Navaratri Festival ” ಏಕವೇಣೀ ಜಪಾಕರ್ಣ ಪೂರಾ ನಗ್ನಾ
ಸ್ವರಾಸ್ಥಿತಾ/
ಲಂಬೋಷ್ಠೀ ಕರ್ಣಿಕಾಕರ್ಣಿ ತೈಲಾಭ್ಯಕ್ತಶರಿರಿಣೀ//
ವಾಮಪಾದೋಲ್ಲ ಸಲ್ಲೀಹಲತಾ
ಕಂಟಕ ಭೂಷಣಾ/
ವರ್ಧನ್ಮೂರ್ಧ ಧ್ವಜಾ ಕೃಷ್ಣಾ ಕಾಲರಾತ್ರೀ
ಭಯಂಕರೀ//
Navaratri Festival ಇಂದು ನವರಾತ್ರಿ ಹಬ್ಬದ ಏಳನೆಯದಿನ.
ದುರ್ಗಾಮಾತೆಯ ಏಳನೇ ರೂಪವು ಕಾಲರಾತ್ರಿಯಾಗಿದ್ದು,ದೇವಿಯ ಈ ರೂಪವು ಅಜ್ಞಾನ
ಮತ್ತು ಅಂಧಕಾರಗಳ ನಿವಾರಣೆಗಾಗಿಯೇ ಅವತಾರ
ವೆತ್ತಿದ್ದಾಳೆ ಎಂಬ ನಂಬಿಕೆಯಿದೆ.ರೌದ್ರಾವತಾರ ಮತ್ತು
ತುಂಬಾ ಉಗ್ರ ರೂಪದಲ್ಲಿರುವ ದುರ್ಗಾದೇವಿಯು
ಕಾಲರಾತ್ರಿಯ ರೂಪ ಧರಿಸಿ ರಾಕ್ಷಸರ ವಿರುದ್ಧ ಹೋರಾಡಲು ಹೋಗುತ್ತಾಳೆ.ಈಕೆಯನ್ನು ಶುಭಂಕರಿಯೆಂತಲೂ ಕರೆಯುತ್ತಾರೆ.ಧರ್ಮರಕ್ಷಣೆಗಾಗಿ,
ಧರ್ಮವನ್ನು ಮೀರಿದವರ ಪಾಲಿಗೆ ದೇವಿಯು
ಕಾಲರಾತ್ರಿಯಾಗಿ ಭಯ ಹುಟ್ಟಿಸುವಳು.ಆದರೆ
ಭಕ್ತರ ಪಾಲಿಗೆ ಮಾತ್ರ ಮಾತೃ ಸ್ವರೂಪಿಣಿಯಾದ
ದುರ್ಗಾಮಾತೆಯೇ ಆಗಿರುವಳು.ಭಕ್ತರ ರಕ್ಷಣೆಗಾಗಿಯೇ ಅವತಾರಮಾಡಿರುವ ಈ ದೇವಿಯನ್ನು ಆರಾಧಿಸಿ,ಪೂಜಿಸಿ ಅನುಗ್ರಹ ಪಡೆಯೋಣ.
Navaratri Festival ನವರಾತ್ರಿ-7 ಶ್ರೀದೇವಿಯನ್ನ ಕಾಳರಾತ್ರಿ ರೂಪದ ಆರಾಧನೆ
Date: