Saturday, December 6, 2025
Saturday, December 6, 2025

Chaudeshwari Temple ಚಾಲುಕ್ಯ ನಗರ ಚೌಡೇಶ್ವರಿ ನವರಾತ್ರಿ ಉತ್ಸವ ಸಂಪನ್ನ

Date:

Chaudeshwari Temple ಶಿವಮೊಗ್ಗ ನಗರದ ಚಾಲುಕ್ಯನಗರದ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಅ 15 ರಿಂದ ಅ.24ರವರೆಗೆ ಸಂಭ್ರಮದ ನವರಾತ್ರಿ ಸಂಪನ್ನಗೊಂಡಿದೆ.

ಪ್ರತಿನಿತ್ಯ ಸಹ ದೇವಿಗೆ ವಿವಿಧ ಅಲಂಕಾರ , ಬೆಳಿಗ್ಗೆ 10 ರಿಂದ ಹೋಮ ಪ್ರಾರಂಭವಾಗಿ 12.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಹಾಗೂ ಪ್ರತಿನಿತ್ಯ ಸಂಜೆ 6:30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಉಯ್ಯಾಲೇ ಸೇವೆಯನ್ನು ಏರ್ಪಡಿಸಲಾಗಿತ್ತು.

ಅ.24 ರಂದು ಸಂಜೆ 6:30ಕ್ಕೆ ಮಂಗಳವಾದ್ಯಗಳೊಂದಿಗೆ ಚಾಲುಕ್ಯನಗರ ಮುಖ್ಯದ್ವಾರದಿಂದ ಮೆರವಣಿಗೆಯೊಂದಿಗೆ ಬನ್ನಿಮಂಟಕ್ಕೆ ತಲುಪಿ, ಅರ್ಚಕರಾದ ಚೇತನಭಟ್ ನೇತೃತ್ವದಲ್ಲಿ ಜಯರಾಮ್ ಕಾಮತ್‌ರವರು ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಿಡಿ ಮದ್ದು ಪದರ್ಶನ ನೀಡಲಾಯಿತು.
ತಾಯಿ ಚೌಡೇಶ್ವರಿಗೆ ಬನ್ನಿ ಸಮರ್ಪಿಸಿ ದೇವಿಗೆ ಮಹಾಮಂಗಳಾರತಿ, ಬಂದಂತಹ ಭಕ್ತಾದಿಗಳಿಗೆ ಬನ್ನಿ ವಿತರಣೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಯಿತು.

Chaudeshwari Temple ಈ ಸಂದರ್ಭದಲ್ಲಿ ಅಡಳಿತ ಮಂಡಳಿ, ಅರ್ಚಕವೃಂದ, ಚಾಲುಕ್ಯನಗರ ಸೇರಿದಂತೆ ದೇವಿಯ ಸಾವಿರದ ಐನ್ನೂರುಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಂಡಿದ್ದರು.
ಸಂಭ್ರಮದ ನವರಾತ್ರಿಉತ್ಸವಕ್ಕೆ ಸಹಕರಿಸಿದ ಎಲ್ಲರಿಗೂ ಶ್ರೀ ಚೌಡೇಶ್ವರಿ ಅಮ್ಮನವರ ಆಡಳಿತ ಮಂಡಳಿ ಧನ್ಯವಾದ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...