Toyota Kirloskar Motor ಟೊಯೋಟಾ ಕಿರ್ಲೋಸ್ಕರ್ ನಿಂದ ರೂ. 3,300 ಕೋಟಿ ಹೂಡಿಕೆಯ ಒಪ್ಪಂದಕ್ಕೆ ಕರ್ನಾಟಕದ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಪಾಟೀಲ್ ಸಹಿ ಹಾಕಿದ್ದಾರೆ.
ಟೊಯೋಟಾಕಿರ್ಲೋಸ್ಕರ್ ಮೋಟಾರ್ಸ್ (ಪ್ರೈ) ಲಿ., ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಗಾಗಿ ರೂ. 3,300 ಕೋಟಿ ಹೂಡಿಕೆ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಒಪ್ಪಂದ(MOU) ಮಾಡಿಕೊಂಡಿದೆ.
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ
, ಅವರ ಸಮ್ಮುಖದಲ್ಲಿ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಸಕಾಜು ಯೋಶಿಮುರಾ ಗೀತಾಂಜಲಿ ಕಿರ್ಲೋಸ್ಕರ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು ಎಂದು ಎಂ.ಬಿ ಪಾಟೀಲ್ ಅವರು ಹೇಳಿದ್ದಾರೆ.
Toyota Kirloskar Motor ಬೆಂಗಳೂರು ಸಮೀಪದ ಬಿಡದಿಯಲ್ಲಿ ಸಂಸ್ಥೆ ತನ್ನ ಕಾರ್ಯ ಚಟುವಟಿಕೆ ಆರಂಭಿಸಲಿದ್ದು, ವಾರ್ಷಿಕ ಸುಮಾರು 1,00,000 ವಿದ್ಯುತ್ ಚಾಲಿತ ವಾಹನಗಳನ್ನು ಉತ್ಪಾದಿಸುವ ಗುರಿಹೊಂದಿದೆ. ಸುಮಾರು 2 ಸಾವಿರ ಉದ್ಯೋಗಗಳ ಸೃಷ್ಟಿಯಾಗಲಿದೆ ಎಂದು ಭಾರಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.