Sunday, December 14, 2025
Sunday, December 14, 2025

Shimoga District Chamber of Commerce & Industry ಪ್ರವಾಸದ ಅವಕಾಶಗಳನ್ನ ಸದುಪಯೋಗಪಡಿಸಿಕೊಳ್ಳ ಬೇಕು- ಎನ್.ಗೋಪಿನಾಥ್

Date:

Shimoga District Chamber of Commerce & Industry ದೇಶದ ಪ್ರಸಿದ್ದ ಕ್ಷೇತ್ರಗಳ ದರ್ಶನಕ್ಕೆ ಅತ್ಯಂತ ಕಡಿಮೆ ವೆಚ್ಛದಲ್ಲಿ ಉತ್ಕೃಷ್ಟ ಪ್ರವಾಸ ಆಯೋಜಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.


ಶಿವಮೊಗ್ಗ ನಗರದಿಂದ ಪ್ರವಾಸಕ್ಕೆ ಹೊರಟವರಿಗೆ ಬಿಳ್ಕೋಡುಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ವೇದಿಕೆ, ಯೂತ್ ಹಾಸ್ಟೇಲ್ಸ್ ತರುಣೋದಯ ಘಟಕ, ಸಾಹಸ ಮತ್ತು ಸಂಸ್ಕೃತಿ ವತಿಯಿಂದ ಸಂಯುಕ್ತವಾಗಿ ಪ್ರವಾಸ ಹಮ್ಮಿಕೊಂಡಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಜನತೆಗೆ ಅತ್ಯುತ್ತಮ ಅನುಭವ ಮತ್ತು ಉತ್ತಮ ಅವಕಾಶ ಮಾಡಿ ಕೊಡುವ ಉದ್ದೇಶದಿಂದ ಹೊರ ರಾಜ್ಯ ಹಾಗೂ ದೇಶಗಳಿಗೂ ಪ್ರವಾಸ ಏರ್ಪಡಿಸಲಾಗುತ್ತಿದೆ. ಅದರ ಪ್ರಯೋಜನ ಪಡೆಯಬೇಕು. ಇನ್ನೂ ಹೆಚ್ಚಿನ ಯಶಸ್ಸು ಕಾಣಲು ಸಹಕರಿಸಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ವೈವಿಧ್ಯ ಪ್ರಸಿದ್ದ ಪ್ರವಾಸಿ ತಾಣಗಳಿದ್ದು, ಶಿವಮೊಗ್ಗ ಜಿಲ್ಲೆಯ ಸ್ಥಳಗಳಿಗೂ ಪ್ರವಾಸಿಗರು ಬರುವಂತಾಗಬೇಕು. ಪ್ರವಾಸಿತಾಣ ಜೀವಂತಿಕೆಯಿಂದ ಇರಬೇಕಾದರೆ ಚಟುವಟಿಕೆಯಿಂದ ಕೂಡಿರಬೇಕು ಎಂದರು.


Shimoga District Chamber of Commerce & Industry ಯೂತ್ ಹಾಸ್ಟೇಲ್ಸ್ ಚೇರ‍್ಮನ್ ವಾಗೇಶ್ ಮಾತನಾಡಿ, ಪ್ರತಿಯೊಬ್ಬರು ಚಾರಣ ಹಾಗೂ ಪ್ರವಾಸಗಳನ್ನು ಕಾಲಕಾಲಕ್ಕೆ ಕೈಗೊಳ್ಳಬೇಕು. ಯೂತ್ ಹಾಸ್ಟೆಲ್ ವತಿಯಿಂದ ನಿರಂತರವಾಗಿ ಚಾರಣ ಹಾಗೂ ಪ್ರವಾಸಗಳನ್ನು ಏರ್ಪಡಿಸಲಾಗುವುದು. ಇದರಿಂದ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪ್ರಸಿದ್ದಿ ಪಡೆದ ಪ್ರವಾಸಿತಾಣಗಳನ್ನು ಜನಸಾಮಾನ್ಯರಿಗೆ ನೋಡಲು ಸಾಧ್ಯವಾಗುತ್ತದೆ ಎಂದರು.
ಬೀಳ್ಕೊಡುಗೆ ಸಮಾರಂಭದಲ್ಲಿ ಅ.ನಾ.ವಿಜಯೇಂದ್ರ, ಜಿ.ವಿಜಯಕುಮಾರ್, ಮಲ್ಲಿಕಾರ್ಜುನ್, ಪ್ರೇಮಕುಮಾರ್, ಲಕ್ಷ್ಮೀ, ಶಿವಶಂಕರ ಶಾಸ್ತ್ರೀ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...