Friday, November 22, 2024
Friday, November 22, 2024

Akashvani Bhadravati ಆಕಾಶವಾಣಿ ಭದ್ರಾವತಿಯಲ್ಲಿ ಸುವರ್ಣ ಕರ್ನಾಟಕ ಸಂಭ್ರಮ

Date:

Akashvani Bhadravati ಆಕಾಶವಾಣಿ ಭದ್ರಾವತಿ (FM103.5 ಹಾಗೂ MW675z) ನವೆಂಬರ್ ತಿಂಗಳ ಪೂರ್ತಿ ಶಿವಮೊಗ್ಗ ದಾವಣಗೆರೆ ಹಾಗು ಚಿಕ್ಕಮಗಳೂರು ಜಿಲ್ಲೆಯ ಹೊರನಾಡ ಕನ್ನಡಿಗರ ಅನಿಸಿಕೆ ಧ್ವನಿಮುದ್ರಿಸಿ ಅವರಿಗಿರುವ ಕನ್ನಡದ ಪ್ರೀತಿ ಕುರಿತಂತೆ ‘ಹೊರನಾಡ ಕನ್ನಡಿಗರ ಕನ್ನಡ ಪ್ರೀತಿ’ ಕಾರ್ಯಕ್ರಮ ಸರಣಿಯನ್ನು ಪ್ರಸಾರಿಸಲಿದೆ. ಪ್ರತೀದಿನ ಬೆಳಿಗ್ಗೆ 9:35 ನಿಮಿಷಕ್ಕೆ ಪ್ರಸಾರವಾಗುವ ಈ ಸರಣಿಯಲ್ಲಿ ಹೊರನಾಡ ಕನ್ನಡಿಗರು ಭಾಗವಹಿಸಲು ಅವಕಾಶವಿದೆ. ಹೊರನಾಡ ಕನ್ನಡಿಗರು ತಮ್ಮ ಕನ್ನಡ ಪ್ರೀತಿಯನ್ನು ಧ್ವನಿಮುದ್ರಿಸಿ airbdvt@gmail.com ಮೈಲ್ ಗೆ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ. ನವೆಂಬರ್ ತಿಂಗಳ ಪೂರ್ತಿ ಪ್ರಸಾರವಾಗುವ ಈ ಕಾರ್ಯಕ್ರಮದೊಟ್ಟಿಗೆ ನವೆಂಬರ್ 01 ರಂದು ಬೆಳಿಗ್ಗೆ ಆಕಾಶವಾಣ ಹಾಗು ಶಿವಮೊಗ್ಗದ ಕರ್ನಾಟಕ ಸಂಘದ ಸಹಯೋಗದಲ್ಲಿ ಶ್ರೋತೃಗಳ ಸಮ್ಮುಖದಲ್ಲಿ ನಡೆದ “ಕವಿಕಾವ್ಯ ಗಾನಸುಧೆ” ವಿಶೇಷ ಕಾರ್ಯಕ್ರಮ ಬೆಳಿಗ್ಗೆ 9:00ಗಂಟೆಯಿಂದ 11ಗಂಟೆಯವರೆಗೆ ಪ್ರಸಾರವಾಗಲಿದೆ.

ಈ ಕಾರ್ಯಕ್ರಮದಲ್ಲಿ ಹೆಸರಾಂತ 10 ಕವಿಗಳು ತಮ್ಮ ಕವನ ವಾಚನ ಮಾಡುವುದರೊಟ್ಟಿಗೆ ಸಂಗೀತ ಸಂಯೋಜಿಸಿ ಭಾವಗೀತೆಯನ್ನು ಪ್ರಸ್ತುತಪಡಿಸಲಾಗುವುದು. ನಾಡಗೀತೆಯಿಂದ ಆರಂಭವಾಗುವ ಈ ಕಾರ್ಯಕ್ರಮ ಸತತ 2 ಗಂಟೆಗಳ ಕಾಲ ಪ್ರಸಾರವಾಗಲಿದೆ.

Akashvani Bhadravati ಈ ಕಾರ್ಯಕ್ರಮ ಭದ್ರಾವತಿ ಆಕಾಶವಾಣಿ FM103.5 ಹಾಗೂ MW675khz ನಲ್ಲಿ ಹಾಗೂ ವಿಶ್ವದಾದ್ಯಂತ Prasarbharati newsonair ಭದ್ರಾವತಿ ಕೇಂದ್ರದ ಮೂಲಕ ಪ್ರಸಾರ ಸಮಯದಲ್ಲಿ ಕೇಳಬಹುದು ಹಾಗೂ ಪ್ರಸಾರ ನಂತರ akashavani bhadravathi ನಲ್ಲಿ ಕೇಳಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...