All India Trade Union ಕನಿಷ್ಟ ವೇತನದ ನಿಗಧಿಪಡಿಸುವ ವಿಷಯದಲ್ಲಿ ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪನ್ನು ಘೋಷಿಸಿದ್ದನ್ನು ಅಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಧ್ಯಕ್ಷ ಕೆ.ಗುಣ ಶೇಖರ್ ಸ್ವಾಗತ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ಎಐಟಿಯುಸಿ ರಾಜ್ಯ ಸಮಿತಿ ಶ್ರಮದ ಪ್ರತಿಫಲವಾಗಿ ಅಸಂಘಟಿತ ವಲಯದ ಸುಮಾರು ಒಂದು ಕೋಟಿಗೂ ಹೆಚ್ಚು ಕಾರ್ಮಿಕರಿಗೆ ನ್ಯಾಯ ಒದಗಿಸಿರುವ ರಾಜ್ಯ ಹೈಕೋರ್ಟ್ ಆದೇಶವನ್ನು ಸ್ವಾಗತಿಸಿದ್ದು ರಾಜ್ಯಸರ್ಕಾರ ವಿಳಂಭವೆಸಗದೇ ಹೈಕೋರ್ಟ್ ಆದೇಶವನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ಉಚ್ಚನ್ಯಾಯಾಲಯವು ರಾಜ್ಯ ಸರ್ಕಾರವು ಕನಿಷ್ಟ ವೇತನ ಕಾಯ್ದೆಯಡಿ ಹೊರಡಿಸಿದ್ದ ಅಧಿಸೂ ಚನೆಗಳನ್ನು, ಆಹಾರ ಸಾಮಾಗ್ರಿ, ಬಟ್ಟೆ ಮತ್ತು ವಸತಿ ಇತ್ಯಾದಿಗಳ ಇಂದಿನ ಬೆಲೆಯನ್ನು ಆಧರಿಸಿ ವೈಜ್ಞಾನಿಕವಾಗಿ ಕನಿಷ್ಟ ವೇತನವನ್ನು ಮರುವಿಮರ್ಶೆ ಮಾಡಿ ನಿಗಧಿಪಡಿಸಬೇಕು ಹಾಗೂ ಪೂರ್ವಾನ್ವಯವಾಗುವಂತೆ ಎರಡು ತಿಂಗಳೊಳಗಾಗಿ ಕನಿಷ್ಟ ವೇತನವನ್ನು ನಿಗಧಿಪಡಿಸಬೇಕು ಎಂದು ಆದೇಶಿಸಿದೆ ಎಂದಿದ್ದಾರೆ.
ಎಐಟಿಯುಸಿ ರಾಜ್ಯ ಸಮಿತಿ ಸರ್ಕಾರ ಕನಿಷ್ಟ ವೇತನ ನಿಗಧಿಪಡಿಸುವಾಗ ಬೇಕಾಬಿಟ್ಟಿಯಾಗಿ ಶೇ.10ರಷ್ಟು ವೇತನ ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದ ಕ್ರಮವನ್ನು ರಿಟ್ ಅರ್ಜಿ ಸಲ್ಲಿಸಿ ಹೈಕೋರ್ಟ್ಗೆ ಪ್ರಶ್ನಿಸಿತ್ತು.
ಅರ್ಜಿಯಲ್ಲಿ ರಾಜ್ಯಸರ್ಕಾರದ ಕ್ರಮ ವಿವೇಚನ ರಹಿತವಾಗಿದ್ದು ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿ ರುವ ಮಾನದಂಡಗಳನ್ನು ಉಲ್ಲಂಘಿಸಿರುವ ಕಾರಣ ರಾಜ್ಯಸರ್ಕಾರದ 24 ಅಧಿಸೂಚನೆಗಳನ್ನು ರದ್ದುಪಡಿಸುವಂತೆ ಹೈಕೋರ್ಟ್ ಮೇಟ್ಟಿಲೇರಲಾಗಿತ್ತು ಎಂದು ತಿಳಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕನಿಷ್ಟ ವೇತನದ ಪರಿಷ್ಕರಣೆಯ ಪ್ರಕ್ರಿಯೆ ಪ್ರಾರಂಭವಾಗಿತ್ತು. ಬಳಿಕÀ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರವು ಕನಿಷ್ಟ ವೇತನವನ್ನು ಇಂದಿನ ಬೆಲೆಗಳಿಗೆ ಅನುಗುಣವಾಗಿ ವೈಜ್ಞಾನಿಕವಾಗಿ ನಿಗಧಿಪಡಿಸಬೇಕೆಂಬ ಬೇಡಿಕೆಯನ್ನು ಒಪ್ಪಿಕೊಂಡು ಅನುಸೂಚಿತ ಉದ್ದಿಮೆಗ ಳಲ್ಲಿ ವೇತನ ಪರಿಷ್ಕರಣೆ ಮಾಡುವಾಗ ಸುಪ್ರೀಂ ಕೋರ್ಟ್ನ ತೀರ್ಪಿಗನುಗುಣವಾಗಿ ಮಾರ್ಗಸೂಚಿಗಳನ್ನು ಅಳವ ಡಿಸಬೇಕೆಂದು ಕಾರ್ಮಿಕ ಇಲಾಖೆಗೆ ಆದೇಶಿಸಿದೆ ಎಂದು ಹೇಳಿದ್ದಾರೆ.
All India Trade Union ಪ್ರಸ್ತುತ ರಿಟ್ ಅರ್ಜಿಯ ಸಲ್ಲಿಸುವ ಮುಖೇನಾ ಎಐಟಿಯುಸಿ ಕಾರ್ಮಿಕರಿಗೆ ನ್ಯಾಯ ಒದಗಿಸುವ ಕೊಡುವ ಕೆಲಸ ಮಾಡಲಾಗಿದ್ದು, ಕೂಡಲೇ ರಾಜ್ಯಸರ್ಕಾರ ಹೈಕೋರ್ಟ್ ಆದೇಶವನ್ನು ವಿಳಂಭಧೋರಣೆ ತಾಳದೇ ಜಾರಿ ಗೊಳಿಸಿ ಬೆಲೆಏರಿಕೆಯಿಂದ ತತ್ತರಿಸಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.