Mahila Sweda Santhe ನಮ್ಮ ಇಂದಿನ ಅವಶ್ಯಕತೆ ಮಹಿಳಾ ಅಭಿವೃದ್ಧಿ ಅಲ್ಲ , ಮಹಿಳಾ ನೇತೃತ್ವದ ಅಭಿವೃದ್ಧಿ… ಇದು ನಮ್ಮ ಪ್ರಧಾನ ಮಂತ್ರಿಗಳ ನುಡಿ. ಇಂದು ನಾವು ಕೃಷಿಯಿಂದ ಕಕ್ಷೆಯವರೆಗೆ ಎಲ್ಲ ಕ್ಷೇತ್ರದಲ್ಲೂ ಮಹಿಳೆ ತನ್ನ ಛಾಪನ್ನು ಮೂಡಿಸುತ್ತಿರುವುದಕ್ಕೆ ಸಾಕ್ಷಿಭೂತರಾಗಿದ್ದೇವೆ. ಅವಳಿಗೆ ಬೇಕಾಗಿರುವುದು ಒಂದು ಸಣ್ಣ ಪ್ರೋತ್ಸಾಹ. ನಿಮ್ಮೊಂದಿಗೆ ನಾವಿದ್ದೇವೆಂಬ ಒಂದು ಭರವಸೆ. ತಾಯಿಯಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ಮಗಳಾಗಿ , ಗೆಳತಿಯಾಗಿ ಹೀಗೆ ನಾನಾ ರೀತಿಯಲ್ಲಿ ಬದುಕಿಗೆ ಬಣ್ಣ ತುಂಬಿ ಬದುಕಿಗೆ ಸಾರ್ಥಕತೆಯನ್ನುತುಂಬುವ ಹೆಣ್ಣು ಇಂದು ಬೇರೆ ಬೇರೆ ಸ್ಥಾನಗಳನ್ನು ಅಲಂಕರಿಸಿ ಸಾಧನೆಯ ಹಾದಿಯಲ್ಲಿ ಗೆಲುವಿನ ಹೆಜ್ಜೆಗಳನ್ನು ಇಟ್ಟು ನಮ್ಮ ನಿಮ್ಮ ನಡುವೆ ಸಂಚರಿಸುತ್ತಿದ್ದಾಳೆ.
ಅಂತಹ ಒಂದು ಕ್ಷೇತ್ರ ಉದ್ಯಮ ಕ್ಷೇತ್ರ. ಉದ್ಯಮಿಯಾಗಿ ತನ್ನನ್ನು ರೂಪಿಸಿಕೊಂಡು ಉದ್ಯೋಗದಾತೆಯಾಗಿ ಹಲವರ ಬದುಕಿಗೆ ಆಧಾರವಾಗಿದ್ದಾಳೆ. ಅಂತರ ರಾಷ್ಟೀಯ ಮಹಿಳಾ ದಿನಾಚರಣೆಯ ಅಂಗ್ಕವಾಗಿ ಅಂತಹ ಮಹಿಳಾ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಜನತೆಗೆ ಪರಿಚಯಿಸಲು ಸ್ವೇದ ಮಹಿಳಾ ಉದ್ಯಮಿಗಳ ಸಂಘ 16.11.23 ರಿಂದ 20. 11.23 ರ ವರೆಗೆ ಸ್ವೇದ ಸಂತೆ ಆಯೋಜಿಸಿದೆ.
Mahila Sweda Santhe ಸ್ಥಳ: ಮಹಿಳಾ ಬಜಾರ್ ಕೆ. ಆರ್. ಪುರಂ ಶಾಲೆ ಎದುರು. ( ಓ.ಟಿ. ರೋಡ್ ಹತ್ತಿರ) ಶಿವಮೊಗ್ಗ. ಶಿವಮೊಗ್ಗದ ಜನತೆ ಈ ಸಂತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಿ ಅವರು ಸಾಧನೆಯ ಹಾದಿಯಲ್ಲಿ ಇನ್ನೊಂದಷ್ಟು ಹೆಜ್ಜೆ ಇಡಲು ಅನುವು ಮಾಡಿಕೊಡಬೇಕೆಂದು ಸ್ವೇದ ಸಂಸ್ಥೆಯ ಅಧ್ಯಕ್ಷೆ ಡಾ. ಬಿ. ವಿ. ಲಕ್ಷ್ಮಿದೇವಿ ಗೋಪಿನಾಥ್ ಕೋರಿದ್ದಾರೆ. ವೋಕಲ್ ಫಾರ್ ಲೋಕಲ್ ಗೆ ನಾವು ಮಾದರಿಯಾಗೋಣ.