Sunday, December 14, 2025
Sunday, December 14, 2025

S N Channabasappa ಯುವಜನೋತ್ಸವದಲ್ಲಿ ಯುವಜನತೆ ಉತ್ಸಾಹದಿಂದ ಭಾಗವಹಿಸಿ-ಶಾಸಕ ಚನ್ನಬಸಪ್ಪ

Date:

S N Channabasappa ಯುವ ಜನತೆ ಪರಸ್ಪರ ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕೆಂದು ಶಿವಮೊಗ್ಗ ನಗರ ಕ್ಷೇತ್ರ ಶಾಸಕರಾದ ಎಸ್.ಎನ್ ಚನ್ನಬಸಪ್ಪ ನುಡಿದರು.

ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಸೇವಾ ಯೋಜನೆ, ನೆಹರೂ ಯುವ ಕೇಂದ್ರ, ನಿಸರ್ಗ ಯುವತಿ ಮಂಡಳಿ, ಶಿವಮೊಗ್ಗ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ 2023-24ನೇ ಸಾಲಿನ ಶಿವಮೊಗ್ಗ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

  ಯುವಕರಿದ್ದಾಗ ಅತ್ಯುತ್ತಮ ಕೆಲಸಗಳನ್ನು ಮಾಡಲು ಸಾಧ್ಯವಿದ್ದು, ದೇಶಕ್ಕಾಗಿ  ದುಡಿಯಬೇಕು.  ಇಂತಹ ಯುವಜನೋತ್ಸವದಲ್ಲಿ ಯುವಕರು ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ಇತರರು ಭಾಗವಹಿಸುವಂತೆ ಮಾಡಬೇಕು. ಹಾಗೂ ಸಾಂಸ್ಕೃತಿಕ ಮತ್ತು ಕಲಾ ಪರಂಪರೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಯುವಕರ ಸ್ವಾವಲಂಬನೆಗಾಗಿ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದ್ದು ಅದನ್ನು ಬಳಕೆ ಮಾಡಿಕೊಳ್ಳ ಎಂದು ಕರೆ ನೀಡಿದರು.

 ವಿಧಾನ ಪರಿಷತ್ ಶಾಸಕರಾದ ಡಿ. ಎಸ್ ಅರುಣ್ ಮಾತನಾಡಿ, ನೈತಿಕತೆ, ಸಂವಿಧಾನ ಮತ್ತು ಪ್ರಸ್ತುತದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಪ್ರಜಾಪ್ರಭತ್ವ ವ್ಯವಸ್ಥೆಯ ರಾಜ್ಯಂಗ, ಶಾಸಕಾಂಗ, ಕಾರ್ಯಾಂಗದ ವ್ಯವಸ್ಥೆಯನ್ನು ಇಂದಿನ ವಿದ್ಯಾರ್ಥಿಗಳು ಹೆಚ್ಚು ಒಗ್ಗೂಡಿಸಿಕೊಳ್ಳಬೇಕು. ಶಾಸಕಾಂಗದ ಟೀಕೆ ಸರ್ವೇ ಸಾಮಾನ್ಯ ಆದರೆ ಶಾಸಕಾಂಗಿದ ಬಗ್ಗೆ ತಿಳಿದುಕೊಂಡು ಯುವ ಜನತೆ ವ್ಯವಸ್ಥೆಯನ್ನು ಸರಿ ಮಾಡುವ ಕೆಲಸ ಮಾಡಬೇಕು. ದೇಶದಲ್ಲಿ ಶೇ.55 ರಷ್ಟು ಯುವ ಜನತೆ ಇದ್ದು, ಮುಂದಿನ ಪೀಳಿಗೆಗೆ ಏನಾದರೂ ಕಾಣಿಕೆ ಕೊಡುವಂತಿರಬೇಕು. ನಿಜ ಜೀವನದಲ್ಲಿ ನೈತಿಕವಾಗಿ ಸದೃಢರಾಗಬೇಕು. ಆಗ ಉತ್ತಮ ಭವಿಷ್ಯ ಸಾಧ್ಯ ಎಂದರು. ಶಿಕ್ಷಣದೊಂದಿಗೆ ವ್ಯಕ್ತಿತ್ವ ನಿರ್ಮಾಣ ಕೆಲಸವಾದರೇ ಮಾತ್ರ ದೇಶದ ಬೆಳವಣಿಗೆ ಉತ್ತಮವಾಗುತ್ತದೆ. ಇದನ್ನು ಮಾಡುವುದು ನಮ್ಮಲ್ಲರ ಕರ್ತವ್ಯ. ಯುವ ಜನತೆ ದುಶ್ಚಿಟಗಳಿಂದ ದೂರವಿರಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಮ್ಮ ಕಲೆ ಸ0ಸ್ಕೃತಿಯನ್ನು ಕಾಪಾಡಲು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಯುವ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು.  ಎಂದು ಹೇಳಿದರು.

S N Channabasappa  ಚೈನಾದಲ್ಲಿ ನಡೆದ ಪ್ಯಾರಾ ಒಲಂಪಿಕ್ ಚೆಸ್ ಚಾಂಪಿಯನ್ ಶಿಪ್ ದೃಷ್ಟಿ ದೋಷವುಳ್ಳ ಕಿಶನ್ ಗಂಗೊಲಿ ಮತ್ತು ವೃತ್ತಿ ಜೈನ್  ಇವರಿಗೆ ಅಭಿನಂದಿಸಿದರು.

ಯು.ಸ.ಮತ್ತು ಕ್ರೀ.ಇಲಾಖೆಯ ಸಹಾಯಕ ನಿರ್ದೇಶಕ ಎಂ.ಟಿ. ಮಂಜುನಾಥಸ್ವಾಮಿ, ಮಾತನಾಡಿ, ಜಾನಪದದ ಜೊತೆಗೆ ಈ ಬಾರಿ ಹಲವು ಸೃಜನಾತ್ಮಕ ಸ್ಫರ್ಧೆಗಳನ್ನೂ ಸಹ ಆಯೋಜಿಸಲಾಗಿದೆ. ಇಲ್ಲಿ ಆಯ್ಕೆಯಾದವರು ರಾಜ್ಯ ಮಟ್ಟದಲ್ಲಿ ಭಾಗವಹಿಸುತ್ತಾರೆ ಎಂದು ಪ್ರಾಸ್ತಾವಿಕ ನುಡಿದರು.

  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಉಮೇಶ್ ಹೆಚ್, ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಪರಿಸರ ನಾಗರಾಜ್, ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ, ಮಹೇಶ್, ಗಣೇಶ್ ಕೆಂಚನಾಲ್, ಮಹೇಂದ್ರ ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...