Friday, November 22, 2024
Friday, November 22, 2024

Veterinary College Hassan  ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿಗೆ ಗುಂಪು ಆಟಗಳ ಸ್ಪರ್ಧೆಯಲ್ಲಿ ರನ್ನರ್ ಅಪ್ ಪ್ರಶಸ್ತಿ

Date:

Veterinary College, Hassan  ಕರ್ನಾಟಕದ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ನ ಅಧೀನದಲ್ಲಿ ಬರುವಂತಹ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಹಾಸನದ ಪಶು ವೈದ್ಯಕೀಯ ವಿದ್ಯಾಲಯವು ಹಾಸನದಲ್ಲಿ ಆಯೋಜಿಸಲಾಗಿದ್ದ 17ನೇ ಅಂತರ್ ಮಹಾವಿದ್ಯಾಲಯಗಳ ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಶಿವಮೊಗ್ಗದ ಪಶು ವೈದ್ಯಕೀಯ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಖೋ – ಖೋ, ಬಾಸ್ಕೆಟ್ ಬಾಲ್ ಹಾಗೂ ವಾಲಿಬಾಲ್ ನಲ್ಲಿ ಪ್ರಥಮ ಸ್ಥಾನವನ್ನು, ಚೆಸ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವುದರೊಂದಿಗೆ 32 ಅಂಕಗಳನ್ನು ಪಡೆದು ಗುಂಪು ಆಟಗಳ ಸ್ಪರ್ಧೆಯಲ್ಲಿ ಕ್ರೀಡಾಕೂಟದ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

ಅಥ್ಲೆಟಿಕ್ಸ್ ಪುರುಷರ ವಿಭಾಗ ದಲ್ಲಿ 40 ಅಂಕಗಳು ಹಾಗೂ ಮಹಿಳೆಯರ ಅಥ್ಲೆಟಿಕ್ಸ್ ವಿಭಾಗದಲ್ಲಿ 22 ಅಂಕಗಳು ಪಡೆದು ಒಟ್ಟು 62 ಅಂಕಗಳನ್ನು ಗಳಿಸುವುದರೊಂದಿಗೆ ಈ ಕ್ರೀಡಾಕೂಟದ ವಿಭಾಗದಲ್ಲಿ ರನ್ನರ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಗುಂಪು ಆಟಗಳಲ್ಲಿ 32 ಅಂಕಗಳು ಅಥ್ಲೆಟಿಕ್ಸ್ ವಿಭಾಗದಲ್ಲಿ 62 ಅಂಕಗಳನ್ನು ಪಡೆದು ಒಟ್ಟು 94 ಅಂಕಗಳನ್ನು ಗಳಿಸುವುದರೊಂದಿಗೆ ಶಿವಮೊಗ್ಗದ ಪಶು ವೈದ್ಯಕೀಯ ಮಹಾ ವಿದ್ಯಾಲಯವು 17 ನೇ ಅಂತರ್ ಮಹಾವಿದ್ಯಾಲಯಗಳ ರಾಜ್ಯ ಮಟ್ಟದ ಕ್ರೀಡಾಕೂಟದ ಎರಡು ವಿಭಾಗಗಳಲ್ಲಿಯೂ ಉತ್ತಮ ಸಾಧನೆ ಮಾಡಿ ರನ್ನರ್ ಆಫ್ ಪ್ರಶಸ್ತಿಯನ್ನು ಪಡೆಯುವುದರೊಂದಿಗೆ ಜಿಲ್ಲೆಗೂ ಹಾಗೂ ಮಹಾವಿದ್ಯಾಲಯಕ್ಕೆ ಗೌರವವನ್ನು ತಂದು ಕೊಟ್ಟಿರುತ್ತಾರೆ.

ಅಥ್ಲೆಟಿಕ್ಸ್ ಮಹಿಳೆಯರ ವಿಭಾಗದಲ್ಲಿ ಸೌಪರ್ಣಿಕ ಸಿ.ಎ. 100ಮೀ, 200 ಮೀ, 400 ಮೀ ಓಟದಲ್ಲಿ ಪ್ರಥಮ ಸ್ಥಾನ. ಎತ್ತರ ಜಿಗಿತ, ಉದ್ದ ಜಿಗಿತ ದಲ್ಲಿ ದ್ವಿತೀಯ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಶಿಫ್ ನ್ನು ತನ್ನದಾಗಿಸಿ ಕೊಂಡಿರುತ್ತಾರೆ.

ಈ ಕ್ರೀಡಾ ಪ್ರತಿಭೆಗಳು ಗುಂಪು ಮತ್ತು ಅಥ್ಲೆಟಿಕ್ಸ್ ವಿಭಾಗಗಳಲ್ಲಿ ಪುರುಷ ಮತ್ತು ಮಹಿಳೆಯರು ಉತ್ತಮ ಆಟದ ಪ್ರದರ್ಶನ ನೀಡಿ ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅತ್ಯಾಕರ್ಷಕ ಟ್ರೋಫಿ ಮತ್ತು ಪ್ರಶಸ್ತಿ ಪತ್ರ, ಬಹುಮಾನಗಳನ್ನು ತಂದು ಕೊಟ್ಟಿರುತ್ತಾರೆ.

Veterinary College, Hassan  ಕ್ರೀಡಾ ಪ್ರತಿಭೆಗಳ ಮುಂದಿನ ಕ್ರೀಡಾ ಜೀವನ ಯಶಸ್ವಿಯಾಗಲೆಂದು ಮಹಾವಿದ್ಯಾಲಯದ ಡಿನ್ ಡಾ. ಗಣೇಶ್ ಉಡುಪರವರು ಹಾಗೂ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಶುಭ ಹಾರೈಸಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...