Indian Railway ಪ್ರಯಾಣಿಕರ ಸುರಕ್ಷತೆಗಾಗಿ ಭಾರತೀಯ ರೈಲ್ವೆಯು 54 ಸಾವಿರಕ್ಕೂ ಹೆಚ್ಚು ಬೋಗಿಗಳಲ್ಲಿ ಮತ್ತು 5 ಸಾವಿರ ಎಲೆಕ್ನಿಕ್ ಲೋಕೊಮೋಟಿವ್ ಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಿದೆ.
ಒಟ್ಟು 82 ಸಾವಿರಬೋಗಿಗಳಿಗೆ ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಸುವ ಗುರಿ ಹೊಂದಲಾಗಿದೆ.
ಅಂದಾಜು 32,200 ಕೋಟಿ ವೆಚ್ಚದ ಈ ಯೋಜನೆಯನ್ನು ರೈಲ್ವೆ ಮಾಹಿತಿ ವ್ಯವಸ್ಥೆಯ ಕೇಂದ್ರವು (ಸಿಆರ್‌ಐಎಸ್) ಜಾರಿಗೊಳಿಸುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
Indian Railway ರಾಜಧಾನಿ ಮತ್ತು ವಂದೇ ಭಾರತ್ ರೈಲುಗಳ ಬೋಗಿಗಳು ಸೇರಿದಂತೆ ಸದ್ಯ 7 ಸಾವಿರ ಬೋಗಿಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳು ಹಾಗೂ ಉಪನಗರ ರೈಲುಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದಿದ್ದಾರೆ.