World Cup Cricket ಭಾರತ ವಿಶ್ವ ಕಪ್ ಕ್ರಿಕೆಟ್ ಫೈನಲ್ ತಲುಪಿದೆ. ಈ ಮೂಲಕ ಕ್ರಿಕೆಟ್ ಜಗತ್ತಲ್ಲಿ ಹೊಸ ಮೈಲುಗಲ್ಲು ಸಾಧಿಸಿದೆ. ಭಾರತಿಯರು ಸಂತೋಷ ಪಡುವಂತಾಗಿದೆ.
ನಿನ್ನೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 4 ವಿಕೆಟ್ ಕಳೆದುಕೊಂಡು ನಿಗದಿತ 50 ಓವರ್ ಗಳಲ್ಲಿ 397ರನ್ ಗಳಿಸಿತು.
ನ್ಯೂಜಿಲೆಂಡ್ ತಂಡಕ್ಕೆ ಗೆಲಲ್ಲು 398ರನ್ ಬೇಕಾಗಿತ್ತು. ಆದರೆ, ನ್ಯೂಜಿಲ್ಯಾಂಡ್ 48.5ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 327ರನ್ ಗಳಿಸಿ ಸೋಲನ್ನು ಅನುಭವಿಸಿತು… ಇದರಿಂದಾಗಿ ಭಾರತಕ್ಕೆ 70 ರನ್ ಗಳ ಭರ್ಜರಿ ಜಯ ಲಭಿಸಿತು.
ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು279 ಇನ್ನಿಂಗ್ಸ್ ಗಳಲ್ಲಿ ಆಡಿ, 50 ನೇ ಶತಕ ಗಳಿಸಿದರು. ಇದರಿಂದ ಸಚಿನ್ ಅವರ ದಾಖಲೆಯಾದ 463 ಇನ್ನಿಂಗ್ಸ್ ಗಳಲ್ಲಿ 49 ಶತಕ ಸಾಧಿಸಿದ ದಾಖಲೆಯನ್ನು ಬದಿಗೊತ್ತಿದ್ದಾರೆ…
ಕೊಹ್ಲಿ ಅವರು ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂ ಜಿಲ್ಯಾಂಡ್ ವಿರುದ್ಧ ದಿಟ್ಟ ಆಟ ವಾಡಿ ಆಕರ್ಷಕ 117ರನ್ ಗಳಿಸಿದರು. 113 ಎಸೆತಗಳನ್ನು ಎದುರಿಸಿ, 9 ಬೌಂಡರಿ ಮತ್ತು 2ಆಕರ್ಷಕ ಸಿಕ್ಸ್ ರ್ ಹೊಡೆದರು. ತಮ್ಮ ದಾಖಲೆಯನ್ನು ಮುರಿದ ವಿರಾಟ್ ಅವರಿಗೆ ಸಚಿನ್ ತೆಂಡೂಲ್ಕರ್ ಗಣ್ಯರ ಗ್ಯಾಲರಿ ಯಲ್ಲಿ ಎದ್ದುನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು.
ಭಾರತದ ಹೆಮ್ಮೆಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಒಂದೇ ಪಂದ್ಯದಲ್ಲಿ ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ ಅವರ ಎರಡು ದಾಖಲೆಗಳನ್ನು ಮುರಿದಿದ್ದಾರೆ. ಇಂತಹ ಸಾಧನೆ ಮಾಡಿದ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದಾರೆ.
2003ರ ವರ್ಡಕಪ್ ಪಂದ್ಯಾವಳಿಯಲ್ಲಿ ಸಚಿನ್ ತೆಂಡೂಲ್ಕರ್ ಅವರು ಗಳಿಸಿರುವ 673ರನ್ ದಾಖಲೆಯಾಗಿತ್ತು. 2023ರ ವರ್ಡ್ ಕಪ್ ಖುತುವಿನಲ್ಲಿ ವಿರಾಟ್ ಕೊಹ್ಲಿ ಅವರು, ಇದುವರೆಗೂ ಗಳಿಸಿದ 711ರನ್ ಮತ್ತೊಂದು ದಾಖಲೆಯಾಗಿದೆ.
ವಿರಾಟ್ ಕೊಹ್ಲಿ ಅವರ 50 ಶತಕ ಎಷ್ಟು ಆಕರ್ಷಕವಾಗಿತ್ತೋ, ಅಷ್ಟೇ ಬಿರುಸಿನ ಬೌಲಿಂಗ್ ಮಾಡಿದ ಮಹಮದ್ ಶಮಿ ಸಾಧನೆ ಕೂಡ ಇಲ್ಲಿ ಗಮನಾರ್ಹ…
World Cup Cricket ಶಮಿ ನ್ಯೂಜಿಲೆಂಡ್ ನ ಪ್ರಮುಖ ಆಟಗಾರರ ವಿಕೆಟ್ ಬಲಿಪಡೆದರು.. ಅವರು 9.5 ಓವರ್ ಗಳಲ್ಲಿ 57 ರನ್ ನೀಡಿ 7 ವಿಕೆಟ್ ಗಳಿಸಿ ಕೆ ಜಯ ಲಭಿಸುವಂತೆ ಮಾಡಿದರು.