Saturday, December 6, 2025
Saturday, December 6, 2025

Rotary Shivamogga ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕೃತಿಯ ಪರಿಚಯ ಆಗಬೇಕು- ವಿಜಯ್ ಕುಮಾರ್

Date:

Rotary Shivamogga ಮಹರ್ಷಿ ವಾಲ್ಮೀಕಿ ಅವರ ತತ್ವ ಆದರ್ಶ ಗುಣಗಳು ಎಂದೆಂದಿಗೂ ಅಜರಾಮರ. ಮಕ್ಕಳಿಗೆ ಬಾಲ್ಯದಲ್ಲೇ ಶ್ರೇಷ್ಠ ಸಂಸ್ಕೃತಿ ಪರಂಪರೆಯ ಪರಿಚಯ ಆಗಬೇಕು ಎಂದು ರೋಟರಿ ಮಾಜಿ ಸಹಾಯಕ ಗವರ್ನರ್ ಜಿ. ವಿಜಯಕುಮಾರ್ ಹೇಳಿದರು.

ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ವಾಲ್ಮೀಕಿ ಅವರು ತಮ್ಮ ಜೀವನದಲ್ಲಿ ಬದಲಾವಣೆ ಕ್ಷಣಗಳು ಹಾಗೂ ಈ ಪ್ರಪಂಚಕ್ಕೆ ಸಾರಿದ ಸಂದೇಶಗಳು ಹಾಗೂ ರಾಮಾಯಣದಂತಹ ಮಹಾನ್ ಕೃತಿಯನ್ನು ಲೋಕಕ್ಕೆ ಅರ್ಪಿಸಿದ ಮಹರ್ಷಿಯವರ ಸಾಧನೆ ನಾವು ಇಂದು ಎಲ್ಲರೂ ನೆನಪಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ ಧಾರ್ಮಿಕತೆ ಹಾಗೂ ಋಷಿ ಮುನಿಗಳ ಪರಿಚಯವಾಗಬೇಕು. ವಿದ್ಯಾಭ್ಯಾಸದ ಜೊತೆಗೆ ಮಕ್ಕಳಿಗೆ ರಾಮಾಯಣ ಮಹಾಭಾರತ ಹಲವಾರು ಧರ್ಮ ಗ್ರಂಥಗಳ ವಿಚಾರಗಳನ್ನು ತಿಳಿಸುವ ಕೆಲಸಗಳು ಆಗಬೇಕು ಎಂದರು.

ಹಾಗೆ ಆಧ್ಯಾತ್ಮದತ್ತ ಅವರ ಗಮನ ಸೆಳೆಯುವಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಬಹಳ ದೊಡ್ಡದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ವಾಲ್ಮೀಕಿ ಅವರು ಬರೆದ ರಾಮಾಯಣದಿಂದ ಇಡೀ ಜಗತ್ತೇ ಬದಲಾಗಿದೆ ಆ ಗ್ರಂಥ ಇಂದಿಗೂ ಪ್ರಸ್ತುತವಾಗಿದೆ ಹಲವಾರು ನಿದರ್ಶನಗಳಿಗೆ ದಾರಿ ದೀಪವಾಗಿದೆ. ಎಂದು ತಿಳಿಸಿದರು.

ರೋಟರಿ ವಿದ್ಯಾ ಸಂಸ್ಥೆ ಚಾರಿಟೇಬಲ್ ಟ್ರಸ್ಟ್ ನ ಸಹ ಕಾರ್ಯದರ್ಶಿ ಎಸ್ ಆರ್ ನಾಗವೇಣಿ ಮಾತನಾಡಿ, ಪ್ರತಿಯೊಬ್ಬ ಮಹನೀಯರ ಜಯಂತಿಗಳು ನಮಗೆ ಆದಷ್ಟು ಪ್ರಾಯವಾಗಿದೆ ಹಾಗೂ ವಿಶೇಷವಾದ ಸಂದೇಶವನ್ನು ತಲುಪಿಸುವ ಕೆಲಸವಾಗುತ್ತಿದೆ ಎಂದು ನುಡಿದರು.

Rotary Shivamogga ಸಮಾರಂಭದಲ್ಲಿ ಇನ್ನರ್ ವೀಲ್ ಮಾಜಿ ಅಧ್ಯಕ್ಷ ಬಿಂದು ವಿಜಯ್ ಕುಮಾರ್, ಸಂತೋಷ್, ಪದ್ಮಿನಿ ಹೋಬಳಿ ದಾರ್, ಗೀತಾ ಚಿಕ್ ಮಠ್, ಸಂಧ್ಯಾ ,ವೀಣ ಕಿಶೋರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜೆ ಮಾಡಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...