Sharana Sahitya Parishath ಪುರಾತನ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಉಳಿಸುವ ಜೊತೆಗೆ ಗಗನದೆತ್ತರಕ್ಕೆ ಬೆಳೆಸುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಧ್ಯೇಯವಾಗಿರಬೇಕು ಎಂದು ಶರಣ ಸಾಹಿತ್ಯ ಪರಿಷತ್ ಹೋಬಳಿ ಗೌರವಾಧ್ಯಕ್ಷ ಕೆ.ಬಿ.ಬಸವರಾಜಪ್ಪ ಹೇಳಿದರು.
ಮತೀಘಟ್ಟ ಗ್ರಾಮದಲ್ಲಿ ಸಿರಿಗನ್ನಡ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ಹನ್ನೊಂದನೇ ದಿನದ ನುಡಿನಿತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಿಗರಾದ ನಾವುಗಳು ಎಲ್ಲಿಯವರೆಗೂ ಕನ್ನಡದ ಮೇಲಿನ ಅಭಿಮಾನವನ್ನು ನಿಷ್ಟೆ ಹಾಗೂ ಪ್ರಾಮಾಣಕತೆಯಿಂದ ಕಾಪಾಡಿಕೊಳ್ಳುತ್ತೇವೆಯೋ ಅಲ್ಲಿಯತನಕ ಕನ್ನಡ ಭಾಷೆಯ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಕನ್ನ ಡಿಗರು ಮೂಲತ ಶಾಂತಿಪ್ರಿಯಾಗಿದ್ದು ನಾಡು, ನುಡಿ ವಿಷಯದಲ್ಲಿ ಧಕ್ಕೆಯುಂಟಾದಾಗ ಎದೆಗುಂದದೇ ಧೈರ್ಯ ವಾಗಿ ಮುನ್ನಡೆಸುವ ಛಲವನ್ನು ಹೊಂದಿರುವವರು ಎಂದರು.
ವಿವಿಧ ಭಾಷಾನುಸಾರವಾಗಿ ಪ್ರಾಂತ್ಯಗಳ ರಚನೆಯಾಗಿದ್ದರ ಫಲವಾಗಿ ಕರ್ನಾಟಕ ಅಸ್ಥಿತ್ವಕ್ಕೆ ಬಂತು. ಆ ಕಾಲ ದಲ್ಲಿ ಕರ್ನಾಟಕದ ಮೊದಲು ಮೈಸೂರು ರಾಜ್ಯವಾಗಿತ್ತು.
೧೯೭೩ರಲ್ಲಿ ದೇವರಾಜ ಅರಸ್‌ರವರು ಮೈಸೂರು ರಾಜ್ಯ ವನ್ನು ಕರ್ನಾಟಕ ಎಂದು ನಾಮಕರಣಗೊಳಿಸಿದ್ದರು ಎಂದು ತಿಳಿಸಿದರು.
ಅಕ್ಕಮಹಾದೇವಿ ವಚನಗಳ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಶರಣ ಸಾಹಿತ್ಯ ಹೋಬಳಿ ಅಧ್ಯಕ್ಷೆ ಶ್ರೀಮತಿ ಶೀಲಾ ನಂಜುಂಡಪ್ಪ ಅಕ್ಕಮಹಾದೇವಿ ವಚನಗಳು ಸರ್ವಕಾಲಿಕ ಸತ್ಯಗಳಾಗಿವೆ. ಅಕ್ಕನ ವಚನ ಗಳನ್ನು ವಿಶ್ಲೇಷಿಸುತ್ತಾ ಹೋದಂತೆಲ್ಲಾ ನಮ್ಮ ಲೌಕಿಕ ಜೀವನ ಹಸನಾಗುವುದು ಎಂದು ಹೇಳಿದರು.
Sharana Sahitya Parishath ಅಕ್ಕಮಹಾದೇವಿ ಕೌಶಿಕರಾಜನ ಮದುವೆಯಾಗಿ ಮೂರು ಷರತ್ತುಗಳಲ್ಲಿ ಕೌಶಿಕನು ನಿಭಂದನೆಗೆ ಮಾರಕವಾ ದಾಗ, ಅಕ್ಕಮಹಾದೇವಿ ಅನುಭವಮಂಟಪ ಸೇರಿದಳು, ಅಲ್ಲಿ ಶರಣರ ವ್ಯಂಗ್ಯವನ್ನು ಮೆಟ್ಟಿನಿಂತು ೩೫೦ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದರು. ಚನ್ನಮಲ್ಲಿಕಾರ್ಜುನನ್ನೇ ತನ್ನ ಪತಿಯೆಂದು ಭಗವಂತನಲ್ಲಿ ಲೀನವಾದ ಮೊದಲ ಕವಿಯತ್ರಿ ಎನಿಸಿಕೊಂಡವರು ಎಂದರು.
ಶಿಕ್ಷಕಿ ಎಂ.ವಿ.ವಿನಯ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರಗಳು ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು. ಇತರೆ ರಾಜ್ಯ ಹಾಗೂ ದೇಶಗಳ ಮಾದರಿಯಲ್ಲಿ ಅವರವರ ಭಾಷೆಗಳಿಗೆ ಒತ್ತು ನೀಡಿದಂತೆ ಕರ್ನಾಟಕದಲ್ಲೇ ಹೆಚ್ಚು ಪ್ರಾಮುಖ್ಯತೆಯನ್ನು ಕನ್ನಡಕ್ಕೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಕೊಟ್ರೇಶಪ್ಪ ವಹಿಸಿದ್ದರು. ಈ ಸಂದರ್ಭದಲ್ಲಿ ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಎಂ.ಆರ್.ಪ್ರಕಾಶ್, ಮುಖಂಡರಾದ ಎಂ.ಹೆಚ್.ನಟರಾಜು, ಚಂದ್ರಶೇಖರ್, ಬಸಪ್ಪ, ಶ್ರೀಮತಿ ಶೋಭಾ, ಮಹೇಶ್, ವಿರೂಪಾಕ್ಷಪ್ಪ, ಯಶೋಧರ, ಪ್ರಕಾಶ್ ಮತ್ತಿತರರು ಹಾಜರಿದ್ದರು.