Kuvempu University ಕುವೆಂಪು ವಿಶ್ವವಿದ್ಯಾಲಯವು 2023-24ನೇ ಸಾಲಿನ ಸ್ನಾತಕೋತ್ತರ ಪದವಿ ಮತ್ತು ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ನಿಗದಿಗೊಳಿಸಿದ್ದ ಕೊನೆಯ ದಿನಾಂಕವನ್ನು ನವೆಂಬರ್ 15ಕ್ಕೆ ವಿಸ್ತರಿಸಿದೆ.
ವಿವಿಯು ಜ್ಞಾನಸಹ್ಯಾದ್ರಿ ಕ್ಯಾಂಪಸ್, ತನ್ನ ವ್ಯಾಪ್ತಿಯ ಎಲ್ಲ ಪಿಜಿ ಸೆಂಟರ್‌ಗಳು ಹಾಗೂ ಕಾಲೇಜುಗಳಲ್ಲಿನ ಸ್ನಾತಕೋತ್ತರ ಪದವಿ ಮತ್ತು ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆಯಲು ಯು.ಯು.ಸಿ.ಎಂ.ಎಸ್. ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿ ಅಹ್ವಾನಿಸಿತ್ತು.
ಈ ಮೊದಲು ಅರ್ಜಿ ಸಲ್ಲಿಕೆಗೆ ನವೆಂಬರ್ 05ರಂದು ಕೊನೆಯ ದಿನಾಂಕವಾಗಿತ್ತು. ಪ್ರಸ್ತುತ ಅರ್ಜಿ ಸಲ್ಲಿಸಲು ನವೆಂಬರ್ 15 ಅನ್ನು ಕೊನೆಯ ದಿನಾಂಕವೆಂದು ಪರಿಷ್ಕೃತ ಅಧಿಸೂಚನೆ ಹೊರಡಿಸಿದೆ.
Kuvempu University ಹೊಸ ವೇಳಾಪಟ್ಟಿ ಅನ್ವಯ ನ. 23ರಂದು ಅರ್ಜಿ ಸಲ್ಲಿಸಿದವರ ವಿಷಯವಾರು ಮೆರಿಟ್ ಪಟ್ಟಿ ಬಿಡುಗಡೆಗೊಳಿಸಲಾಗುತ್ತದೆ ಹಾಗೂ ನ. 27-29 ರ ವರೆಗೆ ಪ್ರವೇಶಾತಿ ಕೌನ್ಸೆಲಿಂಗ್ ನಡೆಯಲಿದೆ.
