Maharshi Valmiki Jayanti ಗ್ರಾಮೀಣ ಕ್ರೀಡೆಯಾಗಿರುವ ಖೋಖೋವನ್ನು ಉನ್ನತ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ಪುರುಷರು ಮುಂದಾದಾಗ ಮಾತ್ರ ನಶಿಸುವ ಹಲವಾರು ಗ್ರಾಮಿಣ ಕ್ರೀಡೆಗಳು ಉಳಿಸಿಕೊಳ್ಳಲು ಸಾಧ್ಯ ಎಂದು ಗಿರಿಜನ ಯೋಜನಾ ಅಭಿವೃದ್ದಿ ಇಲಾಖೆ ಸಮನ್ವಯಾಧಿಕಾರಿ ಭಾಗೀರತಿ ಹೇಳಿದರು.
ಚಿಕ್ಕಮಗಳೂರು ನಗರದ ಜಿಲ್ಲಾ ಆಟದ ಮೈದಾನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ ಹಾಗೂ ಹೊಯ್ಸಳ ಸ್ಪೋಟ್ಸ್ ಕ್ಲಬ್ ಸಹಯೋಗದಲ್ಲಿ ವಾಲ್ಮೀಕಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪುರು ಷರ ಖೋ ಖೋ ಪಂದ್ಯಾವಳಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳು ಹಾಗೂ ವೈಯಕ್ತಿಕವಾಗಿ ಪುರುಷರು ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಇದರಿಂದ ಕ್ರೀಡಾಜಗತ್ತಿನಲ್ಲಿ ಹೆಸರು ಗಳಿಸಿದ ಪಿಟಿಉಷಾ, ಸಚ್ಚಿನ್ ಟೆಂಡೋಲ್ಕರ್, ಮಿಲ್ಕ್ಸಿಂಗ್ ಮಾದರಿಯಲ್ಲಿ ಮನ್ನಣೆ ಗಳಿಸಿ ದೇಶಕ್ಕೆ ಕೀರ್ತಿ ತರಬಹುದು ಎಂದು ಹೇಳಿದರು.
ಕೆಲವು ಯುವಕರು ಆಸಕ್ತಿಯಿರುವ ಕ್ರೀಡಾಕ್ಷೇತ್ರದಲ್ಲಿ ಶತತ ಪ್ರಯತ್ನದಿಂದ ಉನ್ನತ ಹೆಸರು ಗಳಿಸಿದ್ದಾರೆ. ಆ ಸಾಲಿನಲ್ಲಿ ಜಿಲ್ಲೆಯ ಪುರುಷರು ಹಾಗೂ ಮಕ್ಕಳು ಆಸಕ್ತಿ ಹೊಂದಿರುವ ಕ್ರೀಡಾಚಟುವಟಿಕೆಗಳಲ್ಲಿ ಹೆಚ್ಚು ಶ್ರಮವಹಿಸಿ ಮುನ್ನುಗ್ಗಿದಾಗ ಮಾತ್ರ ಜಿಲ್ಲೆ ಹಾಗೂ ರಾಜ್ಯಕ್ಕೆ ಗೌರವ ಸಲ್ಲಿಸಿದಂತೆ ಎಂದು ಸಲಹೆ ಮಾಡಿದರು.
ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ಕೋಟೆ ಮಾತನಾಡಿ ಮಹಾಜ್ಞಾನಿ ವಾಲ್ಮೀಕಿ ಜನ್ಮದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ ಆಯೋಜಿಸಲಾಗಿದೆ. ನಾಳೆ ನಡೆಯುವ ಅದ್ದೂರಿ ವಾಲ್ಮೀಕಿ ಜಯಂತಿಯಂದು ವಿಜೇತರಾದ ತಂಡಕ್ಕೆ ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.
ಕ್ರೀಡಾಚಟುವಟಿಕೆಗಳಲ್ಲಿ ಸೋಲು, ಗೆಲುವು ಎಂಬುದು ಸರ್ವೆಸಾಮಾನ್ಯ ವಿಷಯ. ಇದರಿಂದ ಹತಾಶೆಗೊಳ ಗಾಗದೇ ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿ ರೂಪಿಸಿಕೊಂಡು ಮುಂದಿನ ವಿಜಯದ ಪತಾಕೆ ಹಾರಿಸುವ ನಿಟ್ಟಿ ನಲ್ಲಿ ಶ್ರಮವಹಿಸಬೇಕು ಎಂದು ಕಿವಿಮಾತು ಹೇಳಿದರು.
ಹೊಯ್ಸಳ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಮಧುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವಸಮಾನರು ಒಂದೇ ಎಂಬ ಸಂದೇಶವನ್ನು ಸಾರಿದ ವಾಲ್ಮೀಕಿ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಇಂದು ದೇಶಿ ಕ್ರೀಡೆಯ ಪಂದ್ಯಾವಳಿ ಆಯೋಜಿಸಿ ಮುನ್ನೆಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಖೋ ಖೋ ಏಷಿಯನ್ ಆಟಗಳಲ್ಲಿ ಬೆಳೆಯುವಂತಾಗಲಿ ಎಂದು ಶುಭ ಹಾರೈಸಿದರು.
Maharshi Valmiki Jayanti ಇದೇ ವೇಳೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸುಮಾರು 11 ತಂಡಗಳು ಭಾಗವಹಿಸಿದ್ದರು. ಈ ಸಂದರ್ಭ ದಲ್ಲಿ ವಾಲ್ಮೀಕಿ ಸಂಘದ ತಾಲ್ಲೂಕು ಅಧ್ಯಕ್ಷ ಪ್ರದೀಪ್, ಗೌರವಾಧ್ಯಕ್ಷ ವಿಜಯ್‌ಕುಮಾರ್. ದೈಹಿಕ ಶಿಕ್ಷಕ ದೊಡ್ಡ ಯ್ಯ, ಹೊಯ್ಸಳ ಸ್ಪೋಟ್ಸ್ ಕ್ಲಬ್ ಉಪಾಧ್ಯಕ್ಷ ಯಶ್ವಂತ್ ಚಿತ್ತಾಲ್ ಮತ್ತಿತರರು ಹಾಜರಿದ್ದರು.