Sagara Town Police Station ಸಾಗರದ ಜನತಾ ಶಾಲೆಯ ಎದುರಿನ ನಿವೇಶನಕ್ಕೆ ಸಂಬಂಧಿಸಿದಂತೆ ಜುಲೈ 10ರಂದು ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಾಜಿ ಸಚಿವರಾದ ಹರತಾಳು ಹಾಲಪ್ಪ ಸೇರಿದಂತೆ 43 ಜನರ ವಿರುದ್ಧ ಕೋರ್ಟ್ ಆದೇಶದಂತೆ ಸಾಗರದ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಾದ ವಿಜಯ ಕುಮಾರ್ ಪಾಟೀಲ್ ಅವರು ಪ್ರತಿಭಟನಾಕಾರರಿಗೆ ಮಾನ್ಯ ನ್ಯಾಯಾಲಯದ ಹಂಗಾಮಿ ಪ್ರತಿಬಂಧಕ ಆದೇಶವನ್ನು ತೋರಿಸಿದರು.
ಪ್ರತಿಭಟನಾಕಾರರು ನ್ಯಾಯಾಲಯದ ಹಂಗಾಮಿ ಆದೇಶವನ್ನು ಉಲ್ಲಂಘನೆ ಮಾಡಿ ಅತಿಕ್ರಮ ಪ್ರವೇಶ ಮಾಡಿ ದೂರುದಾರರಿಗೆ ಕೊಲೆ ಬೆದರಿಕೆ ಹಾಕಿ, ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆಂದು ಹಾಗೂ ನನ್ನ ಸ್ವತ್ತಿನಿಂದ ನನ್ನನ್ನು ಹೊರ ಹಾಕಬೇಕೆಂಬ ಉದ್ದೇಶದಿಂದ ಗುಂಪು ಕಟ್ಟಿಕೊಂಡು ಬಂದು ನನ್ನ ಜಾಗದಲ್ಲಿ ಅಶಾಂತಿಯನ್ನು ಉಂಟು ಮಾಡಿದ್ದಾರೆ.
ಐದನೇ ಆರೋಪಿಯಾದ ಮಾಜಿ ಸಚಿವ ಹೆಚ್.ಹಾಲಪ್ಪ ಹರತಾಳರವರು ನಾನು ಮಾಜಿ ಸಚಿವನಿದ್ದೇನೆ ಎಷ್ಟು ಕೇಸು ನೋಡಿಲ್ಲ ಎಂದು ದೂರುದಾರನಿಗೆ ಜೀವ ಬೆದರಿಕೆ ಹಾಕಿ ಮಾಧ್ಯಮದ ಎದುರು ಸುಳ್ಳು ಭಾಷಣ ಮಾಡಿರುತ್ತಾರೆಂದು ದೂರುದಾರರು ದೂರಿನಲ್ಲಿ ಉಲ್ಲೇಖಿಸಿರುತ್ತಾರೆ.
Sagara Town Police Station ಪ್ರಕರಣದಲ್ಲಿ ಹಾಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿಡಿ ಮೇಘರಾಜ್ ರವರು ಹಾಗೂ ಮಾಜಿ ನಗರಸಭೆ ಅಧ್ಯಕ್ಷರಾದ ಮಧುರ ಶಿವಾನಂದ ಅವರು ಹಾಗೂ ಸಾಗರ ನಗರ ಬಿಜೆಪಿ ಅಧ್ಯಕ್ಷರಾದ ಗಣೇಶ್ ಪ್ರಸಾದ್ ಅವರು ಹಾಗೂ ಹಾಲಪ್ಪನವರ ಬೆಂಬಲಿಗರಾದ ರವಿ ಬಸರಾಣಿ, ಹಾಗೂ ನಗರಸಭೆ ಸದಸ್ಯರು ಸೇರಿದಂತೆ 43 ಜನರ ವಿರುದ್ಧ IPC sec 1860 (u/s 141, 143, 147, 148, 441, 447, 427, 504, 506, 149) ರ ಪ್ರಕಾರ ಕೋರ್ಟ್ ಆದೇಶದ ಮೇರೆಗೆ ಪ್ರಕರಣ ದಾಖಲಾಗಿದೆ.