Crop Destruction ಮಲೆನಾಡಿನ ಹಲವೆಡೆ ಕಾಡಾನೆಗಳ ಹಾವಳಿ ಹೆಚ್ಚಾಗಿದೆ.
ಶಿವಮೊಗ್ಗದಲ್ಲಿ ಮತ್ತೇ ಮಾನವ- ವನ್ಯಜೀವಿಗಳ ಸಂಘರ್ಷ ಹೆಚ್ಚಾಗಿದೆ.
ಬರದ ನಡುವೆ ಬಂದಿದ್ದ ಅಲ್ಪಸ್ವಲ್ಪ ಬೆಳೆಯೂ ಇದೀಗ ವನ್ಯಜೀವಿಗಳ ಪಾಲಾಗುತ್ತಿದೆ.
ರೈತರ ಜಮೀನಿಗೆ ಕಾಡಾನೆ ನುಗ್ಗಿ ಬೆಳೆ ನಾಶವಾಗುತ್ತಿದೆ.
ಶಿವಮೊಗ್ಗದ ಮಲೆಶಂಕರ, ಮಂಜರಿಕೊಪ್ಪ ಗ್ರಾಮದಲ್ಲಿ ಕಾಡಾನೆಗಳು ಹಿಂಡು- ಹಿಂಡಾಗಿ ದಾಳಿ ನಡೆಸಿವೆ.
ಪುರದಾಳು ಗ್ರಾ.ಪಂ ವ್ಯಾಪ್ತಿಯ ನಾಗಮ್ಮ ಕಾಲೋನಿ, ದುರ್ಗಾಂಬ ಕಾಲೋನಿಯಲ್ಲೂ ಕಾಡಾನೆ ದಾಳಿ ನಡೆಸಿವೆ.
ಭತ್ತ, ಅಡಿಕೆ, ಬಾಳೆ, ಜೋಳ, ಶುಂಠಿ ಸೇರಿದಂತೆ ಇನ್ನು ಇತರೆ ಬೆಳೆಗಳನ್ನ ಕಾಡಾನೆ ಹಿಂಡು ನಾಶ ಪಡಿಸಿವೆ.
ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಮರಗಳ ಮೇಲೆ ವಾಚ್ ಟವರ್ ನಿರ್ಮಿಸಿ ತಾವು ಬೆಳೆದ ಕಾಯುವ ಪರಿಸ್ಥಿತಿ ಬಂದಿದೆ.
ಕಾಡಾನೆಗಳ ಹಿಂಡು ಭದ್ರಾ ಅಭಯಾರಣ್ಯದಿಂದ ಬಂದು
ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಹೊಂದಿಕೊಂಡ ಗ್ರಾಮಗಳಲ್ಲಿ ನಿರಂತರವಾಗಿ ದಾಳಿ ಮಾಡುತ್ತಿವೆ.
ಇದರಿಂದ ಶಿವಮೊಗ್ಗ ತಾಲೂಕಿನ ಹಲವು ಗ್ರಾಮಗಳ ರೈತರಲ್ಲಿ ಆತಂಕ ಹೆಚ್ಚಿದೆ.
Crop Destruction ಬರಗಾಲದಿಂದ ಕಂಗೆಟ್ಟಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆಯುತ್ತಿರುವ ಪರಿಸ್ಥಿತಿ ಆಗಿದೆ.
ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.