Jawaharlal Nehru Birth Anniversary: ಚಿಕ್ಕಮಗಳೂರು, ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯ ಶಾಸಕರ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ. ಜವಾಹರ್‌ಲಾಲ್ ನೆಹರು ಅವರು ಜನ್ಮದಿನಾಚರಣೆ ಪ್ರಯುಕ್ತ ಕಾಂಗ್ರೆಸ್ ಮುಖಂಡರುಗಳು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಮಂಗಳವಾರ ಜನ್ಮದಿನ ಆಚರಿಸಿದರು.
ಬಳಿಕ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಂದರ್ಯ ಜಗದೀಶ್ ಜವಾಹರಲಾಲ್ ನೆಹರುರವರ ಗಮನಾರ್ಹ ಜೀವನ ಹಾಗೂ ಆಧುನಿಕ ಭಾರತ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆಯನ್ನು ಸುಲಭವಲ್ಲ. ಅವರ ಕೆಲವು ಅಭಿಪ್ರಾಯ, ಕಾರ್ಯಗಳು ಮತ್ತು ಅವರು ಬಿಟ್ಟುಹೋದ ಪರಂಪರೆಯನ್ನು ಮುಂ ದಿನ ಜನಾಂಗಕ್ಕೆ ಮಾದರಿ ಎಂದರು.
ಆಧುನಿಕ ಭಾರತ ಹೇಗಿರಬೇಕೆಂಬುದರ ಬಗ್ಗೆ ನೆಹರೂ ಅವರಿಗೆ ಸ್ಪಷ್ಟ ದೃಷ್ಟಿಯಿತ್ತು ಮತ್ತು ಅವರು ಯುವ ರಾಷ್ಟ್ರವನ್ನು ಬೆಂಬಲಿಸುವ ಬಲವಾದ ಸ್ತಂಭಗಳನ್ನು ಸ್ಥಾಪಿಸುವ ಮೂಲಕ ತಮ್ಮ ಕನಸುಗಳನ್ನು ನನಸಾಗಿಸಲು ಹೊರಟರು. ಭಾರತ ಇಂದು ರೋಮಾಂಚಕ ಪ್ರಜಾಪ್ರಭುತ್ವವಾಗಿದ್ದರೆ ಅದಕ್ಕೆ ನೆಹರೂ ಹಾಕಿದ ಅಡಿಪಾಯವೇ ಕಾರಣ ಎಂದರು.
ಸಾಮಾಜಿಕ ಜಾಲತಾಣದ ಜಿಲ್ಲಾ ಕಾರ್ಯಾಧ್ಯಕ್ಷ ಸತೀಶ್ ಎತ್ತಿನಮನೆ ಮಾತನಾಡಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದರೆ ಅದು ನೆಹರೂ ಅವರು ಸ್ಥಾಪಿಸಿದ ಬಹುಪಯೋಗಿ ಯೋಜನೆಗಳು, ಸಾರ್ವಜನಿಕ ವಲಯ, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವ್ಯವಸ್ಥಿತ ಯೋಜನೆ ಪ್ರಕ್ರಿಯೆಯಿಂ ದಾಗಿದೆ ಎಂದು ತಿಳಿಸಿದರು.
ಭಾರತವು ಇಂದು ವಿಶ್ವದ ತಾಂತ್ರಿಕವಾಗಿ ಮುಂದುವರಿದ ರಾಷ್ಟ್ರಗಳ ನಡುವೆ ಎಣಿಸಲ್ಪಟ್ಟಿದ್ದರೆ, ನೆಹರೂ ಅವರ ವೈಜ್ಞಾನಿಕ ಮನೋಭಾವದ ಪ್ರಚಾರ ಮತ್ತು ಅವರು ದೇಶದಾದ್ಯಂತ ನಿರ್ಮಿಸಿದ ವೈಜ್ಞಾನಿಕ ಸಂಶೋಧನಾ ಪ್ರಯೋಗಾಲಯಗಳ ಸರಪಳಿಯಿಂದಾಗಿದೆ ಎಂದು ವಿವರಿಸಿದರು.
Jawaharlal Nehru Birth Anniversary: ಈ ಸಂದರ್ಭದಲ್ಲಿ ಸಖರಾಯಪಟ್ಟಣ ಗ್ರಾ.ಪಂ. ಸದಸ್ಯ ಲೋಕೇಶ್, ಮಾಜಿ ಸದಸ್ಯ ಸೋಮಶೇಖರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಮುಖಂಡರುಗಳಾದ ಜಗದೀಶ್, ನವೀನ್ ಎತ್ತಿನಮನೆ, ಅಜ್ಜಯಣ್ಣ, ಮಾಣಿಕ್ಯ ಮತ್ತಿತರರು ಉಪಸ್ಥಿತರಿದ್ದರು.