Monday, December 15, 2025
Monday, December 15, 2025

Vidya Parent Institution Davangere ಕಾರ್ಪೊರೇಟ್ ರಂಗದಲ್ಲಿ ಕಾರ್ಯ ಕುಶಲತೆಗೆ ಆದ್ಯತೆ – ಎಚ್ ಬಿ ಮಂಜುನಾಥ್

Date:

Vidya Parent Institution Davangere ಭವಿಷ್ಯದ ಜಗತ್ತಿನಲ್ಲಿ ಅದರಲ್ಲೂ ಮುಖ್ಯವಾಗಿ ಕಾರ್ಪೊರೇಟರ್ ರಂಗದಲ್ಲಿ ಉದ್ಯೋಗಾವಕಾಶಗಳನ್ನು ನಿರೀಕ್ಷಿಸುವವರು ತಮ್ಮ ಶೈಕ್ಷಣಿಕ ಸಾಧನೆಗಳಿಗಿಂತ ಕಾರ್ಯಕುಶಲತೆಯನ್ನು ರೂಢಿಸಿಕೊಂಡಿರಬೇಕು ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್ ಸಾಮಾನ್ಯ ಪದವಿ ವಿದ್ಯಾರ್ಥಿಗಳಿಗೆ ಕಿವಿ ಕಿವಿಮಾತು ಹೇಳಿದರು.

ದಾವಣಗೆರೆಯ ವಿದ್ಯಾ ಪೋಷಕ ಸಂಸ್ಥೆ ವತಿಯಿಂದ ನಗರದ ಆರ್ಯವೈಶ್ಯ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಏರ್ಪಾಡಾಗಿದ್ದ ಸಾಮಾನ್ಯ ಪದವಿ ವಿದ್ಯಾರ್ಥಿಗಳ ಸೇತು ಶಿಬಿರ ಕಾರ್ಯಕ್ರಮದಲ್ಲಿ ‘ಜೀವನ ಕೌಶಲ’ ವಿಷಯವಾಗಿ ಪ್ರಧಾನ ಉಪನ್ಯಾಸ ನೀಡುತ್ತಾ ಯಾವುದೇ ಕಾರ್ಯದ ನೈಪುಣ್ಯತೆಯನ್ನು ಕೌಶಲವೆನ್ನಬಹುದಾಗಿದ್ದು ಭವಿಷ್ಯದ ಉದ್ಯೋಗಾವಕಾಶಗಳಲ್ಲಿ ಪದವಿಗಳ ಅಂಕಗಳಿಕೆಗಿಂತಾ ಕಾರ್ಯಕುಶಲತೆಗೆ ಪ್ರಾಧಾನ್ಯತೆ ಇದ್ದು ಉದ್ಯೋಗಾರ್ಥಿಗಳ ‘ಜ್ಞಾನ’, ‘ಸಾಮರ್ಥ್ಯ’ ಹಾಗೂ ‘ಮಾಹಿತಿ’ ಈ ಮೂರಕ್ಕೆ ಚಲಾವಣಾ ಮೌಲ್ಯವಿದ್ದು ಉದ್ಯೋಗಾರ್ತಿಗಳ ದೈಹಿಕ, ಮಾನಸಿಕ ದೃಢತೆ, ಸಮಸ್ಯೆಗಳನ್ನು ಎದುರಿಸುವಲ್ಲಿನ ಸಾಮರ್ಥ್ಯ ಹಾಗೂ ಕ್ರಿಯೆ ಕಾರ್ಯ ಮತ್ತು ಪರಿಣಾಮಗಳ ಜವಾಬ್ದಾರಿತ್ವ ಈ ಮೂರನ್ನು ಮಾತ್ರ ಪರಿಗಣಿಸಲಾಗುತ್ತದೆ, ಇದರ ನೈಪುಣ್ಯತೆಗೆ ಕೌಶಲ್ಯ ಎನ್ನಲಾಗುತ್ತಿದ್ದು ಕೌಶಲ ಎನ್ನಬಹುದಾಗಿದ್ದು ಶಾಲಾ ಕಾಲೇಜಿನ ತರಗತಿಗಳ ನಾಲ್ಕು ಗೋಡೆಗಳ ನಡುವೆ ಇದನ್ನು ಕಲಿಯಲು ಸಾಧ್ಯವಿಲ್ಲ, ವೈಯಕ್ತಿಕ ಆಸಕ್ತಿ, ಸಮಾಜದ ಅಧ್ಯಯನ, ಸೂಕ್ತ ಅಸೂಕ್ತಗಳ ವಿವೇಚನೆ, ಅನುಭವಿಗಳೊಂದಿಗಿನ ಸಮಾಲೋಚನೆ, ನಿರ್ಧಾರ ಪೂರ್ವದ ವಿವೇಚನೆ ಇವುಗಳಿಂದ ಮಾತ್ರ ಸಾಧ್ಯ ಎಂಬುದನ್ನು ಅನೇಕ ಉದಾಹರಣೆಗಳ ಮೂಲಕ ವಿವರಿಸಿದರು.

ನಮ್ಮ ದೇಶದಲ್ಲಿ ವಾರ್ಷಿಕ ನಾಲ್ಕೂವರೆ ಕೋಟಿ ಪದವೀಧರರು ಹೊರ ಬರುತ್ತಿದ್ದು ಎಲ್ಲರಿಗೂ ಉದ್ಯೋಗ ನೀಡಲು ಯಾವ ಸರ್ಕಾರದಿಂದಲೂ ಸಾಧ್ಯವಿಲ್ಲ, ಪ್ರತಿಯೊಬ್ಬ ಪದವೀಧರರೂ ಉದ್ಯೋಗಿಗಳೇ ಆಗಬೇಕೆಂದು ಕಡ್ಡಾಯವಿಲ್ಲ, ಉದ್ಯೋಗಿಗಳಾಗುವುದಕ್ಕಿಂತ ಉದ್ಯೋಗ ದಾತರಾಗುವುದು ರಾಷ್ಟ್ರಾಭಿವೃದ್ಧಿಗೆ ಪೂರಕ, ಜೀವನ ಕೌಶಲ ಇದಕ್ಕೆ ಪ್ರೇರಕ ಎಂದರು.

Vidya Parent Institution Davangere ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾಮಾನ್ಯ ಪದವಿ ವಿದ್ಯಾರ್ಥಿಗಳು ಭಾಗವಹಿಸಿರುವ ಈ ಶಿಬಿರದ ಪೂರ್ಣ ನಿರ್ವಹಣೆಯನ್ನು ವಿದ್ಯಾ ಪೋಷಕ ಸಂಸ್ಥೆಯ ಎ.ಎಂ.ನಾಯಕ್ ವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...