Inner Wheel Club of Shimoga East ಅಶಕ್ತರಿಗೆ ಸೇವೆ ಮಾಡುವುದು ಅತ್ಯಂತ ಶ್ರೇಷ್ಠ ಕಾರ್ಯ. ಸಮಾಜಮುಖಿಯಾಗಿ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವ ಮೂಲಕ ಉತ್ತಮ ಕೆಲಸಗಳನ್ನು ಮಾಡಬೇಕು ಎಂದು ಇನ್ನರ್ ವ್ಹೀಲ್ ಜಿಲ್ಲಾ ಚೇರ್ಮನ್ ಪೂರ್ಣಿಮಾ ರವಿ ಹೇಳಿದರು.
ಶಿವಮೊಗ್ಗ, ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಇನ್ನರ್ ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆಗೆ ಅಧಿಕೃತ ಭೇಟಿ ಸಂಧರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರು ಹೆಚ್ಚು ಹೆಚ್ಚಿನ ಸಂಖ್ಯೆಯಲ್ಲಿ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಸೇವಾ ಕಾರ್ಯ ಯಶಸ್ವಿಯಾಗಿ ನಡೆಸಲು ಸಂಘಟನೆ ವೃದ್ಧಿಸುತ್ತದೆ ಎಂದು ತಿಳಿಸಿದರು.
ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸುವುದರಿಂದ ಸಾಮಾಜಿಕ ಕೆಲಸಗಳ ಜತೆಯಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ. ಉತ್ತಮ ವೇದಿಕೆಗಳಲ್ಲಿ ಅವಕಾಶಗಳು ಸಿಗುವುದರಿಂದ ಪ್ರತಿಭಾ ಅನಾವರಣಕ್ಕೆ ಸಹಕಾರಿಯಾಗುತ್ತದೆ. ಇನ್ನರ್ ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆಯು ಉತ್ತಮ ಕೆಲಸಗಳನ್ನು ನಡೆಸುತ್ತಿರುವುದು ಅಭಿನಂದನೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇನ್ನರ್ ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಶ್ವೇತಾ ಆಶಿತ್ ಮಾತನಾಡಿ, ಆರ್ಥಿಕವಾಗಿ ಕಷ್ಟದಲ್ಲಿರುವ ಕುಟುಂಬದವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಕೆಲಸ ನಮ್ಮ ಸಂಸ್ಥೆಯಿಂದ ಆಗುತ್ತಿದೆ. ಲೇಖನ ಸಾಮಾಗ್ರಿ ವಿತರಣೆ, ಆರೋಗ್ಯ ಶಿಬಿರ, ಹೀಗೆ ನಿರಂತರವಾಗಿ ಸೇವಾ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸೊಪ್ಪು ತರಕಾರಿ ಮಾರುವ ಮಹಿಳೆಯರಿಗೆ ಉಪಯುಕ್ತ ಆಗಲು ಛತ್ರಿಗಳನ್ನು ನೀಡಲಾಯಿತು. ಸದಸ್ಯರು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟರು.
Inner Wheel Club of Shimoga East ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ, ಇನ್ನರ್ ವ್ಹೀಲ್ ಜಿಲ್ಲಾ ಕಾರ್ಯದರ್ಶಿ ಶಬರಿ ಕಡಿದಾಳ್, ಇಎಸ್‌ಒ ವಾರಿಜಾ ಜಗದೀಶ್, ಮಾಜಿ ಅಧ್ಯಕ್ಷೆ ಭಾರತಿ ಚಂದ್ರಶೇಖರ್, ಸುಧಾ ಪ್ರಸಾದ್, ವೀಣಾ ಹರ್ಷ, ರಾಜೇಶ್ವರಿ ಪ್ರತಾಪ್, ವಿಜಯ ರಾಯ್ಕರ್, ವಾಣಿ ಪ್ರವೀಣ್, ವೀಣಾ ಸುರೇಶ್, ಜಯಂತಿ ವಾಲಿ, ಸೌಭಾಗ್ಯ ಪ್ರಸನ್ನ, ವೇದಾ ನಾಗರಾಜ್, ಪೂರ್ಣಿಮಾ ನರೇಂದ್ರ, ಸುನಂದಾ ಜಗದೀಶ್, ಕಾರ್ಯದರ್ಶಿ ವಾಗ್ದೇವಿ ಬಸವರಾಜ್, ಜ್ಯೋತಿ ಸುಬ್ಬೇಗೌಡ, ನಮಿತಾ ಸೂರ್ಯನಾರಾಯಣ ಉಪಸ್ಥಿತರಿದ್ದರು.