Kimmane Ratnakar ಅರಣ್ಯ ಕಾಯ್ದೆಗೆ ಸಂಬಂಧಪಟ್ಟಂತೆ “ಹುಲಿ ಉಗುರು ಸಮಸ್ಯೆಗೆ ಸಂಬಂಧಿಸಿದಂತೆ
ಈ ದೇಶದಲ್ಲಿ ಮತ್ತು ನಮ್ಮ ನಾಡಿನಲ್ಲಿ ಅನೇಕ ಅನುಪಯುಕ್ತ ಕಾಯ್ದೆಗಳು ಜನಮಾನಸಕ್ಕೆ
ಬಾರದೆ ಜೀವಂತವಿದೆ. ಅವುಗಳನ್ನು ಪುನರ್ ಪರಿಶೀಲಿಸಿ ವರ್ತಮಾನಕ್ಕೆ ಅಗತ್ಯತೆಗೆ ಪೂರಕ ತಿದ್ದುಪಡಿ ಅಥವಾ ರದ್ದು ಪಡಿಸುವ ಪ್ರಯತ್ನ ನಡೆಯಬೇಕೆಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅರಣ್ಯ ಸಚಿವರಿಗೆ ಪತ್ರ ಬರೆದಿದ್ದಾರೆ.
“Ignorance of law is no excuse”
(ಕಾನೂನಿನ ಅಜ್ಞಾನ ಕ್ಷಮಾರ್ಹವಲ್ಲ, ಆದರೆ ಅದಕ್ಕೆ ಪೂರಕ ತಿದ್ದುಪಡಿ ಆಗತ್ಯ, ತಮ್ಮಲ್ಲಿ ವಿನಂತಿಸುವುದೇನೆಂದರೆ, “ಹುಲಿ ಉಗುರು ಮತ್ತು ಇತರೆ ಪ್ರಾಣಿಗಳಿಗೆ ಸಂಬಂಧಪಟ್ಟಂತೆ ಕಾನೂನು ಬಾಹಿರವಾಗಿ (ಕಾಯ್ದೆಗೆ ವಿರುದ್ಧವಾಗಿ ವಸ್ತುಗಳನ್ನು ಸಂಗ್ರಹಿಸಿದ್ದರೆ ) ಅವುಗಳಿಗೆ ಸಂಬಂಧಪಟ್ಟಂತೆ ತಾತ್ಕಾಲಿಕವಾಗಿ ಸುಗ್ರೀವಾಜ್ಞೆ ಮಾಡಿ, ಸಾರ್ವಜನಿಕರಿಗೆ ಕಾಲಾವಕಾಶ ನೀಡಿ ಸಂಗ್ರಹಿಸಿದ ವಸ್ತುಗಳನ್ನು ಸರ್ಕಾರಕ್ಕೆ ಹಸ್ತಾಂತರ ಮಾಡುವ ಅವಕಾಶ ಮಾಡಿದರೆ, ಸರ್ಕಾರಕ್ಕೂ ಒಳ್ಳೆಯದು ಸಾರ್ವಜನಿಕರಿಗೂ ಒಳ್ಳೆಯದು.
Kimmane Ratnakar ಇಲ್ಲದಿದ್ದರೆ ಅಕ್ರಮವಾಗಿ ಸಂಗ್ರಹಿಸಿದ ವಸ್ತುಗಳು, ಕಾನೂನು ಕಾಯ್ದೆಗೆ ಹೆದರಿ ಕಸದ ಪಾಲಾಗುತ್ತದೆ.
ತುರ್ತು ಕ್ರಮ ಆಗತ್ಯವೆಂದು ಕಿಮ್ಮನೆ ರತ್ನಾಕರ ಅವರು ಅರಣ್ಯ ಮಂತ್ರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.