Health Department ಪಾಶ್ವ ವಾಯು ಮತ್ತು ಹೃದಯಾಘಾತಕ್ಕೆ ಒಳಗಾದವರನ್ನು ಪ್ರಾಣಪಾಯದಿಂದ ಪಾರು ಮಾಡಲು ಅಗತ್ಯವಿರುವ ದುಬಾರಿ ಮಿಲಿಯ ಚುಚ್ಚುಮದ್ದುಗಳು ಶೀಘ್ರದಲ್ಲೇ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಸಿಗಲಿವೆ.
ಪ್ರಾರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡುವ ಜೊತೆಗೆ ಸೂಕ್ತ ಚಿಕಿತ್ಸೆ ಒದಗಿಸುವುದು ಹೀಗಾಗಿ ವಿಶೇಷವಾಗಿ ಔಷಧ ಚುಚ್ಚುಮದ್ದು ಒದಗಿಸಲು ಕ್ರಮವಹಿಸಲಾಗಿದೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.
ಪಾರ್ಶ್ವಮಾಯುನಿಂದ ಅಂಗಾಂಗ ವೈಫಲ್ಯ ಹಾಗೂ ಮರಣ ಸಂಭವಿಸುವ ಸಾಧ್ಯತೆ ಇರುತ್ತದೆ. ಅದೇ ರೀತಿ ಹೃದಯಾಘಾತಕ್ಕೆ ಒಳಗಾದವರಿಗೆ 90 ನಿಮಿಷದೊಳಗೆ ಅಗತ್ಯ ಚಿಕಿತ್ಸೆ ಸಿಗದಿದ್ದರೆ ಮೃತಪಡುವ ಸಂಭವ ಇರುತ್ತದೆ.
Health Department ಆದ್ದರಿಂದ ಪಾರ್ಶ್ವ ವಾಯು ನಿರ್ವಹಣೆಗೆ ಅಗತ್ಯವಿರುವ 60 ಸಾವಿರ ರೂಪಾಯಿ ದರದ ಆರ್ ಟಿ ಪ್ಲಸ್ ಚುಚ್ಚುಮದ್ದು ಹೃದಯಾಘಾತ ನಿರ್ವಹಣೆಗೆ 40 ಸಾವಿರ ದರದ ಟೆನೆಕ್ಟ್ ಪ್ಲಸ್ ಚುಚ್ಚುಮದ್ದನ್ನ ತಾಲೂಕು ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತದೆ. ಈಗಾಗಲೇ ಇಲಾಖೆಯು ಚುಚ್ಚುಮದ್ದು ಖರೀದಿ ಪ್ರಕ್ರಿಯೆ ಕೈಗೊಂಡಿದೆ ಎಂದು ತಿಳಿದುಬಂದಿದೆ.