ಸಾಮೂಹಿಕ ವಿವಾಹ, ದೇಶಿ ಆಟಗಳು, ಭಜನಾ ಮೇಳ, ಕೃಷಿಮೇಳ, ದನಗಳ ಜಾತ್ರೆ, ಕುಸ್ತಿ ಪಂದ್ಯಾವಳಿ, ಚಿತ್ರಕಲೆ, ರಂಗೋಲಿ, ಸೋಬಾನೆ ಪದ, ಗಾಳಿಪಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮೊದಲಾದವುಗಳನ್ನು ಎಂದಿನ0ತೆ ಆಯೋಜಿಸಲಾಗುವುದು.