Friday, November 22, 2024
Friday, November 22, 2024

Karnataka Rajyotsava ಕನ್ನಡದ ಕಂಪು ಹಬ್ಬಿಸುವವರು ಆಟೋ ಚಾಲಕರು – ರಾಜೇಗೌಡ

Date:

Karnataka Rajyotsava ದೈನಂದಿನ ಎಲ್ಲಾ ಗ್ರಾಹಕರೊಂದಿಗೆ ನಿರರ್ಗಳವಾಗಿ ಮಾತನಾಡುವ ಮೂಲಕ ಕನ್ನಡ ಭಾಷೆಯ ಸವಿಯನ್ನು ಎಲ್ಲೆಡೆ ಪಸರಿಸುವ ಮಹತ್ತರ ಕಾರ್ಯವನ್ನು ಆಟೋ ಚಾಲಕರು ಜವಾ ಬ್ದಾರಿಯುತವಾಗಿ ಮಾಡುತ್ತಿದ್ದಾರೆ ಎಂದು ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಹೇಳಿದರು.

ಚಿಕ್ಕಮಗಳೂರು ನಗರದ ಕೆಂಪನಹಳ್ಳಿ ಸಮೀಪ ಆಟೋ ಚಾಲಕರು, ಮಾಲೀಕರ ಸಂಘ ಹಾಗೂ ಕನ್ನಡಸೇನೆ ವತಿಯಿಂದ ಬುಧವಾರ ಏರ್ಪಡಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬುಧವಾರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕನ್ನಡಭಾಷೆಯ ಬಗ್ಗೆ ವಿಶೇಷ ಅಭಿಮಾನ ಹೊಂದಿರುವ ಆಟೋ ಚಾಲಕರು ಎಂತಹ ಪ್ರವಾಸಿಗರು ಜಿಲ್ಲೆಗಾ ಮಿಸಿದರೂ ಕೂಡಾ ಮೊದಲು ಕನ್ನಡದಲ್ಲೇ ಉತ್ತರಿಸುವ ಮೂಲಕ ಭಾಷೆಗೆ ಒತ್ತು ನೀಡಿದ್ದಾರೆ. ಅದಲ್ಲದೇ ನಾಡಿನ ಜಲ, ಭಾಷೆ, ಘನತೆಗೆ ಧಕ್ಕೆಯುಂಟಾದ ಸಂದರ್ಭದಲ್ಲಿ ಮೊದಲ ಸಾಲಿನಲ್ಲಿ ನಿಂತು ಹೋರಾಟಕ್ಕೆ ಮುಂದಾಗಲಿ ದ್ದಾರೆ ಎಂದು ಹೇಳಿದರು.

ನಗರದ ಹಲವಾರು ಆಟೋ ವೃತ್ತಗಳಲ್ಲಿ ಚಾಲಕರು ಮತ್ತು ಮಾಲೀಕರು ಕನ್ನಡ ರಾಜ್ಯೋತ್ಸವನ್ನು ಈ ಬಾರಿ ಅತ್ಯಂತ ವಿಜಂಭ್ರಮಣೆಯಿ0ದ ಆಚರಿಸಿದ್ದಾರೆ. ಜೊತೆಗೆ ಮಾನವೀತೆಯ ದೃಷ್ಟಿಯಿಂದ ಸಾರ್ವಜನಿಕ ಅನ್ನಸಂ ತರ್ಪಣೆ ಸೇರಿದಂತೆ ಇನ್ನಿತರ ಸಾಮಾಜಿಕ ಕಾರ್ಯಗಳಿಗೂ ಕೈಜೋಡಿಸುತ್ತಿದ್ದಾರೆ ಎಂದು ತಿಳಿಸಿದರು.

ಕೆಂಪನಹಳ್ಳಿ ಆಟೋ ಚಾಲಕರ ಸಂಘದ ಅಧ್ಯಕ್ಷ ಪುನೀತ್ ಮಾತನಾಡಿ ಕಳೆದ ಎರಡು ವರ್ಷಗಳಿಂದ ಅತ್ಯಂತ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಭಾಷೆಯ ಬೆಳವಣಿಗೆಗೆ ಸಹಕರಿಸಲಾಗು ತ್ತಿದೆ ಎಂದ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡಮಟ್ಟಿನಲ್ಲಿ ರಾಜ್ಯೋತ್ಸವ ಆಚರಿಸಿ ಸಾಮಾಜಿಕ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಆಟೋ ಚಾಲಕರು ಪ್ರತಿನಿತ್ಯದ ಬಾಡಿಗೆ ವಿಚಾರದಲ್ಲಿ ಹಲವಾರು ತೊಂದರೆಗಳಿದ್ದರೂ ಸಹ ರಾಜ್ಯೋತ್ಸವ ಸಂದರ್ಭದಲ್ಲಿ ಯಾವುದಕ್ಕೂ ಅಂಜದೇ ಎಲ್ಲರ ಸಹಕಾರ ಪಡೆದುಕೊಂಡು ಪ್ರತಿವರ್ಷವು ಸಡಗರದಿಂದ ರಾಜ್ಯೋ ತ್ಸವ ಕನ್ನಡಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

Karnataka Rajyotsava ಈ ಸಂದರ್ಭದಲ್ಲಿ ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಮುಖಂಡರಾದ ನವೀನ್‌ಕು ಮಾರ್, ಯೋಗೀಶ್, ನಿಲೇಶ್, ಗ್ರಾಮದ ಹಿರಿಯ ಮುಖಂಡರಾದ ನೀಲಕಂಠ, ಉದಯಮೂರ್ತಿ, ಶಿಕ್ಷಕ ಶಿವಪ್ಪ, ಆಟೋ ಚಾಲಕರಾದ ಕುಮಾರ್, ಚಂದ್ರು, ಪ್ರವೀಣ್, ಗಣೇಶ್, ಸುನೀಲ್, ಹರೀಶ್, ಮನು ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...