Karnataka Rajyotsava ಪ್ರತಿದಿನ ಮಾತೃ ಭಾಷೆಯನ್ನು ಹೆಚ್ಚಾಗಿ ಬಳಸಿದರೆ ತಾಯಿ ಕನ್ನಡಾಂಬೆಗೆ ದೊಡ್ಡ ಸೇವೆ ಸಲ್ಲಿಸಿದಂತೆ ಎಂದು ಎಂದು ಜಿಲ್ಲಾ ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಎಂ.ಆರ್. ಪ್ರಕಾಶ್ ಹೇಳಿದರು.
ಮೂಡಿಗೆರೆ ಪಟ್ಟಣದ ಮಹಾಂತಿನ ಸಮುದಾಯಭವನದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ -50 ಸಿರಿಗನ್ನಡ ವೇದಿಕೆ ತಾಲ್ಲೂಕು ಘಟಕದ ಸೇವಾದೀಕ್ಷೆ ಹಾಗೂ ನುಡಿನಿತ್ಯೋತ್ಸವ ಕಾರ್ಯಕ್ರಮ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಮುಂದಿನ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಸಿರಿ ಗನ್ನಡ ವೇದಿಕೆಯ ನೇತೃತ್ವದಲ್ಲಿ ಅಂತರ್ ಜಿಲ್ಲಾ ಸಿರಿಗನ್ನಡ ಸಮ್ಮೇಳನವನ್ನು ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಹಲ್ಮಿಡಿ ಗ್ರಾಮದಲ್ಲಿ ನೆಡೆಸಲು ತೀರ್ಮಾ ನಿಸಲಾಗಿದೆ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿಗಳಾದ ಹಳೇ ಕೋಟೆ ರಮೇಶ್ ನಾವು ಕನ್ನಡ ನೆಲ, ಜಲ, ಫಲ ವನ್ನು ಉಣ್ಣುತ್ತಿದ್ದೇವೆ. ಕನ್ನಡ ವ್ಯವಸ್ಥಿತ ಭಾಷೆ. ಅದು ನಮ್ಮ ಸಂಸ್ಕೃತಿ. ಕನ್ನಡ ನಾಡು ರೂಪುಗೊಳ್ಳಲು ಅನೇಕ ಮಹನೀಯರು ಶ್ರಮಿಸಿದ್ದಾರೆ. ಅವರು ನಿಸ್ವಾರ್ಥ ಸೇವೆ, ತ್ಯಾಗ ಬಲಿದಾನವನ್ನು ನೆನಪಿಸಿಕೊಳ್ಳುವ ಸುದಿನವಿಂದು. ನಾಡು ನುಡಿಯ ಸ್ಮರಣೆ ಮಾಡಿಕೊಳ್ಳುವುದರೊಂದಿಗೆ ಕನ್ನಡ ನಾಡು, ನುಡಿಯನ್ನು ಇನ್ನಷ್ಟು ಶ್ರೀಮಂತ ಗೊಳಿಸುವ ಬಗ್ಗೆ ನಾವು ಗಮನ ಹರಿಸಬೇಕು ಎಂದರು.
ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥಾಪಕ ಡಾ. ಮೋಹನ್ ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಸಿರಿ ಗನ್ನಡ ವೇದಿಕೆ ಸುಮಾರು ಎರಡು ದಶಕಗಳ ಹಿಂದೆ ಮೈಸೂರಿನ ಎಂ.ಎಸ್.ವೆoಕಟ ರಾಮಯ್ಯ ನೇತೃತ್ವದಲ್ಲಿ ಪ್ರಾರಂಭ ಗೊಂಡು ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಜಿಲ್ಲಾ ತಾಲ್ಲೂಕು ಹೋಬಳಿ ಗಳಲ್ಲಿ ವೇದಿಕೆ ಕ್ರಿಯಾಶೀಲವಾಗಿ ಕಾರ್ಯಕ್ರಮಗಳನ್ನು ಮಾಡುತ್ತಿವೆ ಎಂದರು.
ಇದೀಗ ಜಿ. ಎಸ್. ಗೋನಾಳ್ ರಾಜ್ಯಾಧ್ಯಕ್ಷರಾಗಿ ಮತ್ತು ಶ್ರೀಮತಿ ಸೌಗಂಧಿಕಾ ವಿ. ಜೋಹೀಸ್ ರವರು ರಾಜ್ಯ ಕಾರ್ಯಧ್ಯಕ್ಸರಾಗಿ ಸೇವೆ ಸಲ್ಲಿಸುತ್ತಿದ್ದು ಭಾಷೆಯ ಮೂಲಕ ಸಾಮಾಜಿಕ, ಸಾಂಸ್ಕೃತಿಕ, ಭಾವನಾತ್ಮಕ ಬಾಂಧವ್ಯ ಗಳು ಬೆಳೆಯಲು ಸಾಧ್ಯವಾಗುತ್ತಿದೆ ಎಂದರು.
ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಜಿ.ಹೆಚ್.ಹಾಲಪ್ಪಗೌಡ ಪುಷ್ಪನಮನ ಸಲ್ಲಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಕುಂದೂರು ಅಶೋಕ್ ನೂತನ ಅಧ್ಯಕ್ಷ ಎಂ ಆರ್ ಪೂರ್ಣೇಶ್ ಮೂರ್ತಿ ರವರಿಗೆ ಪ್ರತಿಜ್ಞಾ ವಿಧಿ ಭೋದಿಸಿ ಮಾತನಾಡಿದರು. ಎಂ.ಆರ್.ಪೂರ್ಣೇಶ್ ಮೂರ್ತಿ ಅಧ್ಯಕ್ಷರಾಗಿ ಮತ್ತು ನೂತನ ತಂಡ ಪ್ರತಿಜ್ಞೆ ಸ್ವೀಕರಿಸಿದರು.
Karnataka Rajyotsava ಕನ್ನಡ ಉಪನ್ಯಾಸಕ ಡಾ. ಸಂಪತ್ ಬೆಟ್ಟಗೆರೆ ರವರು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರ ಸಣ್ಣ ಕಥೆ ಗಳ ಬಗ್ಗೆ ಉಪನ್ಯಾಸ ಮಾಡಿದರು. ಬಕ್ಕಿ ಮಂಜುನಾಥ್ ಮತ್ತು ಸಂಗಡಿಗರಿoದ ಗೀತಾಗಾಯನ-ಸಾಂಸ್ಕೃತಿಕ ಕಾರ್ಯಕ್ರಮ ನೆಡೆಯಿತು
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಂ.ಶಾoತಕುಮಾರ್, ಸಿರಿಗನ್ನಡ ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ.ಶಿವಾನoದ ಸ್ವಾಮಿ, ಸಾಹಿತಿ ಮಂಜುನಾಥ್ ಸ್ವಾಮಿ, ಬಕ್ಕಿ ರವೀಚಿದ್ರ, ಮುಖಂಡರುಗಳಾದ ಬಿ.ಎಸ್.ಒಂಕಾರ್, ಮಗ್ಗಲಮಕ್ಕಿ ಗಣೇಶ್, ಶ್ರೀಮತಿ ರಾಜಾಲಕ್ಸ್ಮಿ ಕಾಂತರಾಜ್, ಬಿ ಬಸವರಾಜ್, ರಾಮಚಂದ್ರ ಒಡೆಯರ್, ಶ್ರೀಮ ತಿ ಶಕುಂತಲಾ ಪಾಟೀಲ್ ಮುಂತಾದವರು ಭಾಗವಹಿಸಿದ್ದರು.