Adiparashakti Charitable ಚಿಕ್ಕಮಗಳೂರಿನ ಮೇಲ್ಮರುವತ್ತೂರಿನ ಆದಿಪರಾಶಕ್ತಿ ಸಿದ್ಧರ ಪೀಠದ ಸಂಸ್ಥಾಪಕ ಶ್ರೀ ಬಂಗಾರು ಅಡಿಗಳಾರ್ ಅಗಲಿದ ಹಿನ್ನೆಲೆಯಲ್ಲಿ ಪಾಂಚಜನ್ಯ ಕಚೇರಿಯಲ್ಲಿ ಬಿಜೆಪಿ ಮುಖಂಡರು ಹಾಗೂ ತಮಿಳು ಜನಾಂಗ ವತಿಯಿಂದ ಅಡಿಗಳಾರ್ ಅವರಿಗೆ ಗುರುವಾರ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಶಂಕರ್ ಅಡಿಗರುರವರು ಆದಿಪರಾಶಕ್ತಿ ಚಾರಿಟೇಬಲ್, ವೈದ್ಯಕೀಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಹೆಚ್ಚಿನ ಅನು ಯಾಯಿಗಳನ್ನು ಹೊಂದಿದ್ದರು. ಗರ್ಭಗುಡಿಗೆ ಮಹಿಳೆಯರನ್ನು ಅನುಮತಿಸುವಂತಹ ದೇವಾಲಯದ ಆಚರಣೆಗ ಳಲ್ಲಿ ಸುಧಾರಣೆಗಳನ್ನು ಪ್ರಾರಂಭಿಸಿದ್ದರು ಎಂದರು.
ಬoಗಾರು ಅಡಿಗಲರು ಮಹಾನ್ ಆಧ್ಯಾತ್ಮಿಕ ಗುರುಗಳಾಗಿದ್ದರು. ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸುಧಾರಣೆಗಳ ಕ್ಷೇತ್ರಕ್ಕೆ ಅವರ ಕೊಡುಗೆ ನಮಗೆ ಸ್ಫೂರ್ತಿ ನೀಡಿತು. ಮಾನವೀಯತೆಗೆ ಅವರ ಸೇವೆಯನ್ನು ಗುರುತಿಸುವ ಮೂಲಕ ಭಾರತ ಸರ್ಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಎಂದರು.
ಅಡಿಗಲರು ಗರ್ಭಗುಡಿಯೊಳಗೆ ಪೂಜೆ ಮಾಡುವ ಮಹಿಳೆಯರ ಹಕ್ಕುಗಳನ್ನು ಪ್ರತಿಪಾದಿಸುವ ಮೂಲಕ ಆಳವಾದ ಆಧ್ಯಾತ್ಮಿಕ ಕ್ರಾಂತಿಯನ್ನು ಹುಟ್ಟುಹಾಕಿದರು.
ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಮೇಲ್ಮರುವತ್ತೂರ್ ಆದಿಪರಾಶಕ್ತಿ ಸಿದ್ಧರ ಪೀಠವನ್ನು ಸ್ಥಾಪಿಸಿ ಇಡೀ ವಿಶ್ವವೇ ಭಾರತದತ್ತ ತಿರುಗಂತೆ ಮಾಡಿದ ಮಹಾನ್‌ಚೇತನ ಎಂದು ಹೇಳಿದರು.
ಲಕ್ಷಾಂತರ ಮಹಿಳೆಯರು ಬಂಗಾರು ಅಡಿಗರನ್ನು ಅನುಸರಿಸಲು ಪ್ರಾರಂಭಿಸಿದಾಗ ರಾಜ್ಯದಾದ್ಯಂತ ಸಾವಿರಾರು ಆದಿಪರಾಶಕ್ತಿ ದೇವಾಲಯಗಳು ಹುಟ್ಟಿಕೊಂಡವು. ಅನೇಕ ಮಹಿಳೆಯರು ದೇವಿಯ ದರ್ಶನಕ್ಕಾಗಿ ರಾಜ್ಯದ ತಮ್ಮ ಪಟ್ಟಣಗಳು ಮತ್ತು ಹಳ್ಳಿಗಳಿಂದ ಮೇಲ್ಮರುವತ್ತೂರಿಗೆ ತೆರಳುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಕೆ.ಪಿ.ವೆಂಕಟೇಶ್ ಮಾತನಾಡಿ ಪರೋಪಕಾರಿ, ಬಂಗಾರು ಅಡಿಗಲರು ಚೆನ್ನೈನಿಂದ 90 ಕಿ.ಮೀ ದೂರದಲ್ಲಿರುವ ಮೆಲ್ಮರುವತ್ತೂರಿನ ಆದಿ ಪರಾಶಕ್ತಿ ದೇವಸ್ಥಾನ ಮತ್ತು ಅವರ ಋತುಚಕ್ರ ಸೇರಿದಂತೆ ಎಲ್ಲಾ ದಿನಗಳಲ್ಲಿ ಅವರು ನಿರ್ವಹಿಸುವ ಇತರ ಧಾರ್ಮಿಕ ಸಂಸ್ಥೆಗಳ ಒಳಗೆ ಮಹಿಳೆಯರಿಗೆ ಅವಕಾಶ ನೀಡಿ ಕ್ರಾಂತಿಕಾರಿ ಹೆಜ್ಜೆ ಮೂಡಿಸಿದವರು ಎಂದರು.
Adiparashakti Charitable ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಸೀತಾರಾಮಭರಣ್ಯ, ಹಿರೇಮಗಳೂರು ಕೇಶವ್, ಎಸ್.ಡಿ. ಎಂ.ಮ0ಜು, ವೈ.ಜಿ.ಸುರೇಶ್, ರವಿ, ನಿಶಾಂತ್, ನಾಗರಾಜ್, ತಮಿಳು ಬಾಂಧವರಾದ ರಾಘವೇಂದ್ರ, ಮುನಿ, ರವಿಕುಮಾರ್, ನಾಗಣ್ಣ, ಲಕ್ಷ್ಮೀ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.