Shivamogga Zilla Panchayat ಶಿವಮೊಗ್ಗ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಇವರ ಸಹಯೋಗದಲ್ಲಿ 2023-24ನೇ ಸಾಲಿನಲ್ಲಿ 6-16 ವರ್ಷದವರೆಗಿನ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿಗೆ ತರಲು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅ.26 ರಿಂದ ನ.04 ರವರೆಗೆ ಸಮೀಕ್ಷೆ ಹಮ್ಮಿಕೊಳ್ಳಲಾಗಿದ್ದು, ಶಾಲಾ ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲಿನ ಶಾಲೆ ಬಿಟ್ಟ ಮತ್ತು ಶಾಲೆಗೆ ಸೇರದ ಮಕ್ಕಳ ಮನೆಗೆ ಶಿಕ್ಷಕರುಗಳು ಭೇಟಿ ನೀಡುತ್ತಾರೆ.
Shivamogga Zilla Panchayat ಈ ಸಂದರ್ಭದಲ್ಲಿ ಪೋಷಕರು ಮಕ್ಕಳ ಮಾಹಿತಿಯನ್ನು ನೀಡಿ ಸಹಕರಿಸುವಂತೆ ಹಾಗೂ ಈ ಬಗ್ಗೆ ದುರ್ಬಲ ಪ್ರದೇಶಗಳ ಭೇಟಿಗೆ ಪ್ರತಿ ಜನವಸತಿ/ಶಾಲಾ ಹಂತದಲ್ಲಿ ಪಂಚಾಯತ್ ರಾಜ್ ಇಲಾಖೆ/ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ/ ಆರೋಗ್ಯ ಇಲಾಖೆಯ ಸಹಕಾರದಿಂದ ತಮ್ಮ ವ್ಯಾಪ್ತಿಯಲ್ಲಿ ನಿಗದಿಪಡಿಸಿದ ಶಿಕ್ಷಕರು/ ಆಶಾ ಕಾರ್ಯಕರ್ತರು/ ಅಂಗನವಾಡಿ ಕಾರ್ಯಕರ್ತರು/ಪಿಆರ್‌ಪಿ ಭೇಟಿ ಮಾಡಿ ವಿಶೇಷ ದಾಖಲಾತಿ ಆಂದೋಲನ ನಡೆಸಲಾಗುವುದು. ಈ ಸಮೀಕ್ಷೆಗೆ ಶಾಲಾ ವ್ಯಾಪ್ತಿಯ ಗ್ರಾಮ ಪಂಚಾಯತಿ ಪ್ರತಿನಿಧಿಗಳು/ ಅಧಿಕಾರಿಗಳು, ಪೋಷಕರುಗಳು, ಶಿಕ್ಷಣಾಸಕ್ತರು ಹಾಗೂ ಸ್ಥಳೀಯ ಎನ್.ಜಿ.ಓ.ಗಳು ಸಹಕಾರ ನೀಡುವಂತೆ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಶಿಕ್ಷಣ ಕರ್ನಾಟಕ ಇವರು ತಿಳಿಸಿದ್ದಾರೆ.