Cricket World Cup ಕ್ರಿಕೆಟ್ ,ಅನಿಶ್ಚಿತ ಆಟ ನಿಜ. ಆದರೆ ಒಳ್ಳೆಯ ಕ್ರೀಡಾ ಅನುಭವ ಇದ್ದರೂ ಸೋಲೊಪ್ಪಿಕೊಳ್ಳುವುದು ಒಂದು ರೀತಿ
ಸಂಕೋಚವಾಗುವ ಸಂಗತಿ.
ಏಕದಿನ ಕ್ರಿಕೆಟ್ ಟೂರ್ನಿಯ ಹತ್ತು ಪಂದ್ಯಗಳಲ್ಲಿ ಆಡಿ ಗೆದ್ದ ಭಾರತಕ್ಕೆ ಕ್ರಿಕೆಟ್ ಪ್ರಿಯರು ಕ್ಷಮಿಸುವುದಿಲ್ಲ.
ನಮ್ಮ ಟೀಮು ಯಾವುದಕ್ಕೂ ಕಡಿಮೆ ಇರಲಿಲ್ಲ
ಅದೇನು ನರ್ವಸ್ ಆದರೋ ಗೊತ್ತಿಲ್ಲ.
ನಾಯಕ ರೋಹಿತ್ ಬಿರುಸಿನ ಆಡ ತೋರಿದರು. ಆದರೆ ಸಂಗಡ ಬಂದ ಕೆಲವರು ಮಾತ್ರ ಕೊಹ್ಲಿ,ರಾಹುಲ್ ಮಾತ್ರ ಕ್ರೀಸ್ ನಲ್ಲಿ ನಿಂತಿದ್ದರು.
ಶುಭಮನ್ ಗಿಲ್ ,ಶ್ರೇಯಸ್ ಅಯ್ಯರ್ ಅವರಿಂದ ನಲವತ್ತು ರನ್ ಬಂದಿದ್ದರೆ ಆಟದ ಗತಿಯೇ ಬೇರೆ ಆಗುತ್ತಿತ್ತು.
ಇನ್ನೂ ಏಳು ಓವರ್ ಇದ್ದಾಗಲೇ ಆಸಿಸ್ ತಂಡ ಜಯಗಳಿಸಿ ಏಕದಿನ ಕ್ರಿಕೆಟ್ ದೊರೆಯಾಯಿತು.
ಎಲ್ಲವನ್ನೂ ಶಮೀ ಅವರ ಮೇಲೇ ಅವಲಂಬಿಸಿದಂತಿತ್ತು. ಆದರೆ ನಮ್ಮ ಫೀಲ್ಡಿಂಗ್ ನೋಡಿದರೆ ಮೊನಚಾಗಿರಲಿಲ್ಲ.
(ಇತರೆ ಎನ್ ಗಳ ಸಂಖ್ಯೆ 18.)
ಅಹ್ಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ಸ್ ನಲ್ಲಿ ಆಸಿಸ್ ಮತ್ತು ಭಾರತ ಎದುರಾದವು.
ಹನ್ನೆರಡು ವರ್ಷಗಳ ನಂತರ ಮತ್ತೆ ಕಪ್ ಗೆಲ್ಲುವ ಕನಸು ಬಲವಾಗಿತ್ತು.
ಆದರೆ ಟಾಸ್ ಗೆದ್ದ ಆಸಿಸ್ ಕ್ಯಾ.ಕಮಿನ್ಸ್ ಬಹಳ ಮುಂದಾಲೋಚನೆಯಿಂದ ಫೀಲ್ಡಿಂಗ್ ಆಯ್ದುಕೊಂಡರು.
ಲೀಲಾಜಾಲವಾಗಿಯೇ ಆರಂಭ ಮಾಡಿದ ಭಾರತ ಗಿಲ್ ಅವರ ತಪ್ಪಿನ ಹೊಡೆತದಿಂದ ಸುಲಭ ಕ್ಯಾಚು ನೀಡಿ ಕೇವಲ 4 ರನ್ ಗಳಿಸಿ ಕ್ರಿಕೆಟ್ ಪ್ರಿಯರಿಗೆ ನಿರಾಶೆ ಮಾಡಿದರು
ಅತ್ತ ನಾಯಕ ರೋಹಿತ್ ಅಬ್ಬರದ ಆಟದಲ್ಲಿದ್ದರು.
ನಾಲ್ಕು ಬೌಂಡರಿ,ಮೂರು ಸಿಕ್ಸರ್ ಎತ್ತಿದರು.ಸ್ಟಾರ್ಕ್ ಬೌಲಿಂಗ್ ನಲ್ಲಿ
ಜಂಪಾ ಹಿಡಿದ ಅತ್ಯುತ್ತಮ ಕ್ಯಾಚ್ ನಿಂದ ಅವರೇ ನಿರಾಶೆ ವ್ಯಕ್ತಪಡಿಸಿ ಪೆವಿಲಿಯನ್ ಗೆ ಹೆಜ್ಜೆಹಾಕಿದರು.
30 ರನ್ ಗಳಿಗೆ ಒಂದು ವಿಕೆಟ್ ಕಳೆದು ಕೊಂಡ ಭಾರತ 76 ರನ್ ಆಗವಷ್ಟರಲ್ಲಿ ಎರಡನೇ ವಿಕೆಟ್ ಕಳೆದುಕೊಂಡಿತು.
Cricket World Cup ಕೊಹ್ಲಿ ( 54)ಮತ್ತು ರಾಹುಲ್( 66) ಕೊಂಚ ಜೀವ ಸೆಲೆ ನೀಡಿದರು.
ಇನ್ನು ಮುಂದಿನ ಆಟದ ಪರಿ ಹೇಳಲೇ ಬೇಕಿಲ್ಲ.
ಆಸಿಸ್ ಮಡದ ಕರಾರು ವಾಕ್ ಬೌಲಿಂಗ್ ಮತ್ತು ಚುರುಕು ಫೀಲ್ಡಿಂಗ್
ಎದುರು ಭಾರತ ಸಪ್ಪೆ ಪ್ರದರ್ಶನ ನೀಡಿತು ಎನ್ನಬಹುದು.