Friday, March 20, 2026
Friday, March 20, 2026

ಪ್ರಕೃತಿ ಸೌಂದರ್ಯ & ಮಾನವನ ಆರೋಗ್ಯ ಕಾಪಾಡುವಲ್ಲಿ ಲಯನ್ಸ್ ಕ್ಲಬ್ ಪ್ರೋತ್ಸಾಹ

Date:

Lions Club ಪರಿಸರಕ್ಕೆ ಪೂರಕ ವಾತಾವರಣ ನಿರ್ಮಿಸುವ ದೃಷ್ಟಿಯಿಂದ ವಿವಿಧ ತಳಿಗಳ ಸಸಿಗಳನ್ನು ಗೋಮಾಳದಲ್ಲಿ ನೆಟ್ಟು ಪೋಷಿಸುವ ಕಾರ್ಯದಲ್ಲಿ ಲಯನ್ಸ್ ಕ್ಲಬ್ ಕಾರ್ಯೋನ್ಮುಖವಾಗಿ ರುವುದು ಹೆಮ್ಮೆಯ ವಿಷಯ ಎಂದು ಲಯನ್ಸ್ ಜಿಲ್ಲಾ ಗರ‍್ನರ್ ಡಾ|| ಮೆಲ್ವಿನ್ ಡಿಸೋಜ ಹೇಳಿದರು.

ಚಿಕ್ಕಮಗಳೂರು ತಾಲ್ಲೂಕಿನ ಕುರುವಂಗಿ ಗ್ರಾಮದ ಗೋಮಾಳ ಪ್ರದೇಶದಲ್ಲಿ ಅರಣ್ಯ ಇಲಾಖೆ ಹಾಗೂ ಜಿಲ್ಲಾ ಲಯನ್ಸ್ ಕ್ಲಬ್ ವತಿಯಿಂದ ದಿ|| ಬಿ.ಎನ್.ಮಲ್ಲೇಶ್‌ರವರ ಸ್ಮರಣಾರ್ಥ ಲಯನ್ಸ್ ಸುವರ್ಣವನಕ್ಕೆ ಸುಮಾರು 4200 ಸಸಿಗಳನ್ನು ನೆಡಲಾಗಿದ್ದು ಶನಿವಾರ ಗಿಡಗಳಿಗೆ ಅಡಿಕೆ ಸಿಪ್ಪೆ ಹೊದಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಲವಾರು ಜಿಲ್ಲೆಗಳಲ್ಲಿ ಲಯನ್ಸ್ ಕ್ಲಬ್ ಬಹಳಷ್ಟು ಕಾರ್ಯಕ್ರಮಗಳನ್ನು ಗಮನಿಸಿದ್ದೇವೆ. ಆದರೆ ಚಿಕ್ಕಮಗ ಳೂರಿನಲ್ಲಿ ಲಯನ್ಸ್ ದಿ|| ಬಿ.ಎನ್.ಮಲ್ಲೇಶ್ ಅವರ ಸ್ಮರಣಾರ್ಥ ಅತ್ಯಂತ ದೊಡ್ಡಮಟ್ಟದ ಸಸಿ ನೆಡುವ ಕಾರ್ಯ ಕ್ರಮ ಹಮ್ಮಿಕೊಂಡಿರುವ ಸಾಮಾನ್ಯ ವಿಚಾರವಲ್ಲ. ಮುಂದಿನ ದಿನಗಳಲ್ಲಿ ಸಸಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ ಪೋಷಿಸಬೇಕು ಎಂದು ಸಲಹೆ ಮಾಡಿದರು.

ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸುವ ಹಾಗೂ ಮಾನವನ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಸಸಿನೆಡುವ ಕಾರ್ಯಕ್ಕೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಸಸಿಗಳನ್ನು ಪೋಷಿಸುವ ಮೂಲಕ ಹೆಮ್ಮರ ವಾಗಿ ಬೆಳೆಸುವ ಜವಾಬ್ದಾರಿ ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು.

Lions Club ಜಿಲ್ಲಾ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ.ರಮೇಶ್ ಮಾತನಾಡಿ ಕುರುವಂಗಿ ಸಮೀಪದ 50 ಎಕರೆ ಗೋಮಾಳ ಪ್ರದೇ ಶದಲ್ಲಿ ಹಲಸು, ನೇರಳೆ, ನೆಲ್ಲಿ, ಸೀಮೆ, ಅರಳಿ ಹಾಗೂ ಆಲದ ಸಸಿಗಳನ್ನು ನೆಡಲಾಗಿದೆ.

ಇವುಗಳನ್ನು ಪೋಷಿಸಿ ಬೆಳೆಸುವ ಜವಾಬ್ದಾರಿಯನ್ನು ಲಿಯೋ ಕ್ಲಬ್‌ಗೆ ವಹಿಸಿಕೊಡಲಾಗಿದೆ. ಪರಿಸರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ದಿ|| ಬಿ.ಎನ್.ಮಲ್ಲೇಶ್‌ರವರ ಕನಸಿನಂತೆ ಸಸಿ ನೆಡುವ ಕಾರ್ಯಕ್ಕೆ ಲಯನ್ಸ್ ಕ್ಲಬ್ ಮುಂದಾಗಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಹಾಯಕ ವಲಯ ಅರಣ್ಯಾಧಿಕಾರಿ ವೆಂಕಟಪ್ಪ, ದಾನಿಗಳಾದ ಸುಹಾಸ್ ಮಲ್ಲೇಶ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಟಿ.ನಾರಾಯಣಸ್ವಾಮಿ, ಖಜಾಂಚಿಗಳಾದ ಸುಧಾಕರ್‌ಶೆಟ್ಟಿ, ಕೆ.ಇ.ಬಾಲಕೃಷ್ಣ, ಸದಸ್ಯರುಗಳಾದ ಜೆ.ಪಿ.ಕೃಷ್ಣೇಗೌಡ, ಡಾ|| ಕೆ.ಸುಂದರಗೌಡ, ಮಾಜಿ ಅಧ್ಯಕ್ಷರುಗಳಾದ ವೆಂಕಟೇಶ್, ಹರೀಶ್, ನೇತ್ರ ವೆಂಕಟೇಶ್, ಲಯನ್ಸ್ ಕ್ಲಬ್ ಚಿಕ್ಕಮಗಳೂರು ಪರಿಸರ ವಿಭಾಗದ ಕೋಆರ್ಡಿನೆಟರ್ ಪುಷ್ಪರಾಜ್, ಲಯನ್ಸ್ ಜಿಲ್ಲಾ ಪರಿಸರ ವಿಭಾಗದ ತಾರಾನಾಥ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...