Friday, December 5, 2025
Friday, December 5, 2025

Kateel Ashok Pai Memorial College ಬೇರೆ ಭಾಷೆಗಳನ್ನು ಕಲಿಯೋಣ ಆದರೆ ಬೇರೆ ಭಾಷೆಯ ವ್ಯಾಮೋಹಕ್ಕೆ ಒಳಗಾಗುವುದು ಬೇಡ – ಡಾ.ಪುರುಷೋತ್ತಮ

Date:

Kateel Ashok Pai Memorial College ಮರಗಳು ಎಷ್ಟೇ ದೊಡ್ಡದಾಗಿ ಹರಡಿದ್ದರೂ ಅದರ ಬೇರೆಗಳು ತನ್ನ ಮೂಲವನ್ನು ಗಟ್ಟಿಯಾಗಿ ಹಿಡಿದಿರುತ್ತವೆ ಅದರಂತೆ ನಾವು ಯಾವ ಭಾಷೆಯನ್ನೂ ಕಲಿಸಲು ನಮ್ಮ ಮಾತೃಭಾಷೆಯನ್ನು ಮರೆಯಬಾರದು ಎಂದು ಕನ್ನಡ ಭಾರತಿ ಕುವೆಂಪು ವಿಶ್ವವಿದ್ಯಾಲಯ ಉಪನ್ಯಾಸಕರಾದ ಡಾ. ಪುರುಷೋತ್ತಮ ಅವರು ಅಭಿಪ್ರಾಯಪಟ್ಟರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಾನಸ ಟ್ರಸ್ಟ್ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಕನ್ನಡ ವಿಭಾಗದ ಸಾಹಿತ್ಯ ಸಹೃದಯ ವೇದಿಕೆಯಡಿಯಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ಚೆನ್ನುಡಿ ನಾಡಿಗೆ ಚಿನ್ನದ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜು ನಮ್ಮಲ್ಲಿರುವ ಪ್ರತಿಭೆಗೆ ವೇದಿಕೆ ಕಲ್ಪಿಸುವ ಕಾರ್ಯ ಮಾಡುತ್ತವೆ. ಶಿಸ್ತು , ಸಂಯಮವನ್ನು ಕಲ್ಪಿಸುವಲ್ಲಿ ಕಾಲೇಜು ಸಹಕಾರಿ. ಕನ್ನಡ ಭಾಷೆಗಿರುವ ಮಹತ್ವದ ಕುರಿತು ಜಾನಪದ ಗೀತೆಗಳ ಮೂಲಕ ತಿಳಿಸಿದರು. ಬೇರೆ ಭಾಷೆಗಳನ್ನು ಕಲಿಯೋಣ ಆದರೆ ಬೇರೆ ಭಾಷೆಯ ವ್ಯಾಮೋಹಕ್ಕೆ ಒಳಗಾಗುವುದು ಬೇಡ ಎಂದರು.

ಕಾಲೇಜಿನ ಶೈಕ್ಷಣಿಕ ಸವಹೆಗಾರರಾದ ಡಾ. ರಾಜೇಂದ್ರ ಚೆನ್ನಿ ಅವರು ಮಾತನಾಡಿ, ಕನ್ನಡ ಕವಿಗಳ ಪ್ರಯತ್ನದ ಫಲವಾಗಿ ಕರ್ನಾಟಕ ರಾಜ್ಯ ಹುಟ್ಟಿಕೊಂಡಿತು. ಹಲವಾರು ಚಳುವಳಿಗಳ ಮೂಲಕ ಕರ್ನಾಟಕ ರಾಜ್ಯ ಸ್ಥಾಪನೆಯಾಯಿತು. ಎಲ್ಲಾ ಜಾತಿ ಧರ್ಮದವರು ಸೇರಿ ಒಂದು ರಾಜ್ಯವನ್ನು ಕಟ್ಟಿದ್ದಾರೆ. ಅವರೆಲ್ಲರ ಪರಿಶ್ರಮಕ್ಕೆ ಪ್ರತಿಫಲ ಸಿಗುವುದು ಕನ್ನಡವನ್ನು ಜ್ಞಾನದ ಭಾಷೆಯನ್ನಾಗಿಸಿದಾಗ ಮಾತ್ರ ಸಾಧ್ಯ .ಕನ್ನಡವನ್ನು ಕನ್ನಡದಲ್ಲೇ ಮಾತನಾಡಿ ಎಂದು ಕಿವಿಮಾತನ್ನಾಡಿದರು.

ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿಯವರು ಮಾತನಾಡಿ,ಕನ್ನಡ ಪ್ರೀತಿಯನ್ನು ಆರಾಧಿಸುವ ಭಾಷೆ.ಜಗತ್ತನ್ನು ಅರ್ಥಮಾಡಿಕೊಳ್ಳಲು ಕನ್ನಡ ಭಾಷೆ ಸಹಕಾರಿ. ಕನ್ನಡವನ್ನು ಪ್ರತಿನಿಧಿಸುವ ಜಿಲ್ಲೆ ಶಿವಮೊಗ್ಗ. ಕರ್ನಾಟಕವನ್ನು ಅರ್ಥೈಸಿಕೊಳ್ಳಬೇಕಾದಾಗ ನಮ್ಮ ಮಾತೃಭಾಷೆ, ನಮ್ಮ ನೆಲ ಸಂಸ್ಕೃತಿ, ಆಚರಣೆಯನ್ನು ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು. ನಮ್ಮ ಆತ್ಮೀಯರನ್ನು ಅರಿಯಲು ನಮ್ಮ ಕನ್ನಡ ಭಾಷೆ ಬೇಕು. ಜ್ಞಾನಾರ್ಜನೆಗೂ ನಮ್ಮ ಭಾಷೆ ಸಹಕಾರಿಯಾಗುತ್ತದೆ ಎಂದರು.

Kateel Ashok Pai Memorial College ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಸಂತೋಷ್ ಕುಮಾರ್ ಎಸ್.ಜಿ, ಉಪನ್ಯಾಸಕರಾದ ಮೋಹನ್ ಕುಮಾರ್, ಪವಿತ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...