District Consumer Disputes Redressal Commission ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರ ಪೀಠವು ರವಿಕುಮಾರ್ ವೈ.ಎಲ್ ಎಂಬುವವರು ಮಹಂತ ಮೋಟಾರ್ಸ್, ಶಿವಮೊಗ್ಗ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಪರಿಹಾರ ಒದಗಿಸಿ ಆದೇಶಿಸಿದೆ.
ಅರ್ಜಿದಾರ ರವಿಕುಮಾರ್ ವೈ.ಎಲ್ ರವರು ಎದುರಾರ ಮಹಿಂದ್ರಾ ಕಂಪನಿಗೆ ಸೇರಿದ ಸ್ಕಾರ್ಪಿಯೋ ಎನ್ ಝಡ್ 6 ಡೀಸೆಲ್ ಎಂಟಿ ವೈಟ್ ಕಲರ್ ಮಾದರಿಯ ಕಾರನ್ನು ರೂ.21,000 ಪಾವತಿಸಿ ದಿ: 06-08-2023 ರಂದು ಮುಂಗಡ ಬುಕ್ಕಿಂಗ್ ಮಾಡಿರುತ್ತಾರೆ. ಉತ್ಪಾದನಾ ಘಟಕದಲ್ಲಿ ತೊಂದರೆ ಉಂಟಾಗಿದೆ ಎಂದು ಕಾರಣ ನೀಡಿ ಎದುರುದಾರರು ವಾಹನ ನೀಡಿರುವುದಿಲ್ಲ. ಹಾಗೂ ಮುಂಗಡ ಹಣವನ್ನು ಕೂಡ ಮರಳಿ ನೀಡಿರುವುದಿಲ್ಲ.
ಈ ಕುರಿತು ಆಯೋಗದ ಮುಂದೆ ಸೂಕ್ತ ಪರಿಹಾರ ಕೋರಿ ಪ್ರಕರಣ ದಾಖಲಿಸಿದ್ದು, ಆಯೋಗದಿಂದ ಜಾರಿಗೊಳಿಸಿದ ನೋಟಿಸ್ಸಿಗೆ ಸಹ ಎದುರುದಾರರು ಕಲಾಪಕ್ಕೆ ಹಾಜರಾಗಿರದ ಕಾರಣ ಏಕಪಕ್ಷೀಯವಾಗಿ ವಿಚಾರಿಸಲಾಗಿರುತ್ತದೆ.
District Consumer Disputes Redressal Commission ಪ್ರಕರಣದ ಅಂಶಗಳು ಮತ್ತು ಅರ್ಜಿದಾರರು ಹಾಜರುಪಡಿಸಿದ ದಾಖಲೆಗಳನ್ನು ಪರಿಗಣಿಸಿ, ಪರಿಶೀಲಿಸಿದಾಗ ಎದುರುದಾರರ ಸೇವಾನ್ಯೂನ್ಯತೆ ಕಂಡುಬಂದಿದ್ದು ಪ್ರಸ್ತುತ ಪ್ರಕರಣವನ್ನು ಭಾಗಶಃ ಪುರಸ್ಕರಿಸಲಾಗಿರುತ್ತದೆ.
ಎದುರುದಾರರು ದೂರುದಾರರಿಂದ ಪಡೆದ ಮುಂಗಡ ಹಣ ರೂ.21,000 ಗಳನ್ನು ಶೇ.9 ಬಡ್ಡಿ ಸಮೇತ ಪಾವತಿಸಲು ಮತ್ತು ರೂ. 10,000 ಗಳನ್ನು ಮಾನಸಿಕ ಹಿಂಸೆ ಹಾಗೂ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಪರಿಹಾರವಾಗಿ ಹಾಗೂ ವ್ಯಾಜ್ಯದ ಖರ್ಚು ವೆಚ್ಚಗಳ ಬಾಬ್ತು ರೂ.10,000 ಗಳನ್ನು ಪಾವತಿಸಬೇಕೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಇವರು ಪೀಠವು ದಿ: 3-10-2023 ರಂದು ಆದೇಶಿಸಿದೆ ಎಂದು ತಿಳಿಸಿದೆ.
District Consumer Disputes Redressal Commission ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ: ಪರಿಹಾರ ನೀಡಲು ಆದೇಶ
Date: