Congress Five Guarantee ಕರ್ನಾಟಕದಲ್ಲಿ ಗ್ಯಾರಂಟಿಗಳ ತಳಹದಿಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಈಗ ತೆಲಂಗಾಣ ವಿಧಾನ ಸಭಾ ಚುನಾವಣೆಯಲ್ಲೂ ಅದೇ ಗಾಳ ಹಾಕಲಿದೆ.
ಈಚೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮತದಾರರನ್ನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.ಪತ್ರೀ ತಿಂಗಳು ಮಹಿಳೆಯರಿಗೆ
₹ 500 ದರದಲ್ಲಿ ಎಲ್ ಪಿ ಜಿ ಸಿಲಿಂಡರ್.
ಮಾಸಿಕವಾಗಿ ₹2.500. ನೆರವು.
ಕೃಷಿ ಕಾರ್ಮಿಕರಿಗೆ ವಾರ್ಷಿಕ
₹ 12,000 ಸಹಾಯಧನ.
ಕೃಷಿಕರಿಗೆ ವಾರ್ಷಿಕ
₹12,000 ನೆರವು.
ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್.
ವೃದ್ಧರಿಗೆ ₹4000 ಮಾಸಿಕ ಸಾಮಾಜಿಕ ಪಿಂಚಣಿ.
ಅರ್ಹರಿಗೆ ₹10 ಲಕ್ಷದವರೆಗೆ ಆರೋಗ್ಯ ವಿಮೆ.
ವಿದ್ಯಾರ್ಥಿಗಳಿಗೆ ₹5 ಲಕ್ಷದವರೆಗೆ ನೆರವು.
ಮತ್ತು ಉಚಿತ ವೈಫೈ.
( ಮೊಬೈಲ್/ ಲ್ಯಾಪ್ ಟಾಪ್ ಪ್ರಸ್ತಾಪವಿಲ್ಲ).
ಹೀಗೆ ಗ್ಯಾರಂಟಿಗಳ ಬಲೆ ಹೆಣೆದು ಈಗಿರುವ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಗೆ ಹೊಸ ಸವಾಲನ್ನೇ ಹಾಕಿದಂತಿದೆ.
Congress Five Guarantee ಭಾರತ ರಾಷ್ಟ್ರೀಯ ಸಮಿತಿ ಪಕ್ಷವು ಚಂದ್ರಶೇಖರ ರಾವ್ ನಾಯಕತ್ವದಲ್ಲಿ ಸದ್ಯ 97 ಸ್ಥಾನ ಗಳಿಸಿ ಆಡಳಿತ ನಡೆಸುತ್ತಿದೆ.
ಒಟ್ಟು 119 ಸ್ಥಾನಗಳಿಗೆ ಪ್ರಸ್ತುತವ ಚುನಾವಣೆ ನಡೆಯಲಿದೆ. ಈಗ ಗ್ಯಾರಂಟಿ ಬಿರುಗಾಳಿ, ಮೋದಿ ಮಾರುತ, ಇತ್ಯಾದಿಗಳಿಂದ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಮತ್ತೆ ಗಾದಿಗೇರುತ್ತಾರ ಎಂಬುದನ್ನ ಕಾದು ನೋಡ ಬೇಕಿದೆ.