Supreme Court ಸಲಿಂಗ ವಿವಾಹ ವಿಚಾರದಲ್ಲಿ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.
ಸಲಿಂಗ ವಿವಾಹಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದಿದೆ.
ಈ ವಿಚಾರದಲ್ಲಿ ಸಂಸತ್ತು ತೀರ್ಮಾನಿಸಬೇಕು ಮತ್ತು ಹೊಸ ವಿವಾಹ ವ್ಯವಸ್ಥೆಯನ್ನು ರಚಿಸುವಂತೆ ಸಂಸತ್ತು ಅಥವಾ ಸರ್ಕಾರವನ್ನು ನಾವು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸಲಿಂಗ ವಿವಾಹ ಮಾನ್ಯತೆಯ ನಿರ್ಧಾರವನ್ನು ನ್ಯಾಯಾಲಯ ಸರ್ಕಾರಕ್ಕೆ ಬಿಟ್ಟಿದೆ.
ಸಲಿಂಗ ದಂಪತಿ ಎನಿಸಿಕೊಂಡವರು ದತ್ತು ಮಕ್ಕಳನ್ನು ಕುರಿತು ಪಂಚ ಸದಸ್ಯ ಪೀಠವು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದೆ.
ಸಿಜೆಐ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿ ಎಸ್.ಕೆ. ಕೌಲ್ ಅವರು ‘ಭಿನ್ನಲಿಂಗೀಯ ದಂಪತಿ ಮಾತ್ರ ಉತ್ತಮ ಪೋಷಕರಾಗಬಹುದು ಎಂದು ಕಾನೂನು ಹೇಳುವುದಿಲ್ಲ. ಸಲಿಂಗ ದಂಪತಿಗೂ ಮಕ್ಕಳನ್ನು ದತ್ತು ಪಡೆಯುವ ಹಕ್ಕಿದೆ,” ಎಂದು ಹೇಳಿದರು.
Supreme Court ಆದರೆ ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್, ಪಿ. ಎಸ್.ನರಸಿಂಹ ಹಾಗೂ ಹಿಮಾ ಕೊಹ್ಲಿ ಅವರು ಇದಕ್ಕೆ ವಿರುದ್ಧವಾದ ನಿಲುವು ವ್ಯಕ್ತಪಡಿಸಿದರು.
ಈ ನಡುವೆ ಯಾವ ಯಾವ ದೇಶಗಳಲ್ಲಿ ಸಲಿಂಗ ವಿವಾಹಕ್ಕೆ ಕಾನೂನ ಮಾನ್ಯತೆ ಇದೆ ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ. ಲಕ್ಷಂಬರ್ಗ್, ದಕ್ಷಿಣ ಆಫ್ರಿಕಾ, ಯುಎಸ್ಎ, ಬ್ರೆಜಿಲ್, ಅರ್ಜೆಂಟೀನಾ, ಬ್ರಿಟನ್, ಡೆನ್ಮಾರ್ಕ್,ಐಸ್ಲ್ಯಾಂಡ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಐರ್ಲೆಂಡ್ ಮತ್ತು ಕೆನಡಾ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಪೋರ್ಚುಗಲ್, ಉರುಗ್ವೆ, ಸ್ವೀಡನ್, ಸೇರಿದಂತೆ ಸ್ಪೇನ್, ದೇಶಗಳಲ್ಲಿ ಕಾನೂನು ಮಾನ್ಯತೆ ನೀಡಲಾಗಿದೆ