Punit Rajkumar ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ತನ್ನದೇಯಾದ ಛಾಪುಮೂಡಿಸಿದ ನಟ ಪುನೀತ್‌ರಾಜ್ ಕುಮಾರ್ ಕನ್ನಡನಾಡಿನ ಪ್ರತಿಯೊಬ್ಬರ ಕಣ್ಮಣ ಎಂದು ಕಸಾಪ ಜಾಗರ ಹೋಬಳಿ ಗೌರವಾ ಧ್ಯಕ್ಷ ಕಳವಾಸೆ ರವಿ ಹೇಳಿದರು.
ತಾಲ್ಲೂಕಿನ ಗಾಳಿಗುಡ್ಡೆ ಗ್ರಾಮದಲ್ಲಿ ನಟ ಪುನೀತ್‌ರಾಜ್‌ಕುಮಾರ್ ಎರಡನೇ ವರ್ಷದ ಸ್ಮರಣಾರ್ಥ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮೌನಾಚರಣೆ ನಡೆಸಿ ಮೆಚ್ಚಿನ ನಟನಿಗೆ ಗೌರವ ಸಮರ್ಪಿಸಿದರು.
ಪುನೀತ್‌ರಾಜ್‌ಕುಮಾರ್ ತಮ್ಮ ಬಾಲ್ಯದಿಂದಲೇ ಅಪ್ರತಿಮಾ ಕಲಾವಿದರಾಗಿದ್ದರು. ಬಳಿಕ ಯುವಸಮೂಹ ವನ್ನು ಪ್ರೇರೇಪಿಸುವ ಹಲವಾರು ಚಿತ್ರಗಳಲ್ಲಿ ನಟಿಸಿ ಪ್ರಶಸ್ತಿಗಳನ್ನು ಪಡೆದುಕೊಂಡು ಜನಮಾನಸದಲ್ಲಿ ಬೆರೆತ ಅಪ ರೂಪದ ನಟ ಎಂದು ಬಣ್ಣಿಸಿದರು.
ಕನ್ನಡ ನಾಡು, ನುಡಿ, ಜಲದ ಬಗ್ಗೆ ವಿಶೇಷ ಗೌರವ ಹೊಂದಿದ್ದ ಅವರು ಎಂದಿಗೂ ಪರಭಾಷೆಯತ್ತ ಮುಖ ಮಾಡದೇ ಕನ್ನಡತಾಯಿಯ ಸೇವೆಯಲ್ಲೇ ತೊಡಗಿದ ಕನ್ನಡ ಕಂಠೀರವ. ಸಿನಿಮಾರಂಗ ಹೊರತುಪಡಿಸಿ ಅನೇಕ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿ ಎಲೆಮರೆಕಾಯಿ ಸೇವೆ ಸಲ್ಲಿಸಿದವರು ನಟ ಪುನೀತ್ ಎಂದು ಹೇಳಿದರು.
ಇಂದಿನ ಯುವಪೀಳಿಗೆ ಪುನೀತ್‌ರ ಏಕಾಗ್ರತೆ, ಶ್ರದ್ದೆ ಸೇರಿದಂತೆ ಇನ್ನಿತರ ಜೀವನಶೈಲಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನೆಡೆದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ಕಸಾಪ, ಅಭಿಮಾನಿಬಳಗ ಹಾಗೂ ಗಾಳಿಗುಡ್ಡೆ ಗ್ರಾಮಸ್ಥರಿಂದ ಪ್ರತಿಮೆ ನಿರ್ಮಿಸಿ ಯುವಕರಿಗೆ ಪ್ರೇರೇಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
Punit Rajkumar ಈ ಸಂದರ್ಭದಲ್ಲಿ ಪುನೀತ್‌ರಾಜ್‌ಕುಮಾರ್ ಬಳಗದ ಮುಖಂಡರಾದ ಪ್ರಶಾಂತ್, ಚೇತನ್, ಕಿರಣ್, ಮಿಥುನ್, ಶೇಖರ್, ಜೈಕರ್ನಾಟಕ ಸಂಘಟನೆಯ ಆಕ್ಯಶ್, ಸಂತೋಷ್, ಗ್ರಾಮಸ್ಥರಾದ ಕೃಷ್ಣಪ್ಪ, ಶಂಕರ್, ಸತಿಶ್, ಸುಂದ್ರೇಶ್, ಶೇಖರಪ್ಪ ಮತ್ತಿತರರು ಹಾಜರಿದ್ದರು.