Saturday, December 6, 2025
Saturday, December 6, 2025

Good Luck Car Care Shimoga ಹಿರಿಯರನ್ನ ಕಡೆಗಣಿಸುವ ಮನೋಭಾವ ತಪ್ಪು- ಶಾಸಕ ಡಿ.ಎಸ್.ಅರುಣ್

Date:

Good Luck Car Care Shimoga ಹಿರಿಯರ ಸೇವೆಯು ದೇವರ ಸೇವೆಗೆ ಸಮಾನ. ಹಿರಿಯರ ಸೇವೆಯಿಂದ ಆಶೀರ್ವಾದದ ಜತೆಯಲ್ಲಿ ಜೀವನಕ್ಕೆ ಅಗತ್ಯವಿರುವ ಸೂಕ್ತ ಮಾರ್ಗದರ್ಶನ ಸಿಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ಜನ್ಮದಿನದ ವಿಶೇಷ ಸಂದರ್ಭದಲ್ಲಿ ಶಿವಮೊಗ್ಗ ನಗರದ ಗುಡ್‌ಲಕ್ ಆರೈಕೆ ಕೇಂದ್ರದ ನಿತ್ಯ ಅನ್ನ ಪ್ರಸಾದ ಯೋಜನೆಗೆ ಸಹಾಯ ನೀಡಿ ಮಾತನಾಡಿ, ಯುವಜನರು ವೃದ್ಧರು, ಹಿರಿಯರನ್ನು ಕಡೆಗಣಿಸುವ ಮನೋಭಾವ ಹೊಂದುವುದು ತಪ್ಪು. ಹಿರಿಯರು ಹೇಳುವ ಮಾತುಗಳನ್ನು ಪಾಲಿಸಿದಲ್ಲಿ ಜೀವನ ಉತ್ತಮ ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಗುಡ್‌ಲಕ್ ಆರೈಕೆ ಕೇಂದ್ರವು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ವೃದ್ಧರು, ಅಸಹಾಯಕರು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸೇವೆ ಮಾಡುತ್ತಿದೆ. ಇಂತಹ ಸೇವೆ ಮಾಡುವವರು ಬಹಳ ಕಡಿಮೆ. ಗುಡ್‌ಲಕ್ ಕೇಂದ್ರ ಕೆಲಸ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಗುಡ್‌ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ಯು.ರವೀಂದ್ರನಾಥ ಐತಾಳ್ ಮಾತನಾಡಿ, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಡಿ.ಎಸ್.ಅರುಣ್ ಅವರು ಮಾರ್ಗದರ್ಶನ ನೀಡಿ ಸಹಕರಿಸಿದ್ದಾರೆ.

ದಾನಿಗಳು, ಸಂಘ ಸಂಸ್ಥೆಗಳು, ಪದಾಧಿಕಾರಿಗಳ ನೆರವಿನಿಂದ ಆರೈಕೆ ಕೇಂದ್ರದ ನಿರ್ವಹಣೆ ಮಾಡಲಾಗುತ್ತಿದೆ. ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು.

Good Luck Car Care Shimoga ಇದೇ ಸಂದರ್ಭದಲ್ಲಿ ಈವರೆಗೂ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ದಾನಿಗಳನ್ನು ಸ್ಮರಿಸಲಾಯಿತು. ಕಾರ್ಯಕ್ರಮದಲ್ಲಿ ಭೂಪಾಳಂ ಶಶಿಧರ್, ಕರ್ನಲ್ ಆನಂದರಾವ್, ವಿ.ಜಿ.ಲಕ್ಷ್ಮೀನಾರಾಯಣ, ಕೆ.ಪಿ.ಶೆಟ್ಟಿ, ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ, ನಿರ್ದೇಶಕ ಜಿ.ವಿಜಯಕುಮಾರ್, ಮುರಳಿ, ಮನೋಜ್, ನಾಗರಾಜ್, ಸುರೇಶ್ ಸಿಂಗ್, ಚೇತನ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...