Ripponpet ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯಲ್ಲಿ ಮುಸ್ಲಿಂ ಯುವಕ ಹಾಗೂ ಆತನ ಸ್ನೇಹಿತರು ಹಿಂದೂ ಸಂಪ್ರದಾಯದಂತೆ ಲಕ್ಷ್ಮೀ ಪೂಜೆ ನೆರವೇರಿಸಿದರು.
ಪಟ್ಟಣದ ಸಮೀಪದ ಅರಸಾಳು ಮೂಲದ ತನ್ವೀರ್ ಎಂಬ ಯುವಕ ವಿನಾಯಕ ವೃತ್ತದಲ್ಲಿರುವ ಜೊಹರಾ ಕಾಂಪ್ಲೆಕ್ಸ್ ನಲ್ಲಿ “ತನ್ವಿ ಮೊಬೈಲ್ ವರ್ಡ್” ಎಂಬ ಅಂಗಡಿ ತೆರೆದಿದ್ದಾರೆ. ಪ್ರತೀ ವರ್ಷ ತಮ್ಮ ಅಂಗಡಿಯಲ್ಲಿ ಹಿಂದೂ ಸಂಪ್ರದಾಯದಂತೆ ಕಳಸ ಇರಿಸಿ, ಹಣ್ಣು ಕಾಯಿ ನೈವೆದ್ಯ ಅರ್ಪಿಸುವ ಮೂಲಕ ಪುರೋಹಿತರಿಂದ ಪೂಜೆ ನೆರೆವೇರಿಸುತ್ತಾ ಬಂದಿದ್ದಾರೆ.ಅಂದೇ ಮುಸ್ಲಿಂ ಧರ್ಮಗುರುಗಳಿಂದ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಹಲವಾರು ವರ್ಷಗಳಿಂದ ಭಾವೈಕ್ಯತೆ ಸಾರುತಿದ್ದಾರೆ.
Ripponpet ಪ್ರಸ್ತುತ ಎಲ್ಲೆಡೆ ಜನರ ಭಾವನೆಗಳ ನಡುವೆ ವಿಷ ಬೀಜ ಬಿತ್ತಿ ಕೋಮು ದಳ್ಳುರಿ ನಡೆಸಿ ತಮ್ಮ ಬೇಳೆ ಬೇಯಿಸಿಕೊಳ್ಳುವವರ ನಡುವೆ ರಿಪ್ಪನ್‌ಪೇಟೆ ಎಂಬ ಹಳ್ಳಿ ಸೊಗಡಿನ ಊರಿನ ಮಣ್ಣು ಭಾವೈಕ್ಯತೆಯ ಕೇಂದ್ರಬಿಂದುವಾಗಿದೆ.