Backward Classes Commission ಕಾಂತರಾಜ ಆಯೋಗದ ವರದಿಯನ್ನು ಕೂಡಲೇ ಸರ್ಕಾರಕ್ಕೆ ಸಲ್ಲಿಸಬೇಕೆಂದು ಒತ್ತಾಯಿಸಿ ಹಿಂದುಳಿದ ಜನ ಜಾಗೃತಿ ವೇದಿಕೆ ಹಾಗು ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಗೆ ಮನವಿಪತ್ರ ನೀಡಲಾಯಿತು.
ಇಂದು ಬೆಳಿಗ್ಗೆ ಬೆಂಗಳೂರಿನ ದೇವರಾಜ ಅರಸು ಭವನದಲ್ಲಿರುವ ಹಿಂದುಳಿದ ವರ್ಗಗಳ ಆಯೋಗದ ಕಚೇರಿಯಲ್ಲಿ ಮೇಲ್ಕಂಡ ಸಂಸ್ಥೆಗಳ ನಿಯೋಗ ಜಯಪ್ರಕಾಶ್ ಹೆಗ್ಡೆ ಅವರನ್ನು ಭೇಟಿ ಮಾಡಿ ಆದಷ್ಟು ಜಾಗ್ರತೆ ವರದಿ ಸಲ್ಲಿಸಿ ಹಿಂದುಳಿದ ವರ್ಗಗಳ ಹಿತ ಕಾಯುವಂತೆ ಮನವಿ ಮಾಡಿಕೊಳ್ಳಲಾಯಿತು.
ಮನವಿಪತ್ರ ಸ್ವೀಕರಿಸಿ ಮಾತನಾಡಿದ ಹೆಗ್ಡೆಯವರು ಮುಂದಿನ ತಿಂಗಳು ತಮ್ಮ ಅಧ್ಯಕ್ಷ ಅವಧಿ ಮುಗಿಯಲಿದ್ದು ಅಷ್ಟರ ಒಳಗೆ ವರದಿ ಸಲ್ಲಿಸಲಾಗುವುದು, ಇದಕ್ಕೆ ಸಕಾ೯ರದಿಂದ ಯಾವುದೇ ಒತ್ತಡವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಮಾಜಿ ಶಾಸಕ ಆರ್.ಕೆ. ಸಿದ್ಧರಾಮಣ್ಣ ಹಿಂದುಳಿದ ಜನ ಜಾಗೃತಿ ವೇದಿಕೆ ಗೌರವ ಅಧ್ಯಕ್ಷ ಪ್ರೊ. ಹೆಚ್. ರಾಚಪ್ಪ, ಉಪಾಧ್ಯಕ್ಷರುಗಳಾದ ಡಿ.ಆರ್. ಉಮೇಶ್ ಯಾದವ್ ಜಿ. ಪರಮೇಶ್ವರಪ್ಪ ಕಾಯ೯ದಶಿ೯ ಮನೋಹರಕುಮಾರ್ ಸಂಚಾಲಕ ಆರ್.ಟಿ. ನಟರಾಜ್ ಹಿಂದುಳಿದ ಜಾತಿಗಳ ಒಕ್ಕೂಟದ ಗೌರವ ಅಧ್ಯಕ್ಷ ಪಿ.ಆರ್. ಗಿರಿಯಪ್ಪ ಅಧ್ಯಕ್ಷ ವಿ. ರಾಜು ಉಪಸ್ಥಿತರಿದ್ದರು.
Backward Classes Commission ಕಾಂತರಾಜ ಆಯೋಗದ ವರದಿಯನ್ನು ಆದಷ್ಟು ಜಾಗ್ರತೆ ಜಾರಿಗೊಳಿಸುವಂತೆ ಒತ್ತಾಯಿಸಿ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಅವರ ಆಪ್ತ ಕಾಯ೯ದಶಿ೯ಗಳಿಗೆ ಮನವಿ ಅಪಿ೯ಸಲಾಯಿತು.