Karnataka Rajyotsava 2023 ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯ ನಾಡಿದು, ಕರ್ನಾಟಕವಿದುವೆ ನೃತ್ಯ, ಶಿಲ್ಪ ಕಲೆಯ ಬೀಡಿದು. ಕನ್ನಡ ಎಂದರೆ ಕೇವಲ ವರ್ಣಮಾಲೆಯಲ್ಲ, ಕನ್ನಡದ ನೆಲ-ಜಲ, ಬದುಕು, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಸಂಗೀತ ಎಲ್ಲವನ್ನೂ ಒಳಗೊಂಡ ಕನ್ನಡತನ. ಕನ್ನಡ ನಮ್ಮ ಅಸ್ಮಿತೆ-ಅನನ್ಯತೆ. ಕನ್ನಡ ನಾಡು-ನುಡಿ, ಇತಿಹಾಸ-ಪರಂಪರೆ ಹಾಗೂ ಸಂಸ್ಕೃತಿಗಳನ್ನು ಉಳಿಸುವ ಮತ್ತು ಬೆಳೆಸುವ ದೃಢ ಸಂಕಲ್ಪದೊಂದಿಗೆ ವಿಶೇಷ ಆಚರಣೆ, ಹೋರಾಟಗಳು ಕನ್ನಡತನಕ್ಕೆ ದಕ್ಕೆಯಾದಗಲೆಲ್ಲ ನೆಡೆಯುತ್ತಲೇ ಬಂದಿವೆ.
ನವೆಂಬರ್ ಬಂತೆಂದರೆ ನಾಡಿನಾದ್ಯಂತ ಕನ್ನಡ ಕಲರವದ ಕಂಪು ಎಲ್ಲೆಡೆ ಹರಡುತ್ತದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಅಂತೆಯೇ
ಇಂದು ರಿಪ್ಪನಪೇಟೆ ಕಸ್ತೂರಿ ಕನ್ನಡ ಸಂಘ ಮತ್ತು ಪುನೀತ್ ರಾಜ್ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಬ್ ಇನ್ಸ್ಪೆಕ್ಟರ್ ಸಿ.ಎಂ ಪ್ರವೀಣ್ ರವರು ವಿದ್ಯುಕ್ತ ಚಾಲನೆ ನೀಡಿದರು.
ನಂತರ ಪಟ್ಟಣದ ವಿವಿಧ ರಸ್ತೆಗಳಲ್ಲಿ ತಾಯಿ ಭುವನೇಶ್ವರಿ ಟ್ಯಾಬ್ಲೋದೊಂದಿಗೆ ಭುವನೇಶ್ವರಿ ವೇಷ ಭೂಷಣ ತೊಟ್ಟ ಮಕ್ಕಳು ಪಟ್ಟಣದ ವಿವಿಧ ರಸ್ತೆಯಲ್ಲಿ ಮಹಿಳಾ ಸಂಘದವರಿಂದ ಪೂರ್ಣಕುಂಭ ಸ್ವಾಗತದೊಂದಿಗೆ, ಡೊಳ್ಳು ಕುಣಿತ, ಕಂಸಾಳೆ, ಚಂಡೆ, ವೀರಗಾಸೆಗಳೊಂದಿಗೆ ಮೆರವಣಿಗೆ ಸಾಗಿತು.
Karnataka Rajyotsava 2023 ಇಂದು ರಾತ್ರಿ 8 ಗಂಟೆಗೆ ಜೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಸಾದ್ವಿನಿ ಕೊಪ್ಪ, ಮೆಹಬೂಬ್ ಸಾಬ್, ಅಶ್ವಿನ್ ಶರ್ಮ, ಎದೆತುಂಬಿ ಹಾಡು ಖ್ಯಾತಿಯ ಸಾನ್ವಿ ಜಿ. ಭಟ್ ಇವರಿಂದ ರಸಮಂಜರಿ ಕಾರ್ಯಕ್ರಮಗಳು ಜರುಗಲಿವೆ.