World Fisheries Day ಇಂದು ವಿಶ್ವ ಮೀನುಗಾರಿಕೆ ದಿನ. ಈ ದಿನದ ಪ್ರಮುಖ ಉದ್ದೇಶವೆಂದರೆ ಜಲಜೀವಗಳ ಸಂರಕ್ಷಣೆ ಇದರ ಪ್ರಮುಖ ಗುರಿ. ಜಾಗತಿಕವಾಗಿ 250 ದಶಲಕ್ಷಕ್ಕೂ ಹೆಚ್ಚು ಜನರು ಮೀನುಗಾರಿಕೆಗೆ ಅವಲಂಭಿತರಾಗಿದ್ದಾರೆ. ಅನೇಕ ಶತಮಾನಗಳಿಂದಲೂ ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆ ಭಾರತದಲ್ಲಿ ಪಾರಂಪರಿಕವಾಗಿ ಬಂದಿದೆ.
ಪ್ರತಿ ವರ್ಷವೂ ನವೆಂಬರ್ 21ರಂದು ವಿಶ್ವ ಮೀನುಗಾರಿಕೆ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. 2015 ನವೆಂಬರ್ 21ರಂದು ನವದೆಹಲಿಯಲ್ಲಿ ಅಂತರಾಷ್ಟ್ರೀಯ ಮೀನುಗಾರರ ಸಂಘಟನೆಯ ಉದ್ಘಾಟನೆಯ ಸಮಯದಲ್ಲಿ ಮೊದಲ ಬಾರಿಗೆ ವಿಶ್ವ ಮೀನುಗಾರಿಕಾ ದಿನವನ್ನು ಆಚರಿಸಲಾಯಿತು. ಆನಂತರದಲ್ಲಿ ಪ್ರತಿ ವರ್ಷ ಮೀನುಗಾರಿಕೆ ಉದ್ಯಮ, ಪರಿಸರ ಮತ್ತು ಜೀವ ವೈವಿಧ್ಯದ ಒಟ್ಟಾರೆ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುವ ಒಂದು ವಿಶಿಷ್ಟ ವಿಷಯದೊಂದಿಗೆ ಮೀನುಗಾರಿಕೆ ದಿನವನ್ನು ಆಚರಿಸಲಾಗುತ್ತದೆ.
World Fisheries Day ಪ್ರಪಂಚದ ಅನೇಕ ಭಾಗಗಳಲ್ಲಿ ಮೀನುಗಳು ಜನರ ಆಹಾರದ ಒಂದು ಭಾಗವಾಗಿದೆ. ಅನೇಕ ಸಮಾಜಗಳು ಹಾಗೂ ಸಮುದಾಯಗಳು ಹಲವಾರು ವರ್ಷಗಳಿಂದ ಮೀನುಗಾರಿಕೆಯನ್ನು ಅವಲಂಭಿಸಿದ್ದಾರೆ.