Kannada Rajyotsava celebrations ಭದ್ರಾವತಿಯಲ್ಲಿ ಶನಿವಾರ ತಾರೀಕು 18 ರಂದು ಭೂಮಿಕಾ ಕನ್ನಡ ನಾಡು ನಡೆ-ನುಡಿ ಬಿಂಬಿಸುವ ವೇದಿಕೆಯ ವತಿಯಿಂದ ತರೀಕೆರೆ ರಸ್ತೆಯ ನಯನ ಸಭಾಂಗಣದಲ್ಲಿ, ಹಮ್ಮಿಕೊಳ್ಳಲಾಗಿದ್ದ ಸುವರ್ಣ ಕರ್ನಾಟಕ ಸಂಭ್ರಮ, 68ನೇ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಶಿಕ್ಷಣ ಇಲಾಖೆಯ ಸಂಯೋಜಕ ಡಾ. ಎಂ ಬಸವರಾಜಪ್ಪ ಪಾಲ್ಗೊಂಡು ಮಾತನಾಡಿದರು.
ಕನ್ನಡ ಭಾಷೆ ಮತ್ತಷ್ಟು ಉಜ್ವಲಗೊಳ್ಳಲು ಪ್ರತಿಯೊಬ್ಬರಲ್ಲೂ ಕನ್ನಡ ಅಭಿಮಾನ ಬೆಳೆಯಬೇಕೆಂದು ಡಾ. ಎಂ ಬಸವರಾಜಪ್ಪ ಹೇಳಿದರು.
ವಿಶ್ವದಾದ್ಯಂತ ಕನ್ನಡ ಭಾಷೆ ವಿಸ್ತಾರ ಗೊಳ್ಳಬೇಕೆಂಬ ಆಶಯ ವೇದಿಕೆ ಹೊಂದಿರುವುದು , ಅದರ ಹೆಸರು ಮತ್ತು ಲಾಂಛನದ ಮೂಲಕ ತಿಳಿದುಕೊಳ್ಳಬಹುದಾಗಿದೆ.ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಸಹ ನಮ್ಮಲ್ಲಿ ಕನ್ನಡ ಅಭಿಮಾನವಿದ್ದಲ್ಲಿ , ಭಾಷ ಸಹ ಬೆಳವಣಿಗೆ ಹೊಂದುತ್ತದೆ .ಕನ್ನಡ ನಾಡಿನಲ್ಲಿಯೇ ಕನ್ನಡ ಭಾಷೆಯಲ್ಲಿ ಹಲವು ವಿಭಿನ್ನತೆ ಮತ್ತು ವೈಶಿಷ್ಟತೆಯನ್ನ ಕಾಣಬಹುದಾಗಿದೆ. ಎಲ್ಲರನ್ನು ಸೇರಿಸುವ ಎಲ್ಲರನ್ನೂ ಒಳಗೊಂಡಿರುವ ಭಾಷೆ ಕನ್ನಡ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.ಕನ್ನಡ ಭಾಷಾ ಬೆಳವಣಿಗೆ, ಅದರ ಮಾಧುರ್ಯ, ಅವುಗಳನ್ನು ಶಿಲಾಶಾಸನದಿಂದ ಪ್ರಾರಂಭಿಸಿ, ಹಳೆಗನ್ನಡ, ವಚನ ಸಾಹಿತ್ಯ, ದಾಸ ಸಾಹಿತ್ಯ, ರಾಘವಾಂಕ ಕಾವ್ಯದ ವಿಶಿಷ್ಟತೆ, ಕುಮಾರವ್ಯಾಸ ಕವಿಯ ವರ್ಣನೆ ಮುಂತಾದವುಗಳನ್ನು ತಿಳಿಸುತ್ತಾ, ವರ್ತಮಾನ ಕನ್ನಡದ ಸ್ಥಿತಿಗತಿಗಳನ್ನು ವಿವರವಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೈದ್ಯ ಸಾಹಿತಿ ವೇದಿಕೆ ಅಧ್ಯಕ್ಷ ಡಾಕ್ಟರ್ ಕೃಷ್ಣ ಎಸ್ ಭಟ್ ಕನ್ನಡ ಭಾಷಾ ಬೆಳವಣಿಗೆಯಲ್ಲಿ ಕನ್ನಡ ಅಭಿಮಾನ ಮುಖ್ಯ. ಆ ನಿಟ್ಟಿನಲ್ಲಿ ನಮ್ಮ ವೇದಿಕೆ ಕನ್ನಡ ಅಭಿಮಾನವನ್ನು ಬಿಂಬಿಸುವ ಮೂಲಕ ,ಜಾಗೃತಗೊಳಿಸುವ ಕಾರ್ಯಕ್ರಮ ದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದರು.
ವೈಯಕ್ತಿಕ ಮಟ್ಟದಲ್ಲಿ ಕನ್ನಡವನ್ನು ಬಳಸುವ ಮೂಲಕ, ಕುಟುಂಬದಲ್ಲಿ ಮಕ್ಕಳೊಂದಿಗೆ ಮೊಮ್ಮಕ್ಕಳೊಂದಿಗೆ ಮಾತನಾಡುವ ಮೂಲಕ ,ಕನ್ನಡ ವರ್ತಮಾನ ಪತ್ರಿಕೆಗಳನ್ನು ದಿನನಿತ್ಯ ಓದುವ ಮೂಲಕ, ಸುವರ್ಣ ಕರ್ನಾಟಕ ಸಂಭ್ರಮದ ಘೋಷ ವಾಕ್ಯ” ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎನ್ನುವದನ್ನ ಪಾಲಿಸೋಣ ಎಂದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ರಾದ ಶ್ರೀ ಲಕ್ಷ್ಮಣರಾವ್. ಅಪರಂಜಿ ಶಿವರಾಜ್ ಹಾಗೂ ಮುನಿರಾಜು ರವರಿದ್ದರು.
Kannada Rajyotsava celebrations ಡಾಕ್ಟರ್ ವೀಣಾ ಭಟ್ ಸಂಗ ಡಿಗರಿಂದ ನಾಡಗೀತೆ, ಅಪರಂಜಿ ಶಿವರಾಜ್ ದವರುಂದ ಸ್ವಾಗತ, ರಮೇಶ್ ರವರಿಂದ ಅತಿಥಿಗಳ ಪರಿಚಯ, ಶ್ರೀ ರಾಮಾಚಾರಿ ರವರಿಂದ ವಂದನಾರ್ಪಣೆ ಹಾಗೂ Dr. ನಾಗರಾಜ್ ರವರಿಂದ ನಿರೂಪಣೆ ಮಾಡಿದರು.