Thursday, March 19, 2026
Thursday, March 19, 2026

Rotary Shimoga East Institute ಕ್ರೀಡಾಕೂಟದಲ್ಲಿ ಶಿವಮೊಗ್ಗ ರೋಟರಿ ಪೂರ್ವ ತಂಡಕ್ಕೆ ವಿವಿಧ ಪ್ರಶಸ್ತಿ

Date:

Rotary Shimoga East Institute ಶಿವಮೊಗ್ಗ ನಗರದ ನೆಹರು ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರೋಟರಿ ವಲಯ ಮಟ್ಟದ “ಪೂರ್ವಚಂದ್ರ” ಕ್ರೀಡಾಕೂಟದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ವಿವಿಧ ಕ್ರೀಡೆಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಪ್ರತಿನಿಧಿಸಿದ್ದ ಶೆಟಲ್ ಬ್ಯಾಡ್ಮಿಂಟನ್‌ನಲ್ಲಿ ಜಿ.ವಿಜಯ್‌ಕುಮಾರ್ ಹಾಗೂ ಕಿಶೋರ್‌ಕುಮಾರ್ ಪ್ರಥಮ ಸ್ಥಾನ, ಸಿಂಗಲ್ಸ್ ವಿಭಾಗದಲ್ಲಿ ಜಿ.ವಿಜಯ್‌ಕುಮಾರ್ ಪ್ರಥಮ ಸ್ಥಾನ, ಸಿ.ಕೆ.ವಿಜಯ್‌ಕುಮಾರ್ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಕೃಷಿ ಕಾಲೇಜಿನ ಆವರಣದಲ್ಲಿ ನಡೆದ ಹೊರಾಂಗಣ ಕ್ರೀಡೆಗಳಲ್ಲಿ ಮಹಿಳಾ ವಿಭಾಗದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ಥ್ರೋಬಾಲ್ ಪ್ರಥಮ, ಹಗ್ಗಜಗ್ಗಾಟ ಪ್ರಥಮ, ಪುರುಷರ ವಿಭಾಗದಲ್ಲಿ ಹಗ್ಗಜಗ್ಗಾಟ ದ್ವಿತೀಯ ಸ್ಥಾನ ಗಳಿಸಿದೆ. ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ರೋಟರಿ ಶಿವಮೊಗ್ಗ ಸದಸ್ಯರು ಆಯ್ಕೆಯಾಗಿದ್ದಾರೆ.

ವಿಜೇತರಿಗೆ ವಲಯ ಸಹಾಯಕ ಗವರ್ನರ್ ರವಿ ಕೊಟೋಜಿ, ರಾಜೇಂದ್ರ ಪ್ರಸಾದ್ ಅವರು ಬಹುಮಾನ, ಪಾರಿತೋಷಕ, ಪ್ರಶಸ್ತಿ ಪತ್ರ ವಿತರಿಸಿದರು. ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ಎರಡು ದಿನದ ಕ್ರೀಡಾಕೂಟದ ಆತಿಥ್ಯ ವಹಿಸಿತ್ತು.

Rotary Shimoga East Institute ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ, ಕಾರ್ಯದರ್ಶಿ ಕಿಶೋರ್ ಕುಮಾರ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಸಂತ ಹೋಬಳಿದಾರ್, ಡಾ ಗುಡದಪ್ಪ ಕಸಬಿ, ಸಿ.ಕೆ. ವಿಜಯಕುಮಾರ್, ಡಾ. ರವಿಕಿರಣ್, ಮಂಜುನಾಥ ರಾವ್ ಕದಂ, ಪ್ರಜ್ವಲ್ ಜೈನ್, ಲಕ್ಷ್ಮಣ್, ದಿಲೀಪ್ ಜೈನ್, ಧರ್ಮೇಂದರ್ ಸಿಂಗ್ ಬಂಟಿ, ಕುಮಾರಸ್ವಾಮಿ, ಗಣೇಶ್ ಎಂ ಅಂಗಡಿ, ರಮೇಶ್ ಭಟ್ವ, ಜಯ ಪ್ರಕಾಶ್, ಡಾ. ಅವಿನಾಶ್, ಅನುಷ್ ಗೌಡ, ಶಶಿಕಾಂತ್ ನಾಡಿಗ್, ಮಲ್ಲೇಶ್, ಅರುಣ್ ದೀಕ್ಷಿತ್ ಹಾಗೂ ಎಲ್ಲ ಕ್ಲಬ್ ಪದಾಧಿಕಾರಿಗಳು, ರೋಟರಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...